ಕೇರಳ ನಿರಾಶ್ರಿತರಿಗೆ ಕುಡಿಯುವ ನೀರು ರವಾನಿಸಿದ ದಕ್ಷಿಣ ರೈಲ್ವೆ

Published : Aug 18, 2018, 10:50 AM ISTUpdated : Sep 09, 2018, 09:33 PM IST
ಕೇರಳ ನಿರಾಶ್ರಿತರಿಗೆ  ಕುಡಿಯುವ ನೀರು  ರವಾನಿಸಿದ ದಕ್ಷಿಣ ರೈಲ್ವೆ

ಸಾರಾಂಶ

ಎಲ್ಲೆಲ್ಲೂ ನೀರಿದ್ದರೂ ಕುಡಿಯುವುದಕ್ಕೆ ಮಾತ್ರ ನೀರಿಲ್ಲ. ಮಳೆಯಲ್ಲಿ ಮನೆಯೇ ಕೊಚ್ಚಿ ಹೋಗಿದೆ. ಅಗತ್ಯ ವಸ್ತುಗಳು ಇನ್ನೆಲ್ಲಿ? ಅಬ್ಬಾ ಪ್ರಕೃತಿಯ ಈ ಮುನಿಸನ್ನು ಎದುರಿಸುವುದಾದರೂ ಹೇಗೆ? ಇಂಥ ಸಂದರ್ಭಗಳಲ್ಲಿ ಪ್ರತಿಯೊಬ್ಬರೂ ನೀಡುವ ನೆರವು ಅನುಕೂಲಕ್ಕೆ ಬರುತ್ತದೆ. ಭಾರತೀಯ ದಕ್ಷಿಣ ರೈಲ್ವೆ ಪರಿಸ್ಥತಿಗೆ ಸ್ಪಂದಿಸಿದ್ದು ಹೀಗೆ.

ಚೆನ್ನೈ: ಕೇರಳದಲ್ಲಿ ಮಳೆಗೆ ಸಿಲುಕಿ ಕುಡಿಯುವ ನೀರಿಗೂ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ನಿರಾಶ್ರಿತರಿಗೆ ದಕ್ಷಿಣ ರೈಲ್ವೆಯು ಶುಕ್ರವಾರ ಮೂರು ವಿಶೇಷ ರೈಲುಗಳಲ್ಲಿ ಕುಡಿಯುವ ನೀರನ್ನು ರವಾನಿಸಿದೆ. ಅದಷ್ಟೇ ಅಲ್ಲದೆ ಇತರ ರೈಲುಗಳ ಮುಖಾಂತರವಾಗಿ 1 ಲಕ್ಷಕ್ಕೂ ಅಧಿಕ ನೀರಿನ ಬಾಟಲಿಗಳನ್ನು ಕಳುಹಿಸಲಾಗಿದೆ. 7 ಓಪನ್‌ ವ್ಯಾಗನ್‌ಗಳಿರುವ 2.8 ಲಕ್ಷ ಲೀಟರ್‌ ನೀರು ಭರ್ತಿಯಾಗಿರುವ ವಿಶೇಷ ರೈಲು ಶುಕ್ರವಾರ 4 ಗಂಟೆಗೆ ಇರೋಡ್‌ ಜಂಕ್ಷನ್‌ನಿಂದ ತೆರಳಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

 

ಕೇರಳದಲ್ಲಿ ಪ್ರವಾಹ ಸ್ಥಿತಿಗೆ ಅಲ್ಲಿನ ಜನ ತತ್ತರಿಸಿದ್ದು, ಈಗಾಗಲೇ 173 ಮಂದಿ ಸಾವಿಗೀಡಾಗಿದ್ದಾರೆ, ಸಾವಿರಾರು ಎಕರೆ ಬೆಳೆ ನಾಶವಾಗಿದೆ.

ಕೇರಳ ಪ್ರವಾಹ: ಮೋದಿ ಪರಿಶೀಲನೆ

ಕರ್ನಾಟಕದ ಕೊಡಗಿನಲ್ಲಿಯೂ ಪರಿಸ್ಥಿತಿ ಇದಕ್ಕಿಂತ ವಿಭಿನ್ನವಾಗಿಲ್ಲ. ಎಲ್ಲೆಡೆಯಿಂದ ನೆರವಿನ ಮಹಾಪೂರವೇ ಹರಿದು ಬಂದಿದ್ದು, ಸಹಕರಿಸುವವರು ಸುವರ್ಣ ನ್ಯೂಸ್‌ ಕಚೇರಿಯನ್ನು ಸಂಪರ್ಕಿಸಬಹುದು.

ನೀವೂ ನೆರವಾಗಿ

ಕೇರಳ ಮತ್ತು ಕೊಡಗು ನೆರೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!