ಪತ್ತೆಯಾಯ್ತು ಮತ್ತೊಂದು ಭೂಮಿ : ಹೇಗಿದೆ..?

By Web DeskFirst Published Nov 16, 2018, 11:05 AM IST
Highlights

ಭೂಮಿಗಿಂತ ಹೆಚ್ಚು ಶೀತ ಹೊಂದಿರುವ ಮಂಜುಗಡ್ಡೆ ರೂಪದ ‘ಸೂಪರ್ ಅರ್ಥ್’ ವೊಂದನ್ನು ಖಗೋಳ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. 

ಲಂಡನ್: ಭೂಮಿಗಿಂತ 3 ಪಟ್ಟು ದೊಡ್ಡದಾದ ಹಾಗೂ ಭೂಮಿಗಿಂತ ಹೆಚ್ಚು ಶೀತ ಹೊಂದಿರುವ ಮಂಜುಗಡ್ಡೆ ರೂಪದ ‘ಸೂಪರ್ ಅರ್ಥ್’ ವೊಂದನ್ನು ಖಗೋಳ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. 

ಸೂರ್ಯನಿಗೆ ಸಮೀಪದಲ್ಲಿರುವ ಏಕಾಂಗಿ ನಕ್ಷತ್ರವೊಂದನ್ನು ಈ ಸೂಪರ್ ಅರ್ಥ್ ಸುತ್ತುತ್ತಿದೆ. ಇದಕ್ಕೆ ‘ಬರ್ನಾಡ್ಸ್ ಸ್ಟಾರ್ ಬಿ’ ಎಂಬ ಹೆಸರಿನ್ನಿಡಲಾಗಿದೆ. ಪ್ರತಿ 233 ದಿನಕ್ಕೆ ಒಮ್ಮೆ ತನ್ನ  ಸಮೀಪದ ನಕ್ಷತ್ರವನ್ನು ಇದು ಸುತ್ತು ಹಾಕುತ್ತದೆ ಎಂದು ಲಂಡನ್‌ನ ಕ್ವೀನ್ ಮೇರಿ ವಿವಿ ಸಂಶೋಧಕರು ತಿಳಿಸಿದ್ದಾರೆ. 

ಆದರೆ ಈ ಹೊಸ ಗ್ರಹದಲ್ಲಿ ಮೈನಸ್ 170 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದು, ವಾಸಕ್ಕೆ ಯೋಗ್ಯವಾಗಿಲ್ಲ.

click me!
Last Updated Nov 16, 2018, 11:31 AM IST
click me!