ಗುದನಾಳದಲ್ಲಿ 1 ಕೆ.ಜಿ. ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

Published : Sep 15, 2018, 09:12 AM ISTUpdated : Sep 19, 2018, 09:26 AM IST
ಗುದನಾಳದಲ್ಲಿ 1 ಕೆ.ಜಿ. ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಸಾರಾಂಶ

ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುದದ್ವಾರದಲ್ಲಿ ಕೆಜಿ ಚಿನ್ನವನ್ನು ಕಳ್ಳ ಸಾಗಣೆ ಮಾಡುತ್ತಿದ್ದವನನ್ನು ಬಂಧಿಸಲಾಗಿದೆ.

ನವದೆಹಲಿ: ಒಂದು ಕೆ.ಜಿ. ಚಿನ್ನವನ್ನು ಗುದನಾಳದಲ್ಲಿ ಹುದುಗಿಸಿ ಕಳ್ಳಸಾಗಣೆಗೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ದುಬೈನಿಂದ ಆಗಮಿಸಿದ 24 ವರ್ಷದ ಪ್ರಯಾಣಿಕನನ್ನು ತಪಾಸಣೆ ಮಾಡಿದಾಗ 1.04 ಕೆ.ಜಿ. ಚಿನ್ನವನ್ನು ಗುದನಾಳದಲ್ಲಿ ಹುದುಗಿಸಿ ಇಟ್ಟಿರುವುದು ತಿಳಿದುಬಂದಿದೆ. ಆತನ್ನು ಬಂಧಿಸಿ 32 ಲಕ್ಷ ರು. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಫ್ರಾನ್ಸ್‌ನ ನಾಗರಿಕ ಹಾಗೂ ಭಾರತದ ವ್ಯಕ್ತಿಯೊಬ್ಬನನ್ನು ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.

ಅವರನ್ನು ತಪಾಸಣೆ ನಡೆಸಿದ ವೇಳೆ ಬ್ಯಾಗ್‌ನಲ್ಲಿ 1.5 ಕೆ.ಜಿ. ತೂಕದ ಚಿನ್ನದ ಬಿಸ್ಕೆಟ್‌ ಹಾಗೂ ಒಂದು ಚಿನ್ನದ ಗಟ್ಟಿಲಭ್ಯವಾಗಿದೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!