ದಶಕಗಳಿಂದ ಪತ್ರಗಳನ್ನೇ ಹಂಚದ ಸೋಮಾರಿ ಪೋಸ್ಟ್’ಮಾಸ್ಟರ್ ಈತ..!

Published : Aug 16, 2018, 12:28 PM ISTUpdated : Sep 09, 2018, 08:55 PM IST
ದಶಕಗಳಿಂದ ಪತ್ರಗಳನ್ನೇ ಹಂಚದ ಸೋಮಾರಿ ಪೋಸ್ಟ್’ಮಾಸ್ಟರ್ ಈತ..!

ಸಾರಾಂಶ

ಒಡಿಶಾದ ಓಧಂಗ ಗ್ರಾಮದಲ್ಲಿ 2004ರಿಂದ ಪತ್ರಗಳನ್ನು ತಲುಪಿಸದೇ ತನ್ನ ಬಳಿಯೇ ಇಟ್ಟುಕೊಂಡ ಕಾರಣಕ್ಕಾಗಿ ಪೋಸ್ಟ್‌ಮಾಸ್ಟರ್‌ನನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ. 

ಭುವನೇಶ್ವರ್(ಆ.16]: ಯಾವುದೇ ಪತ್ರಗಳಿದ್ದರೂ ಅದನ್ನು ತಲುಪಿಸುವುದು ಪೋಸ್ಟ್‌ಮಾಸ್ಟರ್ ಕೆಲಸ. ಆದರೆ, ಇಲ್ಲೊಬ್ಬ ಪೋಸ್ಟ್‌ಮಾಸ್ಟರ್ ಎಷ್ಟು ಆಲಸಿ ಅಂದರೆ, ಸುಮಾರು 6000ಕ್ಕೂ ಹೆಚ್ಚು ಪತ್ರಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ. 
ಒಡಿಶಾದ ಓಧಂಗ ಗ್ರಾಮದಲ್ಲಿ 2004ರಿಂದ ಪತ್ರಗಳನ್ನು ತಲುಪಿಸದೇ ತನ್ನ ಬಳಿಯೇ ಇಟ್ಟುಕೊಂಡ ಕಾರಣಕ್ಕಾಗಿ ಪೋಸ್ಟ್‌ಮಾಸ್ಟರ್‌ನನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ.  ಜನವಸತಿ ಇಲ್ಲದ ಕಟ್ಟಡವೊಂದರಲ್ಲಿ ಮಕ್ಕಳು ಆಟವಾಡುತ್ತಿದ್ದ ವೇಳೆ ಹಳೆಯ ಪತ್ರಗಳನ್ನು ತುಂಬಿದ್ದ ಹಲವು ಮೂಟೆಗಳು ಪತ್ತೆಯಾಗಿವೆ. ಆಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಆ ಕಾಗದಗಳ ಪೈಕಿ ಸುಮಾರು 1500 ಪತ್ರಗಳನ್ನು ಸಂಬಂಧಪಟ್ಟವರಿಗೆ ಈಗ ಕಳಿಸಲಾಗಿದೆಯಂತೆ. ಪೋಸ್ಟ್’ಮ್ಯಾನ್ ಪತ್ರಗಳನ್ನು ಹಂಚದಿದ್ದರೂ ಗ್ರಾಮಸ್ಥರು ಸುಮ್ಮನಿದ್ದಿದ್ದು ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಇನ್ನು ಆ ಪತ್ರಗಳಲ್ಲಿ ಉದ್ಯೋಗ ನೇಮಕಾತಿ, ಪರೀಕ್ಷೆ ಹಾಲ್ ಟಿಕೆಟ್ ಹಾಗೂ ಜೀವವಿಮೆ ಪತ್ರಗಳು ಇವೆ ಎಂದು ವರದಿಯಾಗಿದೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!