ಲೋಕಸಭಾ ಚುನಾವಣೆ : ಕಾಂಗ್ರೆಸ್ ಭವಿಷ್ಯ ನುಡಿದ ಮುಖಂಡ !

Published : Jan 30, 2019, 03:14 PM IST
ಲೋಕಸಭಾ ಚುನಾವಣೆ : ಕಾಂಗ್ರೆಸ್ ಭವಿಷ್ಯ ನುಡಿದ ಮುಖಂಡ !

ಸಾರಾಂಶ

ಇನ್ನೇನು ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ಬಿಜೆಪಿ ಮುಖಂಡ ಕಾಂಗ್ರೆಸ್ ಭವಿಷ್ಯ ನುಡಿದಿದ್ದಾರೆ. ಇನ್ನೆಂದು ಕಾಂಗ್ರೆಸ್ ಗೆಲುವು ಸಾಧ್ಯವಿಲ್ಲ ಎಂದಿದ್ದಾರೆ. 

ನವದೆಹಲಿ : ನಿರಂತರವಾಗಿ ವಿವಾದಾತ್ಮಕ ಹೇಳಿಕೆ ನೀಡುವ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಇದೀಗ ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. 

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಾವಣ ಎಂದು ಕರೆದಿದ್ದು, ಪ್ರಿಯಾಂಕ ಗಾಂಧಿಯನ್ನು ಶೂರ್ಪನಕಿ  ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. 

ಬಲ್ಲಿಯಾ ಕ್ಷೇತ್ರದ ಶಾಸಕ ಸುರೇಂದ್ರ ಸಿಂಗ್ ಇದೇ ವೇಳೆ ಕಾಂಗ್ರೆಸ್ ಪಕ್ಷದ ಚುನಾವಣಾ ಭವಿಷ್ಯವನ್ನೂ ನುಡಿದಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಸಾಧ್ಯವಿಲ್ಲ.  ದೇಶದಲ್ಲಿ ಇನ್ನೆಂದು ಕಾಂಗ್ರೆಸ್ ಅಧಿಕಾರಕ್ಕೆ ಬರಲಾಗುವುದಿಲ್ಲ ಎಂದಿದ್ದಾರೆ. 

ಅಲ್ಲದೇ ರಾವಣನ ವಿರುದ್ಧ ಶ್ರೀರಾಮ ಈಗಾಗಲೇ ಯುದ್ಧವನ್ನು  ಆರಂಭ ಮಾಡುತ್ತಿದ್ದಾನೆ. ರಾಮನಿಗೆ ಎದುರಾಳಿಯಾಗಿ ರಾವಣ ಮೊದಲು ಕಳಿಸಿದ್ದೆ ತನ್ನ ಸಹೋದರಿ ಶೂರ್ಪನಕಿಯನ್ನು.

ಮುಂದಿನ ಲೋಕಸಭಾ ಚುನಾವಣಾ ಕಣದಲ್ಲಿ ರಾಹುಲ್ ಗಾಂಧಿ ರಾವಣನಾಗಿದ್ದು, ಶೂರ್ಪನಕಿಯಾಗಿ ಪ್ರಿಯಾಂಕ ಮುಂದೆ ಬಿಟ್ಟಿದ್ದಾರೆ.  ಮೋದಿ ರಾಮನಾಗಿ ಹೋರಾಟಕ್ಕೆ ಇಳಿಯುತ್ತಾರೆ ಎಂದು ಹೇಳಿದ್ದಾರೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!