ಮುಲ್ಲಪೆರಿಯಾರ್‌ ಅಣೆಕಟ್ಟಿನಲ್ಲಿ ಬಿರುಕು ವದಂತಿ, ಆತಂಕ

By Web DeskFirst Published Aug 18, 2018, 11:23 AM IST
Highlights

ಅಬ್ಬಾ, ಬಿಡುವು ನೀಡದೇ ವರುಣ ತೋರುತ್ತಿರುವ ಆರ್ಭಟಕ್ಕೆ ಕೇರಳದ ಜನತೆ ತಲ್ಲಣಗೊಂಡಿದ್ದಾರೆ. ಈ ಹೊತ್ತಲ್ಲೇ, ಮುಲ್ಲಪೆರಿಯಾರ್‌ ಅಣೆಕಟ್ಟು ಬಿರುಕು ಬಿಟ್ಟಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಈ ಸುದ್ದಿಯ ಬಗ್ಗೆ ಕೇರಳ ಸಿಎಂ ನೀಡಿರುವ ಸ್ಪಷ್ಟನೆ ಇಲ್ಲಿದೆ.

ಚೆನ್ನೈ: ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮುಲ್ಲಪೆರಿಯಾರ್‌ ಜಲಾಶಯ ಬಿರುಕುಬಿಟ್ಟಿದೆ ಎಂಬ ವದಂತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗಿದೆ. ಆದರೆ, ಈ ಸುದ್ದಿ ಆಧಾರ ರಹಿತ ಎಂದು ಕೇರಳ ಸರ್ಕಾರ ಸ್ಪಷ್ಟನೆ ನೀಡಿದೆ.

ಜಲಾಶಯ ಭದ್ರವಾಗಿದ್ದು ಯಾವುದೇ ಧಕ್ಕೆ ಉಂಟಾಗಿಲ್ಲ. ವದಂತಿ ಹಬ್ಬಿಸಿ ಪೆರಿಯಾರ್‌ ಜಲಾನಯನ ಪ್ರದೇಶದಲ್ಲಿ ಇರುವ ಜನರಲ್ಲಿ ಅನಗತ್ಯ ಆತಂಕ ಸೃಷ್ಟಿಸಲಾಗುತ್ತಿದೆ ಎಂದು ಕೇರಳ ಜಲಸಂಪನ್ಮೂಲ ಸಚಿವ ಸಚಿವ ಟಿಂಕು ಬಿಸ್ವಾಲ್‌ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್‌ ಸೆಲ್‌ಗೆ ಸೂಚನೆ ನೀಡಿದ್ದಾರೆ.

ಇದೇ ವೇಳೆ ತಮಿಳುನಾಡು ಸರ್ಕಾರ ಕೂಡ ಮುಲ್ಲಪೆರಿಯಾರ್‌ ಜಲಾಶಯಕ್ಕೆ ಯಾವುದೇ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದೆ.

click me!