ಮಲೆನಾಡಿಗರಿಗೆ ಮತ್ತೊಂದು ಸಿಹಿ ಸುದ್ದಿ: ಜನಶತಾಬ್ಧಿ ಸಂಚಾರ ವಿಸ್ತರಣೆ

By Web Desk  |  First Published Mar 2, 2019, 11:32 AM IST

ಮಲೆನಾಡಿಗರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಇಷ್ಟು ದಿನಗಳ ಕಾಲ ವಾರದಲ್ಲಿ ಮೂರು ದಿನಗಳ ಕಾಲ ಮಾತ್ರ ಸಂಚಾರ ಮಾಡುತ್ತಿದ್ದ ಜನಶತಾಬ್ಧಿ ರೈಲು ಇನ್ನುಮುಂದೆ ವಾರದಲ್ಲಿ 6 ದಿನಗಳ ಕಾಲ ಸಂಚಾರ ಮಾಡಲಿದೆ. 


ಶಿವಮೊಗ್ಗ : ವಾರದಲ್ಲಿ ಕೇವಲ ಮೂರು ದಿನಗಳ ಕಾಲ ಸಂಚಾರ ಮಾಡುತ್ತಿದ್ದ ಶತಾಬ್ಧಿ ಎಕ್ಸ್ ಪ್ರೆಸ್ ರೈಲು ಇನ್ನುಮುಂದೆ ವಾರದಲ್ಲಿ 6 ದಿನಗಳ ಕಾಲ ಸಂಚಾರ ಮಾಡಲಿದೆ. 

ಈ ಬಗ್ಗೆ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಇನ್ನು ಅರಸಾಳು ರೈಲ್ವೆ ನಿಲ್ದಾಣ ವನ್ನು ಮಾಲ್ಗುಡಿ ಡೇಸ್ ರೈಲ್ವೆ ನಿಲ್ದಾಣ ಎಂದು  ಘೋಷಣೆ ಮಾಡಲು ಪ್ರಸ್ತಾವನೆ ಕಳುಹಿಸಿದ್ದಾಗಿ ಅವರು ತಿಳಿಸಿದ್ದು,  ಈ ರೈಲ್ವೆ ‌ನಿಲ್ದಾಣದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಮ್ಯೂಸಿಯಂ ಸ್ಥಾಪನೆ ಮಾಡುವುದಾಗಿಯೂ ಅವರು ಹೇಳಿದರು. 

Tap to resize

Latest Videos

ಶತಾಬ್ಧಿ ಪ್ರಯಾಣಕ್ಕೆ ಮುಂಗಡ ಬುಕ್ಕಿಂಗ್‌ ಕಡ್ಡಾಯ!

ಇನ್ನು ಶಿವಮೊಗ್ಗದಿಂದ ತಿರುಪತಿ ಹಾಗೂ ಚೆನ್ನೈಗೆ ರೈಲು ಸಂಚಾರ ಆರಂಭಿಸಲೂ ಪ್ರಸ್ತಾವನೆ ಕಳಿಸಿದ್ದಾಗಿ ರಾಘವೇಂದ್ರ ಹೇಳಿದರು. 

 ಕೇಂದ್ರ ಸರ್ಕಾರದ  RAF ತುಕಡಿ ಕೇಂದ್ರವನ್ನು ಭದ್ರಾವತಿಯಲ್ಲಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುವುದಾಗಿಯೂ ಈ ವೇಳೆ ರಾಘವೇಂದ್ರ ಮಾಹಿತಿ ನೀಡಿದರು.

ಬೆಂಗಳೂರು-ಶಿವಮೊಗ್ಗಕ್ಕೆ ಜನಶತಾಬ್ದಿ ರೈಲು : ಇನ್ನು 5 ಗಂಟೆ ಪ್ರಯಾಣ

ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ ಬಳ್ಳಾರಿ ಜಿಲ್ಲೆಯ ರಮಣದುರ್ಗದಲ್ಲಿ 150 ಎಕರೆ ಭೂಮಿಯನ್ನು ಗಣಿಗಾರಿಕೆ ಮಾಡಲು ಕೇಂದ್ರ ಸರ್ಕಾರ ಆದೇಶ ನೀಡಿದೆ. ವಿಐಎಸ್ಎಲ್ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಕಾರ್ಮಿಕರಿಗೆ ಹೆಚ್ಚಿನ ಕೆಲಸ ಮಾಡಲು ಅವಕಾಶ ನೀಡುವ ಪ್ರಯತ್ನ ನಡೆಸಿದ್ದೇನೆ ಎಂದು ತಿಳಿಸಿದರು. 

ಸಿಗಂದೂರು ಸೇತುವೆ ನಿರ್ಮಾಣಕ್ಕೆ 432 ಕೋಟಿ ರೂಪಾಯಿ ಅಂದಾಜು ವೆಚ್ಚ ನಿರ್ಧರಿಸಲಾಗಿದ್ದು ಶೀಘ್ರದಲ್ಲೇ ಟೆಂಡರ್ ಕರೆಯುವ ಮಾಹಿತಿಯನ್ನು ಅವರು ನೀಡಿದರು. 

ವೇಳಾಪಟ್ಟಿ: ಬೆಳಗ್ಗೆ  5.15ಕ್ಕೆ ಶಿವಮೊಗ್ಗದಿಂದ ಹೊರಟು ಬೆಳಗ್ಗೆ 10.15ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ. ಸಂಜೆ 5.30ಕ್ಕೆ  ಯಶವಂತಪುರದಿಂದ ಹೊರಟು ರಾತ್ರಿ 10.25ಕ್ಕೆ ಶಿವಮೊಗ್ಗ ತಲುಪಲಿದೆ. 

click me!