ಕೇವಲ 7 ಶತಮಾನಗಳಲ್ಲಿ ಕಾಶ್ಮೀರದ ಕಣಿವೆಯಲ್ಲಿ 97 ಪ್ರತಿಶತ ಮುಸ್ಲೀಮರು!

By Web Desk  |  First Published Feb 24, 2019, 2:42 PM IST

ನೀಲಮತ ಪುರಾಣದ ಪ್ರಕಾರ ಕಾಶ್ಮೀರಕ್ಕೆ ಸುಮಾರು 5100 ವರ್ಷದ ಇತಿಹಾಸವಿದೆ. 13 ನೇ ಶತಮಾನದವರೆಗೂ ಕಾಶ್ಮೀರದಲ್ಲಿ ಶತಪ್ರತಿಶತ ಹಿಂದು ಮತ್ತು ಬೌಧ್ಧ ಧರ್ಮಿಗಳಿದ್ದರು. ಕೇವಲ ಏಳು ಶತಕಗಳಲ್ಲಿ ಕಾಶ್ಮೀರದ ಕಣಿವೆಯಲ್ಲಿ 97 ಪ್ರತಿಶತ ಮುಸ್ಲೀಮರು ಹೆಚ್ಚಾಗಿದ್ದಾರೆ. 


ಕಾಶ್ಮೀರದ ಪಂಡಿತರನ್ನು ’ಭಟ್ಟರು’ ಎಂದು ಕರೆಯುತ್ತಾರೆ. ಇವರು ಶೈವ ಸಾರಸ್ವತ ಬ್ರಾಹ್ಮಣರು. ಸುಂದರ ಕಾಶ್ಮೀರದ ಶಾಂತಿ ಪ್ರಿಯ ಜನಾಂಗ. ವೇದ ಪಾರಾಯಣ, ಪೂಜೆ ಪುನಸ್ಕಾರಗಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸುಖೀಜೀವನ ನಡೆಸುತ್ತಿದ್ದ ಜನಾಂಗ.

ಕಣಿವೆಯ ಜನರಲ್ಲಿ ಒಂದು ರೀತಿಯ ಭೌಗೋಳಿಕ ಏಕಾಂತತೆ ಇರುತ್ತದೆ. ಹೊರಗೆ ಏನಾಗುತ್ತಿದೆ ಎಂದು ತಿಳಿಯುವುದಿಲ್ಲ, ಹಾಗೇ ಹೊರಗಿನವರಿಗೆ ಸುಲಭವಾಗಿ ಒಗ್ಗಿಕೊಳ್ಳುವುದಿಲ್ಲ, ಹಾಗೂ ತಮ್ಮ ತಮ್ಮಲ್ಲೇ ಒಗ್ಗಟ್ಟೂ ಇರುವುದಿಲ್ಲ.

Tap to resize

Latest Videos

undefined

’ಕಾಶ್ಮೀರ’ ಹೆಸರಿನ ಹಿಂದಿದೆ ಈ ಋಷಿ ಮುನಿಯ ಕಥೆ

13 ನೇ ಶತಮಾನದ ಲೋಹಾನರ ರಾಜವಂಶದ ರಾಜ ರಾಮಚಂದ್ರನೇ ಕೊನೆಯ ಹಿಂದೂ ರಾಜ. ಅಷ್ಟೊತ್ತಿಗಾಗಲೇ ತುರ್ಕಿಸ್ಥಾನದ ’ದುಲ್ಚ ’ಎನ್ನುವ ದುಷ್ಟಕಾಶ್ಮೀರದ ಮೇಲೆ ಆಕ್ರಮಣ ಮಾಡಿ, ಕೊಳ್ಳೆ ಹೊಡೆದು, ಸುಮಾರು ಐವತ್ತು ಸಾವಿರ ಕಾಶ್ಮೀರಿಗಳನ್ನು ಗುಲಾಮನರನ್ನಾಗಿ ಸೆರೆಹಿಡಿದುಕೊಂಡು ಹೋದ. ಮುಂದೆ ’ರಿನ್ಚೆನ್‌’ ಎನ್ನುವ ಬೌದ್ಧ ಧರ್ಮದ ಸೇನಾನಿ ರಾಮಚಂದ್ರ ರಾಜನನ್ನು ಮೋಸದಿಂದ ಕೊಂದು ತಾನೇ ರಾಜನಾದ.

