ಭಾರತದಲ್ಲಿ ವಾಸಕ್ಕೆ ಯೋಗ್ಯವಾದ ನಗರಗಳ್ಯಾವು..?

Published : Aug 14, 2018, 08:47 AM ISTUpdated : Sep 09, 2018, 10:01 PM IST
ಭಾರತದಲ್ಲಿ  ವಾಸಕ್ಕೆ ಯೋಗ್ಯವಾದ ನಗರಗಳ್ಯಾವು..?

ಸಾರಾಂಶ

ದೇಶದ ಅತ್ಯಂತ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಗ್ರ 10 ಸ್ಥಾನದಲ್ಲಿ ಕರ್ನಾಟಕದ ಯಾವುದೇ ನಗರಗಳಿಗೂ ಕೂಡ ಸ್ಥಾನವಿಲ್ಲ. ಆದರೆ ಪುಣೆಯೂ ಅತ್ಯಂತ ಬೆಸ್ಟ್ ಸಿಟಿ ಎನಿಸಿಕೊಂಡಿದೆ. 

ನವದೆಹಲಿ :  ದೇಶದ 111 ನಗರಗಳನ್ನು ಸಮೀಕ್ಷೆಗೆ ಒಳಪಡಿಸಿ ‘ವಾಸಯೋಗ್ಯ ನಗರ’ಗಳ ಸೂಚ್ಯಂಕವನ್ನು ಇದೇ ಮೊದಲ ಬಾರಿ ಭಾರತ ಸರ್ಕಾರ ಸಿದ್ಧಪಡಿಸಿದ್ದು, ಇದರಲ್ಲಿ ಪುಣೆ ‘ಅತ್ಯಂತ ವಾಸಯೋಗ್ಯ ನಗರಿ’ ಎಂಬ ಖ್ಯಾತಿಗೆ ಪಾತ್ರವಾಗಿದೆ. ನವೀ ಮುಂಬೈ 2 ಹಾಗೂ ಗ್ರೇಟರ್‌ ಮುಂಬೈ 3ನೇ ಸ್ಥಾನ ಪಡೆದುಕೊಂಡಿವೆ. ಮೊದಲ ಮೂರೂ ಸ್ಥಾನಗಳು ಮಹಾರಾಷ್ಟ್ರದ ಪಾಲಾಗಿವೆ ಎಂಬುದು ವಿಶೇಷ. ಟಾಪ್‌ 10ರಲ್ಲಿ ಕರ್ನಾಟಕದ ಯಾವುದೇ ನಗರಗಳು ಸ್ಥಾನ ಪಡೆಯಲು ವಿಫಲವಾಗಿವೆ.

ಇದೇ ವೇಳೆ, ಉತ್ತರಪ್ರದೇಶದ ರಾಂಪುರ ಕಟ್ಟಕಡೆಯ 111ನೇ ಸ್ಥಾನ ಪಡೆದಿದೆ. ಇನ್ನು ಬೆಂಗಳೂರು 54 ಹಾಗೂ ರಾಷ್ಟ್ರ ರಾಜಧಾನಿ ನವದೆಹಲಿ 65, ಚೆನ್ನೈ 14ನೇ ಸ್ಥಾನ ಪಡೆದಿದೆ. ಈ ಸ್ಪರ್ಧೆಯಲ್ಲಿ ಕೋಲ್ಕತಾ ಭಾಗಿಯಾಗಿರಲಿಲ್ಲ ಎಂದು ಪಟ್ಟಿಬಿಡುಗಡೆ ಮಾಡಿದ ನಗರಾಭಿವೃದ್ಧಿ ಸಚಿವ ಹರ್ದೀಪ್‌ ಪುರಿ ತಿಳಿಸಿದರು.

