ಓದಲೇಬೇಕಾದ ಗಾಂಧೀಜಿಯ 10 ಪುಸ್ತಕಗಳು

By Web DeskFirst Published Oct 2, 2018, 12:09 PM IST
Highlights

'ಮೈ ಎಕ್ಸ್‌ಪಿರಿಮೆಂಟ್ಸ್ ವಿಥ್ ಟ್ರುತ್' ಗಾಂಧಿಯ ಆತ್ಮ ಚರಿತ್ರೆ. ಸತ್ಯದೊಂದಿಗೆ ಅವರ ಹೋರಾಟ ಸರ್ವಕಾಲಕ್ಕೂ ಸ್ಫೂರ್ತಿ. ಸ್ವತಃ ಪತ್ರಕರ್ತರಾಗಿದ್ದ ಗಾಂಧಿ ಅನೇಕ ಪುಸ್ತಕಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ 10 ಬೆಸ್ಟ್ ಪುಸ್ತಕಗಳಿವು.

1. ಮೈ ಎಕ್ಸ್‌ಪರಿಮೆಂಟ್ಸ್ ವಿದ್ ಟ್ರುಥ್
ಗಾಂಧೀಜಿಯ ಆತ್ಮಕತೆ. ಅವರ ಬದುಕು, ಜೀವನದ ಘಟನೆಗಳು, ಸತ್ಯದೊಂದಿಗಿನ ಅವರ ಪ್ರಯೋಗಗಳನ್ನು ಬಿಡಿ ಬಿಡಿಯಾಗಿ ಓದಿಕೊಳ್ಳುವುದಕ್ಕಿಂತ ಇಡಿಯಾಗಿ ಈ ಕೃತಿಯಲ್ಲಿ ಓದಿದರೆ ಗಾಂಧಿ ಹೆಚ್ಚು ದಕ್ಕುತ್ತಾರೆ.

2. ಹಿಂದ್ ಸ್ವರಾಜ್
ಮೊದಲು ಗುಜರಾತಿ ಭಾಷೆಯಲ್ಲಿ ಬಂದ ಪುಸ್ತಕ. ಬಳಿಕ ಇಂಗ್ಲಿಷ್‌ಗೆ ಭಾಷಾಂತರಗೊಂಡಿತು. ಪತ್ರಿಕೆಯ ಸಂಪಾದಕನಾಗಿ ಗಾಂಧೀಜಿ ಓದುಗರೊಂದಿಗೆ ನಡೆಸುವ ಸಂವಾದ ಇದರಲ್ಲಿದೆ. ಜನರ ಮೂಢನಂಬಿಕೆಗಳನ್ನು ತಿದ್ದುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. 

3. ಇಂಡಿಯಾ ಆಫ್ ಮೈ ಡ್ರೀಮ್ಸ್
ಸ್ವತಂತ್ರ ಭಾರತದ ಬಗೆಗಿನ ಗಾಂಧೀಜಿ ಅವರ ಕನಸುಗಳು ಇದರಲ್ಲಿವೆ. ಹಿಂಸೆ, ಡಂಭಾಚಾರಗಳಿಂದ ಮುಕ್ತವಾಗಿ ಭಾರತ ಹೇಗಿರಬೇಕು ಅನ್ನುವುದನ್ನು ಬಾಪು ವಿವರವಾಗಿ ದಾಖಲಿಸಿದ್ದಾರೆ.

4. ವಿಲೇಜ್ ಸ್ವರಾಜ್
ಹಳ್ಳಿಗಳ ಉದ್ಧಾರದ ಕುರಿತಾಗಿ ಗಾಂಧೀಜಿ ಅವರ ನಿಲುವುಗಳು ಪುಸ್ತಕದ ರೂಪ ತಳೆದಿವೆ. ಕೃಷಿ, ಹೈನುಗಾರಿಕೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಕುರಿತಾದ ಗಾಂಧೀಜಿ ಅವರ ದೃಷ್ಟಿಕೋನಗಳು ಇದರಲ್ಲಿವೆ. 