ಇಲ್ಲೊಂದು ಕುತೂಹಲಕಾರಿ ವಿದ್ಯಾಮಾನ ನಡೆಯುತ್ತದೆ. ’ರಿನ್ಚೆನ್‌’ ಕಾಶ್ಮೀರದ ಪ್ರಜೆಗಳನ್ನು ಓಲೈಸಲು ಶೈವ ಮತಕ್ಕೆ ಮತಾಂತರಗೊಳ್ಳಲು ನಿರ್ಧರಿಸುತ್ತಾನೆ. ಇದನ್ನು ರಾಜಗುರು ದೇವಸ್ವಾಮಿಯ ಹತ್ತಿರ ವಿಚಾರಣೆ ಮಾಡುತ್ತಾನೆ. ದೇವಸ್ವಾಮಿ ಈ ವಿಷಯವನ್ನು ಕಾಶ್ಮೀರಿ ಪಂಡಿತರ ಬಳಿ ನಿಷ್ಕರ್ಷಿಸಿ, ಇದಕ್ಕೆ ಶೈವ ಮತದಲ್ಲಿ ಅವಕಾಶವಿಲ್ಲವೆಂದು ಹೇಳಿಬಿಡುತ್ತಾರೆ!

ಇದರಿಂದ ಅವಮಾನಿತನಾದ ರಿನ್ಛೆನ್‌ ಮುಸ್ಲಿಮ್‌ ಧರ್ಮಕ್ಕೆ ಮತಾಂತರಗೊಂಡು, ಜೊತೆಗೆ ಹತ್ತು ಸಾವಿರ ಪಂಡಿತರನ್ನೂ ಮುಸ್ಲಿಮರನ್ನಾಗಿ ಮತಾಂತರಗೊಳಿಸಿಬಿಡುತ್ತಾನೆ.  ಇಲ್ಲಿಂದ ಶುರುವಾಗುತ್ತದೆ ನೋಡಿ ಭಟ್ಟರ ಮತಾಂತರದ, ಮಾರಣಹೋಮದ ವೃತ್ತಾಂತ.

ಇದು ಬರೀ ಕಾಶ್ಮೀರವಲ್ಲ, ಶಾರದಾ ದೇವಿಯ ಕಾಶ್ಮೀರ!

ಇದು ರಿಷಿಗಳ, ಸಂತರ, ಕವಿಗಳ ಕಾಶ್ಮೀರ

13 ನೇ ಶತಮಾನದಿಂದ ಆರಂಭವಾದ ಮತಾಂತರ, ಕೇವಲ ಏಳು ಶತಮಾನಗಳಲ್ಲಿ ಹಿಂದೂ ಮತ್ತು ಬೌಧ್ಧರ ಸಂಖ್ಯೆಯನ್ನು ನೂರು ಪ್ರತಿಶತದಿಂದ ಕೇವರ ಮೂರು ಪ್ರತಿಶತಕ್ಕಿಳಿಸಿ ಬಿಟ್ಟಿತ್ತು!. ಭಾರತದಲ್ಲಿ ಈ ತರಹದ ಕ್ಷಿಪ್ರವಾಗಿ ನಡೆದ ಮತಾಂತರದ ಉದಾಹರಣೆಗಳು ಬಹುಶಃ ಬೇರೆಲ್ಲೂ ಕಾಣಸಿಗದು, ಗೋವಾ ಒಂದನ್ನು ಹೊರತು ಪಡಿಸಿ.

ಇಲ್ಲಿ ಒಂದು ಕುತೂಹನ ವಿದ್ಯಮಾನವೆಂದರೆ ಈ ಎರಡೂ ರಾಜ್ಯಗಳ ಮತಾಂತರದ ಮಂಥನದಲ್ಲಿ ಸಿಲುಕಿದವರು ಪ್ರಮುಖವಾಗಿ ಸಾರಸ್ವತ ಬ್ರಾಹ್ಮಣರು!

