ಕಾಂಗ್ರೆಸ್ ಹೈಕಮಾಂಡ್‌ಗೆ ಸಿಧು ಶಾಕ್, ಕುಂದ್ರ ಕೇಸ್‌ಗೆ ಮತ್ತೊಂದು ಟ್ವಿಸ್ಟ್; ಸೆ.28ರ ಟಾಪ್ 10 ಸುದ್ದಿ!

By Suvarna NewsFirst Published Sep 28, 2021, 4:35 PM IST
Highlights

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದಾರೆ. ಇತ್ತ ಮಾಜಿ ಸಿಎಂ ಅಮರಿಂದರ್ ಸಿಂಗ್ ದೆಹಲಿ ತಲುಪಿದ್ದು, ರಾಜಕೀಯ ಬೆಳವಣಿಗೆ ಗರಿಗೆದರಿದೆ. ಕುರ್ಚಿಯಲ್ಲಿ ಕೂತು ಸನ್ಮಾನ ಸ್ವೀಕರಿಸಲು ಬೊಮ್ಮಾಯಿ ನಿರಾಕರಿಸಿದ್ದಾರೆ. ಎಂ.ಎಸ್.ಧೋನಿ ಹೇರ್ ಸ್ಟೈಲ್, ಪೋರ್ನ್ ವಿಡಿಯೋ ದಂಧೆಗೆ ಕುಂದ್ರಾನ ಎಳೆದಿದ್ದೇ ನಟಿ ಶೆರ್ಲಿನ್ ಸೇರಿದಂತೆ ಸೆಪ್ಟೆಂಬರ್ 27ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಪಂಜಾಬ್‌ ಕಾಂಗ್ರೆಸ್‌ಗೆ ಬಿಗ್ ಶಾಕ್: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನವಜೋತ್ ಸಿಂಗ್!

ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ ಎನ್ನುವಷ್ಟರಲ್ಲಿ ಪಂಜಾಬ್‌ ರಾಜಕೀಯ(Punjab Politics) ವಲಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯಲಾರಂಭಿಸಿವೆ. ಹೌದು ಕೆಲ ದಿನಗಳ ಹಿಂದಷ್ಟೇ ಕ್ಯಾಪ್ಟನ್‌ ಅಮರಿಂದರ್ ಸಿಂಗ್(Amarinder Singgh) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಚರಣ್‌ಜಿತ್ ಸಿಂಗ್ ಚನ್ನಿ(Charanjit Singh Channi) ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೀಗ ಈ ಬೆಳವಣಿಗೆ ಬೆನ್ನಲ್ಲೇ ಪ್ರಾದೇಶಿಕ ಕಾಂಗ್ರೆಸ್‌ ಅಧ್ಯಕ್ಷ ನವಜೋತ್ ಸಿಂಗ್ ಸಿಧು(Navjot Singh Sidhu) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಭಾರೀ ಚರ್ಚೆ ಸೃಷ್ಟಿಸಿದೆ. 

ಕುರ್ಚಿಯಲ್ಲಿ ಕೂರಲು ನಿರಾಕರಿಸಿ ನಿಂತೇ ಸನ್ಮಾನ ಸ್ವೀಕರಿಸಿದ ಸಿಎಂ

 ಕೆಎಲ್‌ಇ (KLE) ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj bommai) ಅವರನ್ನು ಸಂಸ್ಥೆಯಲ್ಲಿ ಸನ್ಮಾನಿಸಲಾಯಿತು. 

BJPಯತ್ತ ಅಮರಿಂದರ್ ಸಿಂಗ್? ಅಮಿತ್ ಶಾ, ನಡ್ಡಾ ಭೇಟಿಗಾಗಿ ದೆಹಲಿ ತಲುಪಿದ ಮಾಜಿ ಸಿಎಂ!

 ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಮರಿಂದರ್ ಸಿಂಗ್ ಇದೀಗ ಬಿಜೆಪಿ ಸೇರುವು ಸಾಧ್ಯತೆ ಹೆಚ್ಚಾಗಿದೆ. ಇಂದು(ಸೆ.28) ದೆಹಲಿ ತಲುಪಿರುವ ಅಮರಿಂದರ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಲಿದ್ದಾರೆ.

ಧೋನಿ - ಹೆಟ್ಮೇಯರ್: ಟ್ರೆಂಡ್‌ ಆಗುತ್ತಿರುವ IPLಸ್ಟಾರ್ಸ್ ಹೊಸ ಹೇರ್‌ಸ್ಟೈಲ್‌!

ಪ್ರತಿ ವರ್ಷ ಆಟಗಾರರು ಈ ಲೀಗ್ ಸಮಯದಲ್ಲಿ ಯೂನಿಕ್‌ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಪಟ್ಟಿಯಲ್ಲಿ ದೋನಿ ಯಿಂದ (Dhoni) ಹೆಟ್ಮಿಯರ್ (Hetmeyer) ವರೆಗೆ ಹಲವು ಫೇಮಸ್‌ ಆಟಗಾರರು ಇದ್ದಾರೆ.

