ರೈಲ್ವೆ ಇಲಾಖೆ ನೌಕರರಿಗೆ ಗುಡ್ ನ್ಯೂಸ್ : ಭರ್ಜರಿ ಬೋನಸ್

By Web DeskFirst Published Oct 10, 2018, 12:36 PM IST
Highlights

ರೈಲ್ವೆ ಇಲಾಖೆ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಒಂದು ಕಾದಿದೆ. ಹಬ್ಬದ ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ರೈಲ್ವೆ ಇಲಾಖೆ ನೌಕರರು ಭರ್ಜರಿ ಬೋನಸ್ ಪಡೆದುಕೊಳ್ಳುವ ಸಾಧ್ಯತೆ ಇದೆ. 

ನವದೆಹಲಿ :  ಭಾರತೀಯ ರೈಲ್ವೆ ನೌಕರರಿಗೆ ಶೀಘ್ರದಲ್ಲೇ ಭರ್ಜರಿ ಗುಡ್ ನ್ಯೂಸ್ ಒಂದು ಕಾದಿದೆ. 

ಉತ್ಪಾದನೆಗೆ ಅನುಗುಣವಾಗಿ ರೈಲ್ವೆ ನೌಕರರಿಗೆ ಒಟ್ಟು 78 ದಿನಗಳ ಸಂಬಳವನ್ನು ಬೋನಸ್ ರೀತಿಯಾಗಿ ನೀಡಲು ರೈಲ್ವೆ ಮಂಡಳಿ ಪ್ರಸ್ತಾವನೆಯೊಂದನ್ನು ಇರಿಸಿದೆ. 

ಕೇಂದ್ರ ಸರ್ಕಾರದ ಮುಂದೆ ಈ ಪ್ರಸ್ತಾವನೆಯನ್ನು ಇರಿಸಲಾಗಿದ್ದು, ಕೇಂದ್ರ ಸಂಪುಟದ ಒಪ್ಪಿಗೆಗಾಗಿ ಕಾಯಲಾಗುತ್ತಿದೆ. 

ಕೇಂದ್ರ ಸಂಪುಟದಿಂದ ಅಂಗೀಕಾರ ದೊರೆತಲ್ಲಿ ರೈಲ್ವೆ ಇಲಾಖೆಯ ಒಟ್ಟು 12.26 ಲಕ್ಷ ನೌಕರರು ಇದರ ಲಾಭ ಪಡೆದುಕೊಳ್ಳಲಿದ್ದಾರೆ. 

ಒಟ್ಟು 80 ದಿನಗಳ ಸಂಬಳದ ಪ್ರಮಾಣದಷ್ಟು  ಬೋನಸ್ ಗೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಅಂತಿಮವಾಗಿ 78 ದಿನಗಳ ಬೋನಸ್ ಪಡೆದುಕೊಳ್ಳಲು ಒಪ್ಪಿಗೆ ಸೂಚಿಸಲಾಗಿದೆ. 

ಕಳೆದ 6 ವರ್ಷಗಳಿಂದ ಇದೇ ಪ್ರಮಾಣದಲ್ಲಿ ಬೋನಸ್ ನೀಡಲಾಗುತ್ತಿದೆ. ಈ ವರ್ಷವೂ ಕೂಡ ರೈಲ್ವೆ ಇಲಾಖೆ ಅದೇ ಫಾರ್ಮುಲಾವನ್ನು ಅನುಸರಣೆ ಮಾಡುತ್ತಿದೆ. 

ನೌಕರರಿಗೆ ನೀಡುವ ಬೋನಸ್ ಪ್ರಮಾಣ 2 ಸಾವಿರ ಕೋಟಿಯಷ್ಟಾಗಲಿದೆ ಎಂದು  ನ್ಯಾಷನಲ್ ಫೆರೇಷನ್ ಆಫ್ ಇಂಡಿಯನ್ ರೈಲ್ವೆ ಮೆನ್ ಜನರಲ್ ಸೆಕ್ರೇಟರಿ ಎಂ ರಾಘವಯ್ಯ ಹೇಳಿದ್ದಾರೆ.

click me!