ಕಾಂಗ್ರೆಸ್ ಪಡೆಗೆ ಮಾಜಿ ಸಿಎಂ ಗುಡ್ ಬೈ : ಮುಂದಿನ ನಡೆ ಎತ್ತ..?

Published : Feb 26, 2019, 08:20 AM IST
ಕಾಂಗ್ರೆಸ್ ಪಡೆಗೆ ಮಾಜಿ ಸಿಎಂ ಗುಡ್ ಬೈ : ಮುಂದಿನ ನಡೆ ಎತ್ತ..?

ಸಾರಾಂಶ

ಕಾಂಗ್ರೆಸ್ ಪಡೆಯನ್ನು ತ್ಯಜಿಸಿ ತಮ್ಮ ಮುಂದಿನ ರಾಜಕೀಯ ಹೆಜ್ಜೆಯನ್ನು ಇರಿಸುವತ್ತ ಮಾಜಿ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ನಿರ್ಧಾರ ಮಾಡುತ್ತಿದ್ದಾರೆ. 

ಪಟನಾ: ಜೆಡಿಯು- ಬಿಜೆಪಿ ಮಿತ್ರಕೂಟ ಎದುರಿಸಲು ಬಿಹಾರದಲ್ಲಿ ಆರ್‌ಜೆಡಿ- ಕಾಂಗ್ರೆಸ್ ಮಾಡಿಕೊಂಡ ‘ಮಹಾಗಠ ಬಂಧನ’ ವನ್ನು ಮಾಜಿ ಸಿಎಂ ಜೀತನ್ ರಾಂ ಮಾಂಝಿ ಅವರ ಪಕ್ಷ ತೊರೆಯುವ ಸಾಧ್ಯತೆ ಇದೆ. 

ಲೋಕ ಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಕ್ಕೆ ಆರ್‌ಜೆಡಿ- ಕಾಂಗ್ರೆಸ್ ಬಳಿಕ ಮಾಂಝಿ ನೇತೃತ್ವದ  ಹಿಂದುಸ್ತಾನ್ ಅವಾಮ್ ಮೋರ್ಚಾ ಬೇಡಿಕೆ ಇಟ್ಟಿದೆ. ಇದು ಈಡೇರದಿದ್ದಲ್ಲಿ ಅವರು ಮೈತ್ರಿ ತೊರೆದು, ಎನ್‌ಡಿಎಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. 

ಇದಕ್ಕೆ ಇಂಬು ನೀಡುವಂತೆ ಮಾಂಝಿ ಎನ್‌ಡಿಎಗೆ ಬಂದರೆ, ಸೀಟು ಹಂಚಿಕೆ ಸೂತ್ರವನ್ನು ಮರುವಿನ್ಯಾಸ ಗೊಳಿಸಿ, ಅವರ ಪಕ್ಷಕ್ಕೂ ಅವಕಾಶ ನೀಡ ಲಾಗುವುದು ಎಂದು ಜೆಡಿಯು ರಾಜ್ಯಾಧ್ಯಕ್ಷ ವಸಿಷ್ಠ ನಾರಾಯಣ ಸಿಂಗ್ ತಿಳಿಸಿದ್ದಾರೆ. ಬಿಜೆಪಿ ಕೂಡ ಮಾಂಝಿಗೆ ಸ್ವಾಗತ ಎಂದಿದ್ದಾರೆ. 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!