
ಬೆಂಗಳೂರು[ಸೆ.16] ಹಿಂದಿ ಭಾಷೆ ವಿರೋಧಿಸುವ ಮೂಲಕ ಕನ್ನಡಪರ ಹೋರಾಟಗಾರರು ತಮಿಳರಂತೆ ಮೂರ್ಖರು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದು ಕನ್ನಡ ಜೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸಂವಿಧಾನದಲ್ಲಿ ಹಿಂದಿ ಕೂಡ ಒಂದು ಭಾಷೆ. ಹಿಂದಿ ಬೆಳೆಯುವುದರಿಂದ ಕನ್ನಡಕ್ಕೆ ಹೊಡೆತ ಉಂಟಾಗುತ್ತದೆ ಎಂಬ ಮಾತಿನಲ್ಲಿ ಹುರುಳಿಲ್ಲ. ಹಿಂದಿ ಭಾಷೆ ವಿರೋಧಿಸುವವರು ತಮಿಳುನಾಡಿನ ಜನರಂತೆ ಮೂರ್ಖರು ಎಂದಿದ್ದರು.
ಹಿಂದಿ ವಿರೋಧಿಸಿ ತಮಿಳಿಗರು ಇಂದು ಉದ್ಯೋಗ ಇಲ್ಲದೆ ಬಳಲುತ್ತಿದ್ದಾರೆ. ಇನ್ನು ದೇಶಾದ್ಯಂತ ತಿರುಗಾಡಲಾಗದ ಸ್ಥಿತಿಯಲ್ಲಿದ್ದಾರೆ. ತಮಿಳುನಾಡಿನ ಜನರು ಮಾಡಿದ ಮೂರ್ಖ ಕೆಲಸವನ್ನು ಕನ್ನಡಿಗರು ಮಾಡದಿರಲಿ ಎಂದಿದ್ದಾರೆ.
ಪ್ರತಿಕ್ರಿಯೆ ನೀಡಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಸುಬ್ರಮಣಿಯನ್ ಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಸಾಮಾಜಿಕ ತಾಣದಲ್ಲಿಯೂ ವ್ಯಾಪಕ ವಿರೋಧ ವ್ಯಕ್ತವಾಗಿದೆ.