ಪ್ರಧಾನಿ ಭೇಟಿಗೆ ಅವಕಾಶ ಪಡೆದ ಕೇರಳ ಮುಖ್ಯಮಂತ್ರಿ

By Kannadaprabha NewsFirst Published Jul 15, 2018, 11:38 AM IST
Highlights

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕೋರಿಕೆಯನ್ನು 4 ಸಲ ನಿರಾಕರಿಸುತ್ತಲೇ ಬಂದಿದ್ದ ಪ್ರಧಾನಮಂತ್ರಿ ಕಚೇರಿ, ಇದೀಗ ಮೋದಿ ಅವರ ಭೇಟಿಗೆ ಅವಕಾಶ ಕಲ್ಪಿಸಿದೆ. 
 

ತಿರುವನಂತಪುರ: ರಾಜ್ಯದ ಅಭಿವೃದ್ಧಿ ಸೇರಿದಂತೆ ಇತರ ವಿಚಾರಗಳ ಕುರಿತ ಚರ್ಚೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಮಾಡಬೇಕು ಎಂಬ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕೋರಿಕೆಯನ್ನು 4 ಸಲ ನಿರಾಕರಿಸುತ್ತಲೇ ಬಂದಿದ್ದ ಪ್ರಧಾನಮಂತ್ರಿ ಕಚೇರಿ, ಇದೀಗ ಮೋದಿ ಅವರ ಭೇಟಿಗೆ ಅವಕಾಶ ಕಲ್ಪಿಸಿದೆ. 

ಸದ್ಯ ಎರಡು ವಾರಗಳ ಅಮೆರಿಕ ಪ್ರವಾಸದಲ್ಲಿರುವ ವಿಜಯನ್ ಅವರು ಜು.18 ಕ್ಕೆ ತಾಯ್ನಾಡಿಗೆ ಆಗಮಿಸಲಿದ್ದಾರೆ. ಬಳಿಕ ಸರ್ವಪಕ್ಷದ ನಿಯೋಗದ ಜತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಜಯನ್ ಅವರು ಭೇಟಿ ಯಾಗಲಿದ್ದಾರೆ. 

click me!