5. ಕನ್ಸ್‌ಟ್ರಕ್ಟಿವ್ ಪ್ರೋಗ್ರಾಮ್-
ಇಟ್ಸ್ ಮೀನಿಂಗ್ ಆ್ಯಂಡ್ ಪ್ಲೇಸ್ ರಚನಾತ್ಮಕತೆ ಅನ್ನುವ ಶಬ್ದವನ್ನು ಜನಪ್ರಿಯಗೊಳಿಸಿದವರು ಗಾಂಧೀಜಿ. ಈ ಮೂಲಕ ಸ್ವಯಂ ಪೂರ್ಣತೆ ಅನ್ನುವುದು ಎಷ್ಟು ಮುಖ್ಯ ಅನ್ನುವುದನ್ನು ಅವರು ವಿವರಿಸುತ್ತಾರೆ.

6. ಭಗವದ್ಗೀತಾ ಅಕಾರ್ಡಿಂಗ್ ಟು ಗಾಂಧಿ
ಬದುಕಿನುದ್ದಕ್ಕೂ ಭಗವದ್ಗೀತೆಯ ಸಂದೇಶಗಳನ್ನು ಅಕ್ಷರಶಃ ಪಾಲಿಸಿದವರು ಮಹಾತ್ಮ. ಭಗವದ್ಗೀತೆಯ ಬಗೆಗಿನ ಅವರ ಹೊಳಹುಗಳು ಇಂದಿಗೂ ಪ್ರಸ್ತುತ. ಈ ಪುಸ್ತಕದಲ್ಲಿ ಭಗವದ್ಗೀತೆಯ ಕುರಿತಾದ ಗಾಂಧೀಜಿ ಅವರ ಒಳನೋಟಗಳಿವೆ

7. ಹೆಲ್ದೀ ಲಿವಿಂಗ್
ಗಾಂಧೀಜಿ ಇದ್ದ ಕಾಲಕ್ಕೆ ಭಾರತವನ್ನು ಕಾಡುತ್ತಿದ್ದದ್ದು ಬಡತನದ ಜೊತೆಗೆ ಅನಾರೋಗ್ಯವೂ. ರೋಗವನ್ನುಬೇರು ಸಮೇತ ಕಿತ್ತು ಹಾಕುವುದು ಹೇಗೆ ಅನ್ನುವುದನ್ನು ಈ ಕೃತಿಯಲ್ಲಿ ಗಾಂಧೀಜಿ ವಿವರಿಸಿದ್ದಾರೆ. 

8. ವಿಟ್ ಆ್ಯಂಡ್ ವಿಸ್‌ಡಮ್ ಆಫ್ ಗಾಂಧಿ
ಗಾಂಧೀಜಿ ಅವರ ಸ್ಪೂರ್ತಿದಾಯಕ ಹೇಳಿಕೆಗಳು ಇದರಲ್ಲಿವೆ. ಸಂಸಾರ, ಶಿಕ್ಷಣ, ಧರ್ಮ, ಸಮಾಜದ ಬಗೆಗಿನ ನಿಲುವುಗಳು ಈ ಕೃತಿಯಲ್ಲಿ ವ್ಯಕ್ತವಾಗುತ್ತವೆ.

9. ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ
ಯರವಾಡದ ಜೈಲಿನಲ್ಲಿ ಕುಳಿತು ಬರೆದ ಪುಸ್ತಕ. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ, ಅದನ್ನು ವಿರೋಧಿಸಿ ಆರಂಭಿಸಿದ ಸತ್ಯಾಗ್ರಹದ ಬಗ್ಗೆ ಇದರಲ್ಲಿ ಬರೆದಿದ್ದಾರೆ. 

ಮಹಾತ್ಮ ಗಾಂಧಿ 150: ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

10. ದ ವರ್ಡ್ಸ್ ಆಫ್ ಗಾಂಧಿ
ಗಾಂಧೀಜಿ ಅವರ ಚಿಂತನೆಗಳು, ನಂಬಿಕೆಗಳು, ಹಿಂಸೆ ಹಾಗೂ ಅಣುಬಾಂಬ್ ಬಗೆಗಿನ ಅವರ ಅಭಿಪ್ರಾಯ ಇತ್ಯಾದಿ ವಿವರಗಳು ಈ ಕೃತಿಯಲ್ಲಿವೆ. 

click me!