ಹೆಣ್ಣಿನ ಸೌಂದರ್ಯ ವಿವಿಧ ಅಂಗಾಂಗಳ ಮೂಲಕ ಹೊರ ಹೊಮ್ಮುತ್ತದೆ. ಆದರೆ, ಆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೆಲವು ಕಸರತ್ತುಗಳನ್ನು ಮಾಡುವುದು ಅನಿವಾರ್ಯ. ಕೇವಲ ಹೊರಗಿನ ಉಡುಪು ಮಾತ್ರವಲ್ಲ, ಒಳ ಉಡುಪು ಸರಿಯಾದದ್ದನ್ನು ಹಾಕಿ ಕೊಂಡಾ ಮಾತ್ರ ಆ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ.
ಹುಡುಗಿಯ ಅಂದವನ್ನು ಹೆಚ್ಚಿಸುವಲ್ಲಿ ಹಾಕಿ ಕೊಳ್ಳುವ ಬ್ರಾ ಸಹ ಪ್ರಮುಖ ಪಾತ್ರವಹಿಸುತ್ತದೆ.. ಪ್ರತಿಯೊಂದು ಡ್ರೆಸ್‌ಗೆ ಸೂಕ್ತ ಬ್ರಾ ಧರಿಸಿದರೆ ಮಾತ್ರ ಅಂದ ಹೆಚ್ಚಲು ಸಾಧ್ಯ. ಇದಕ್ಕಿಲ್ಲಿವೆ ಕೆಲವು ಟಿಪ್ಸ್....
- ರೆಸರ್ ಬ್ಯಾಕ್ ಬ್ರಾ ಖರೀದಿ ಮಾಡುವುದಕ್ಕಿಂತ ಬ್ರಾ ಕ್ಲಿಪ್ ಬಳಸಿ. ನಿಮ್ಮ ಬ್ರಾ ಸ್ಟ್ರ್ಯಾಪ್ ಸೇರಿಸಿ ಪಿನ್ ಮಾಡಿ.
- ಬ್ರಾವನ್ನು ಯಾವತ್ತೂ ವಾಷಿಂಗ್ ಮಷಿನ್‌ಗೆ ಹಾಕಿ ವಾಷ್ ಮಾಡಬೇಡಿ. ಸಾಧ್ಯವಾದಷ್ಟು ಕೈಯಲ್ಲೇ ವಾಷ್ ಮಾಡಿ. ಇಲ್ಲವಾದರೆ ಅದು ಬೇಗನೆ ಹಾಳಾಗುತ್ತದೆ.
- ಬ್ಯಾಕ್ ಲೆಸ್ ಡ್ರೆಸ್ ಧರಿಸುವುದಾದರೆ ಬ್ರಾ ಸ್ಟ್ರಾಪ್ ಕತ್ತರಿಸಿ ಡ್ರೆಸ್ ಜೊತೆ ಕೈಯಲ್ಲಿ ಸ್ಟಿಚ್ ಮಾಡುವುದು ಉತ್ತಮ. ಇದರಿಂದ ಸಪೋರ್ಟ್ ಕೂಡ ದೊರೆಯುತ್ತದೆ.
- ಕೆಲವೊಂದು ಬ್ರಾ ಸ್ಟ್ರಾಪ್ ಗಳು ಟೈಟ್ ಆಗಿ ಭುಜದ ಮೇಲೆ ಕಲೆ ಮೂಡಿಸುತ್ತದೆ. ಅದಕ್ಕಾಗಿ ಸಿಲಿಕಾನ್ ಬ್ರಾ ಸ್ಟ್ರಾಪ್ ಪ್ಯಾಡ್ ಗಳನ್ನು ನಿಮ್ಮ ಸ್ಟ್ರಾಪ್ ಕೆಳಗೆ ಇಟ್ಟರೆ ಉತ್ತಮ.
- ವಾಷ್ ಮಾಡಿದ ನಂತರ ಬ್ರಾವನ್ನು ಬಿಸಿಲಿಗೆ ಮಾತ್ರ ಒಣಗಿಸಿ. ಡ್ರೈಯರ್ ಬಳಸಬೇಡಿ. ಇದರಿಂದ ಬ್ರಾ ಬೇಗನೆ ಹಾಳಾಗುತ್ತದೆ. ಪ್ಯಾಡೆಡ್ ಬ್ರಾಗಳು ಸರಿಯಾಗಿ ಒಣಗುವಂತೆ ನೋಡಿಕೊಳ್ಳಿ. ಕೀಟಾಣುಗಳು ಸೇರಿಕೊಳ್ಳುವ ಸಾಧ್ಯತೆ ಇದೆ.
- ಸ್ಟ್ರಾಪ್ ಇರುವ ಬ್ರಾವನ್ನು ಸ್ಟ್ರಾಪ್ ಲೆಸ್ ಬ್ರಾ ಆಗಿ ಪರಿವರ್ತಿಸಿ. ಅದಕ್ಕಾಗಿ ಸ್ಟ್ರಾಪ್ ಗಳನ್ನೂ ಹಿಂದಕ್ಕೆ ತಂದು ಒಳಗಡೆ ಸಿಕ್ಕಿಸಿ. ಇದರಿಂದ ನಿಮ್ಮ ಬ್ರಾ ಸ್ಟ್ರಾಪ್ ಲೆಸ್ ಬ್ರಾ ಆಗುತ್ತದೆ.
- ಬ್ರಾ ಕಪ್ ಗಳು ಓಪನ್ ಆಗಿರುವಂತೆ ಸ್ಟೋರ್ ಮಾಡಿ. ಒಂದರ ಮೇಲೆ ಒಂದು ಬ್ರಾ ಇಡಬೇಡಿ.
ಯೋಗಿನಿಯಾದ ಬಾಲಿವುಡ್ ನಟ
ಜಾರಿದ ಒಳ ಉಡುಪು
ಸೋನಾಲಿ ಬೇಂದ್ರ ಕ್ಯಾನ್ಸರ್‌ಗೆ ಕಪ್ಪು ಬ್ರಾ ಕಾರಣವೇ?