ಕಶ್ಯಪರ ಕಾಶ್ಮೀರದಲ್ಲಿ ಶೈವ ಸಾರಸ್ವತ ಬ್ರಾಹ್ಮಣರು ಮತ್ತು ವಿಶ್ವಾಮಿತ್ರರ ಗೋಮಾಂತದಲ್ಲಿ ಗೌಡ ಸಾರಸ್ವತ ಬ್ರಾಹ್ಮಣರು.  ಈ ರಕ್ತಸಿಕ್ತ ಇತಿಹಾಸದ ಅವಧಿಯಲ್ಲೂ ಕಾಶ್ಮೀರದಲ್ಲಿ ಹಲವು ಕ್ರಾಂತಿಕಾರಕ ಘಟನೆಗಳು ನಡೆಯುತ್ತವೆ, ಸೂಫಿ ಸಂತರ, ನಂದ ರಿಷಿಯಂತಹ ಮುಸ್ಲಿಂ ಸನ್ಯಾಸಿಯ ಮತ್ತು ಲಲ್ಲೇಶ್ವರಿಯಂತಹ ಸಂತ ಕವಿಗಳ ಉದ್ಭವವಾಗುತ್ತದೆ.

ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಅಕ್ಕಮಹಾದೇವಿಯ ವೃತ್ತಾಂತ ಹದಿನಾಲ್ಕನೇ ಶತಮಾನದಲ್ಲಿ ಕಾಶ್ಮೀರದಲ್ಲಿ ಲಲ್ಲೇಶ್ವರಿಯ ಹೆಸರಿನಲ್ಲಿ ಪುನಾರಾವರ್ತನೆಯಾಗುತ್ತದೆಯೇನೋ ಎನ್ನುವಷ್ಟುಹೊಂದಾಣಿಕೆ.

ಇಬ್ಬರೂ ಶಿವಾರಾಧಕರು, ಇಬ್ಬರೂ ಅಪ್ರತಿಮ ಸುಂದರಿಯರು, ಇಬ್ಬರೂ ವಿವಾಹ ಬಂಧನದಿಂದ ಹೊರಬಂದು ಆಧ್ಯಾತ್ಮದ ಹಾದಿಯಲ್ಲಿ ನಡೆದವರು ಮತ್ತು ಇಬ್ಬರೂ ಅಧ್ಭುತ ಕಾವ್ಯಗಳ, ಸಾಹಿತ್ಯದ ರಚನಾಕಾರರು. ಅಕ್ಕಮಹಾದೇವಿ ವಚನನಗಳನ್ನು ರಚಿಸಿದರೆ ಲಲ್ಲೇಶ್ವರಿಯ ರಚನೆಗಳು ’ವಾಕ್‌’ ಹೆಸರಿನಲ್ಲಿ ವಿಶ್ವವದೆಲ್ಲೆಡೆ ಹೆಸರುವಾಸಿಯಾಗಿವೆ.

ಅಕ್ಕಮಹಾದೇವಿಯನ್ನು ’ಅಕ್ಕ’ ಎಂದು ಸಂಭೋದಿಸಿದರೆ ಲಲ್ಲೇಶ್ವರಿಯನ್ನು ಅಮ್ಮ (ಲಾಲ್‌ ದೇಡ್‌) ಎಂದು ಕರೆಯಲಾಗುತ್ತದೆ. ಇಬ್ಬರೂ ಆಕಾಶವೇ ಹೊದಿಕೆ ಎಂದು ಕೇಶವಸ್ತ್ರಧಾರಿಗಳಾಗಿ ನಡೆದಾಡುತ್ತಿದ್ದರಂತೆ ಎನ್ನುವ ಪ್ರತೀತಿ.

ಲಲ್ಲೇಶ್ವರಿಯ ವೈಶಿಷ್ಟ್ಯವೆಂದರೆ ಅವರ ಶಿಷ್ಯವರ್ಗದಲ್ಲಿ ಮುಸ್ಲೀಮರೇ ಹೆಚ್ಚು! ’ಹಿಂದೂ ಮುಸ್ಲೀಮರೆನ್ನುವ ಭೇದ ಭಾವ ಬೇಡ. ಶಿವ ಸೂತ್ರವೇ ಎಲ್ಲದರ ಮೂಲ’ ಎಂದು ಭೋಧಿಸಿ ಶಿವಾರಾಧಕರ.. ಸೂಫಿ ಸಂತರ..ಮಾತೆಯಾಗಿ ಮೆರೆದಳು ಕಾಶ್ಮೀರದ ಲಲ್ಲೇಶ್ವರಿ.

- ವಿಂಗ್ ಕಮಾಂಡರ್ 

click me!