ಸಂಜಯ್ ದತ್‌ ಸೋದರಿಗಿಲ್ಲ ಈ ಬಾರಿ ಕಾಂಗ್ರೆಸ್ ಟಿಕೆಟ್

Published : Oct 03, 2018, 03:16 PM ISTUpdated : Oct 03, 2018, 04:03 PM IST
ಸಂಜಯ್ ದತ್‌ ಸೋದರಿಗಿಲ್ಲ ಈ ಬಾರಿ ಕಾಂಗ್ರೆಸ್ ಟಿಕೆಟ್

ಸಾರಾಂಶ

ಲೋಕಸಭಾ ಚುನಾವಣೆಗೆ ಈಗಾಗಲೇ ಭರದಿಂದ ಸಿದ್ಧತೆ ನಡೆಯುತ್ತಿದೆ. ಪ್ರತಿ ಪಕ್ಷಗಳಿಂದಲೂ ಸ್ಪರ್ಥಿಗಳಿಂದಲೂ ಆರಿಸುತ್ತಿದ್ದು, ವಿವಿಧ ಕಾರಣಗಳಿಂದ ಪ್ರಯಾ ದತ್‌ಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಏಕೆ? ಈ ಸ್ಥಾನದಲ್ಲಿ ಯಾರು ನಿಲ್ಲುತ್ತಾರೆ?

ನವದೆಹಲಿ: ಬಾಲಿವುಡ್ ನಟ ಸಂಜಯ್ ದತ್ ಸೋದರಿ ಪ್ರಿಯಾದತ್ 2 ಬಾರಿ ಪ್ರತಿನಿಧಿಸಿದ್ದ ಮುಂಬೈ ಉತ್ತರ-ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಈ ಬಾರಿ ಚಿತ್ರ ನಟಿ ನಗ್ಮಾ ಅವರ ಪಾಲಾ ಗುವ ಸಾಧ್ಯತೆ ಇದೆ. 8 ವರ್ಷಗಳಿಂದ ಎಐಸಿಸಿ ಕಾರ್ಯದರ್ಶಿ ಸ್ಥಾನದಲ್ಲಿದ್ದ ಪ್ರಿಯಾ ಅವರನ್ನು ಕಳೆದ ವಾರ ಪಕ್ಷ ವಜಾಗೊಳಿಸಿದೆ. ಇದಾದ ಬೆನ್ನಲ್ಲೇ ಮುಂಬೈ ಉತ್ತರ ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಸಭೆಯಲ್ಲಿ ನಗ್ಮಾ ಕಾಣಿಸಿಕೊಂಡಿದ್ದಾರೆ.ಪ್ರಿಯಾ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ಒಲವಿಲ್ಲದ ಕಾರಣ ಅವರ ಕ್ಷೇತ್ರದಲ್ಲಿ ನಗ್ಮಾ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ. ಕಾಂಗ್ರೆಸ್ಸಿನ ಹಿರಿಯ ನಾಯಕ ಹಾಗೂ ಖ್ಯಾತ ಚಿತ್ರನಟರಾಗಿದ್ದ ದಿ.ಸುನೀಲ್ ದತ್ ಪುತ್ರಿ ಎಂಬ ಕಾರಣಕ್ಕೇನಾದರೂಪ್ರಿಯಾಗೆ ಟಿಕೆಟ್ ಸಿಕ್ಕಲ್ಲಿ, ಗುರುದಾಸ್ ಕಾಮತ್ ನಿಧನರಾಗಿರುವ ಹಿನ್ನೆಲೆಯಲ್ಲಿ ಅವರು ಸ್ಪರ್ಧಿಸುತ್ತಿದ್ದ ಮುಂಬೈ ವಾಯವ್ಯ ಕ್ಷೇತ್ರದ ಟಿಕೆಟ್ ನಗ್ಮಾಗೆ ಒಲಿಯುವ ಸಂಭವವಿದೆ ಎಂದು ಹೇಳಲಾಗಿದೆ. 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!