ಐಶ್ವರ್ಯಗಾಗಿ ಹೆಲಿಕಾಪ್ಟರ್ ಅಮರ್ ಸಿಂಗ್‌ರನ್ನು ಬಿಟ್ಟು ಹೋದಾಗ ಏನಾಗಿತ್ತು ನೋಡಿ

ಬಹಳ ಹಿಂದೆ ಭಾರತೀಯ ರಾಜಕಾರಣಿ ದಿವಂಗತ ಅಮರ್ ಸಿಂಗ್(Amar Singh) ಅವರು ಬಚ್ಚನ್  ಪರಿವಾರದ  ಐಶ್ವರ್ಯಾ ರೈ (Aishwarya Rai) ಮೇಲೆ ಕೋಪಗೊಂಡಿದ್ದರು ಏಕೆಂದರೆ ಐಶ್ವರ್ಯಾ ರೈ ಅವರ ಹೆಲಿಕಾಪ್ಟರ್ ಅಮರ್‌ ಸಿಂಗ್‌ ಅವರನ್ನು  ಬಿಟ್ಟು ಹೋಗಿತ್ತು. ಮುಂದೆ ಏನಾಯಿತು ಗೊತ್ತಾ?

ಪೋರ್ನ್ ವಿಡಿಯೋ ದಂಧೆಗೆ ಕುಂದ್ರಾನ ಎಳೆದಿದ್ದೇ ನಟಿ ಶೆರ್ಲಿನ್..! ಮತ್ತೊಂದು ಟ್ವಿಸ್ಟ್

ಪೋರ್ನ್ ವಿಡಿಯೋ ದಂಧೆಯಿಂದ ರಾಜ್ ಕುಂದ್ರಾ ಹೇಗೋ ಹೊರಗೆ ಬಂದಿದ್ದಾರೆ. ರಾಜ್ ಕುಂದ್ರಾ(Raj kundra) ಜೊತೆಗೆ ಶೆರ್ಲಿನ್ ಚೋಪ್ರಾ ಹಾಗೂ ಗೆಹನಾ ವಸಿಷ್ಠ(Gehana Vasisth) ಹೆಸರೂ ಕೇಳಿ ಬಂದಿದೆ. ಈಗ ಗೆಹನಾ ಕೊಟ್ಟಿರೋ ಹೇಳಿಕೆಯೊಂದು ವೈರಲ್ ಆಗಿದೆ

30 ವರ್ಷ ಹಿಂದೆ ತಾವು ಕೂಲಿ ಕೆಲಸ ಮಾಡಿದ್ದ ಊರಿಗೆ ರವಿ ಚನ್ನಣ್ಣನವರ್‌ ಭೇಟಿ

ಕರ್ನಾಟಕದ ದಕ್ಷ, ಪ್ರಾಮಾಣಿಕ ಐಪಿಎಸ್‌ (IPS) ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ರವಿ ಡಿ. ಚನ್ನಣ್ಣನವರ್‌ (Ravi D channannanavar) ಶನಿವಾರ ಕುಕ್ಕೆ ಸುಬ್ರಹ್ಮಣ್ಯ (Kukke Subhramanya Temple) ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

RSSನ್ನು ತಾಲಿಬಾನ್‌ಗೆ ಹೋಲಿಕೆ: ಜಾವೆದ್ ಅಖ್ತರ್‌ಗೆ ಕಂಟಕ!

ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು(RSS) ತಾಲಿಬಾನ್(Taliban) ಗೆ ಹೋಲಿಸಿದ ಸಾಹಿತಿ ಜಾವೇದ್ ಅಖ್ತರ್‌ಗೆ(Javed Akhtar) ಇದೀಗ ಹೊಸ ತಲೆನೋವು ಆರಂಭವಾಗಿದೆ. 

ಸ್ಕಾಲರ್‌ಶಿಪ್ ಆರಂಭಿಸಿದ ಸೋನು ಸೂದ್, ಯಾರೆಲ್ಲ ಅರ್ಹರು ಚೆಕ್ ಮಾಡ್ಕೊಳ್ಳಿ

ನಟ ಸೋನು ಸೂದ್(Sonu Sood) ಕಚೇರಿಗಳ ಮೇಲೆ ಇತ್ತೀಚೆಗಷ್ಟೇ ಐಟಿ ದಾಳಿ(IT Raid) ನಡೆದಿತ್ತು. ಆದರೆ, ಅದಾವುದು ತಮ್ಮ ಜನಪರ ಕಾರ್ಯಕ್ರಮಗಳಿಗೆ ಅಡ್ಡಿಯಾಗಲ್ಲ ಎಂಬಂತೆ ಅವರು ಹಲವು ಸ್ಕಾಲರ್‌ಶಿಪ್‌ಗಳನ್ನು(Scholarship) ಆರಂಭಿಸಿದ್ದಾರೆ. ಆ ಮೂಲಕ ಅರ್ಹ ಹಾಗೂ ಬಡವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವಿಗೆ ಮುಂದಾಗಿದ್ದಾರೆ. ಕೋವಿಡ್ ಉಚ್ಚ್ರಾಯ ಸ್ಥಿತಿಯಲ್ಲಿ ಸಾಕಷ್ಟು ವಲಸೆ ಕಾರ್ಮಿಕರಿಗೆ ನೆರವಾಗುವ ಮೂಲಕ ಅವರು ಹೆಸರುವಾಸಿಯಾಗಿದ್ದರು.

click me!