ಮಂಗಳೂರು ನಂ.1 ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ನಗರಗಳು ಮೊದಲ 10ರಲ್ಲಿ ಸ್ಥಾನ ಪಡೆಯಲು ವಿಫಲವಾಗಿವೆ. ಆದರೆ ದೇಶದಲ್ಲಿ 41ನೇ ಸ್ಥಾನ ಪಡೆದಿರುವ ಮಂಗಳೂರು, ಕರ್ನಾಟಕದ ಮಟ್ಟಿಗೆ ಅತ್ಯಂತ ವಾಸಯೋಗ್ಯ ನಗರವಾಗಿ ಹೊರಹೊಮ್ಮಿದೆ. ಇನ್ನು ಬೆಳಗಾವಿಯು ದೇಶದಲ್ಲಿ 52ನೇ ಸ್ಥಾನ ಪಡೆದಿದ್ದು, ರಾಜ್ಯದಲ್ಲಿ 2ನೇ ಸ್ಥಾನ ಪಡೆದಿದೆ. ಬೆಂಗಳೂರು 54ನೇ ಸ್ಥಾನ ಅಲಂಕರಿಸುವ ಮೂಲಕ ರಾಜ್ಯದಲ್ಲಿ 3ನೇ ಸ್ಥಾನ ಪಡೆದಿದೆ.

ಟಾಪ್‌ 10: ಪುಣೆ, ನವೀ ಮುಂಬೈ, ಗ್ರೇಟರ್‌ ಮುಂಬೈ, ತಿರುಪತಿ, ಚಂಡೀಗಢ, ಥಾಣೆ, ರಾಯ್‌ಪುರ, ಇಂದೋರ್‌, ಭೋಪಾಲ್‌ ಹಾಗೂ ವಿಜಯವಾಡ ಟಾಪ್‌ 10 ವಾಸಯೋಗ್ಯ ನಗರಗಳಾಗಿ ಹೊರಹೊಮ್ಮಿವೆ.

ವಾರಣಾಸಿ 33, ಅಹಮದಾಬಾದ್‌ 23 ಹಾಗೂ ಹೈದರಾಬಾದ್‌ 27, ಶ್ರೀನಗರ 100, ಜಮ್ಮು 95, ಪಣಜಿ 90, ಅಲಿಗಢ 86, ಗುಡಗಾಂವ್‌ 88, ಮೇರಠ್‌ 101, ಗಾಜಿಯಾಬಾದ್‌ 46, ರಾಯ್‌ಬರೇಲಿ 49ನೇ ಸ್ಥಾನದಲ್ಲಿವೆ. ತೆಲಂಗಾಣದ ಕರೀಂನಗರ 11, ತಮಿಳುನಾಡಿನ ತಿರುಚಿರಾಪಳ್ಳಿ 12, ಛತ್ತೀಸ್‌ಗಢದ ಬಿಲಾಸ್‌ಪುರ 13ನೇ ಸ್ಥಾನ ಪಡೆದಿವೆ.

ಉತ್ತರಪ್ರದೇಶದ ರಾಂಪುರ, ನಾಗಾಲ್ಯಾಂಡ್‌ನ ಕೊಹಿಮಾ, ಬಿಹಾರದ ಪಟನಾ, ಬಿಹಾರ್‌ ಶರೀಫ್‌, ಭಾಗಲ್ಪುರ, ಇಟಾನಗರ, ಪಾಸಿಘಾಟ್‌, ಕವರಟ್ಟಿ, ಸಹಾರನ್‌ಪುರ, ಸಿಲ್ವಾಸಾ ಇವು ಕಟ್ಟಕಡೆಯ 10 ಸ್ಥಾನ ಪಡೆದು ಕಳಪೆ ಸಾಧನೆ ತೋರಿವೆ.

ಮಾನದಂಡ ಏನು?

ಆಡಳಿತ, ಸಾಮಾಜಿಕ ಪರಿಸ್ಥಿತಿ, ಆರ್ಥಿಕ ಪರಿಸ್ಥಿತಿ, ಮೂಲಸೌಕರ್ಯ- ಈ ಮಾನದಂಡಗಳನ್ನು ಇರಿಸಿಕೊಂಡು 111 ನಗರಗಳಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ವಾಸಯೋಗ್ಯ ನಗರಗಳ ಸಮೀಕ್ಷೆ ನಡೆಸಿತ್ತು.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!