ಸಾವಿನ 2 ವರ್ಷ ಬಳಿಕವೂ ಜಯಾ ಖಾತೆಗೆ ಬಾಡಿಗೆ ಹಣ

Published : Jan 28, 2019, 08:02 AM IST
ಸಾವಿನ 2 ವರ್ಷ ಬಳಿಕವೂ ಜಯಾ ಖಾತೆಗೆ ಬಾಡಿಗೆ ಹಣ

ಸಾರಾಂಶ

ಸಾವಿನ 2 ವರ್ಷ ಬಳಿಕವೂ ಜಯಾ ಖಾತೆಗೆ ಬಾಡಿಗೆ ಹಣ| ಎಸ್ಟೇಟ್‌, ಕಟ್ಟಡಗಳ ಬಾಡಿಗೆ ಹಣ ಬ್ಯಾಂಕ್‌ ಖಾತೆಗೆ

ಚೆನ್ನೈ[ಜ.28]: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ವಾಸಿಸುತ್ತಿದ್ದ ಪೋಯೆಸ್‌ ಗಾರ್ಡನ್‌ ಮನೆಯನ್ನು ಐಟಿ ಅಧಿಕಾರಿಗಳು ತಮ್ಮ ಜಪ್ತಿ ಮಾಡಿದ್ದಾರೆ ಎಂಬ ಅಚ್ಚರಿಯ ವರದಿಯ ಬೆನ್ನಲ್ಲೇ, ಇದಕ್ಕೆ ಕಾರಣವಾದ ಅಂಶಗಳು ಇದೀಗ ಬಹಿರಂಗಗೊಂಡಿದೆ.

ಜಯಾ ಜೀವಂತ ಇದ್ದಾಗ ಕೊಡನಾಡು ಎಸ್ಟೇಟ್‌ ಸೇರಿದಂತೆ ಹಲವು ಆಸ್ತಿ ಖರೀದಿ ಮಾಡಿದ್ದರು. ಇವುಗಳಲ್ಲಿ ಹಲವು ವಾಣಿಜ್ಯ ಕಟ್ಟಡಗಳು ಸೇರಿದ್ದವು. ಇವುಗಳನ್ನು ಬಾಡಿಗೆಗೆ ಪಡೆದುಕೊಂಡವರು, ಜಯಾ ಸಾವಿನ ಬಳಿಕವೂ, ಜಯಾ ಅವರ ಬ್ಯಾಂಕ್‌ ಖಾತೆಗೆ ತಾವು ನೀಡಬೇಕಾಗಿ ಬರುವ ಹಣವನ್ನು ಪಾವತಿ ಮಾಡುತ್ತಲೇ ಇದ್ದಾರೆ. ಆದರೆ ಈ ಹಣಕ್ಕೆ ಪಾವತಿ ಮಾಡಬೇಕಾದ ತೆರಿಗೆಯನ್ನು ಯಾರೂ ಪಾವತಿ ಮಾಡಿರಲಿಲ್ಲ.

ಈ ಆದಾಯಕ್ಕೆ ತೆರಿಗೆ ಪಾವತಿಸುವಂತೆ ಹಲವು ಬಾರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದರೂ, ಯಾರೂ ಕೂಡಾ ಆ ವಿಷಯದ ಬಗ್ಗೆ ತಲೆಹಾಕಲು ಹೋಗಿರಲಿಲ್ಲ. ಹೀಗಾಗಿ ಜಯಾಗೆ ಸೇರಿದ ಮೂರು ಆಸ್ತಿಗಳನ್ನು ಜಪ್ತಿ ಹಾಕಿಕೊಳ್ಳಲಾಗಿತ್ತು. ತೆರಿಗೆ ಪಾವತಿ ಮಾಡದ ಹೊರತೂ ಈ ಆಸ್ತಿಗಳನ್ನು ಯಾರೂ ಮಾರುವಂತಿಲ್ಲ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!