ಖುಷ್ ಖುಷಿಯಾಗಿ ಪರೀಕ್ಷೆ ಅಟೆಂಡ್ ಮಾಡೋದು ಹೇಗೆ? ಇಲ್ಲಿವೆ ಟಿಪ್ಸ್...

By Suvarna NewsFirst Published Jan 28, 2020, 12:43 PM IST
Highlights

ಸಿಬಿಎಸ್ಸಿ ಬೋರ್ಡ್ ಎಕ್ಸಾಂಗೆ ಕ್ಷಣಗಣನೆ ಶುರುವಾಗಿದೆ. ಮಕ್ಕಳೆಲ್ಲ ಸಿಕ್ಕಾಪಟ್ಟೆ ಒತ್ತಡದಲ್ಲಿದ್ದಾರೆ. ಕುಂತ್ರೆ ನಿಂತ್ರೆ ಎಕ್ಸಾಂ, ಸಿಲೆಬಸ್ನದ್ದೇ ಧ್ಯಾನ. ಆದರೆ ನೀವು ಇಷ್ಟೆಲ್ಲ ಟೆನ್ಶನ್ ತಗೊಳ್ಳದೇ ಖುಷಿ ಖುಷಿಯಾಗಿ ಎಕ್ಸಾಂ ಅಟೆಂಡ್ ಮಾಡಬಹುದು. ಮಾತ್ರ ಅಲ್ಲ ಅಂದುಕೊಂಡದ್ದಕ್ಕಿಂತ ಹೆಚ್ಚು ಸ್ಕೋರ್ ಮಾಡಬಹುದು.

ಸಿಬಿಎಸ್ ಸಿ ಬೋರ್ಡ್ ಎಕ್ಸಾಂಗೆ ಕ್ಷಣಗಣನೆ ಶುರುವಾಗಿದೆ. ಮಕ್ಕಳೆಲ್ಲ ಸಿಕ್ಕಾಪಟ್ಟೆ ಒತ್ತಡದಲ್ಲಿದ್ದಾರೆ. ಕುಂತ್ರೆ ನಿಂತ್ರೆ ಎಕ್ಸಾಂ, ಸಿಲೆಬಸ್ ನದ್ದೇ ಧ್ಯಾನ. ಆದರೆ ನೀವು ಇಷ್ಟೆಲ್ಲ ಟೆನ್ಶನ್ ತಗೊಳ್ಳದೇ ಖುಷಿ ಖುಷಿಯಾಗಿ ಎಕ್ಸಾಂ ಅಟೆಂಡ್ ಮಾಡಬಹುದು. ಮಾತ್ರ ಅಲ್ಲ ಅಂದುಕೊಂಡದ್ದಕ್ಕಿಂತ ಹೆಚ್ಚು ಸ್ಕೋರ್ ಮಾಡಬಹುದು.

*

 

ಸುಲಭದ ಸಬ್ಜೆಕ್ಟ್ ಮೊದಲು ಓದಿ

ಬಹಳ ಮುಖ್ಯವಾಗಿ ನೀವು ಮಾಡಬೇಕಾದ್ದು ಸ್ಟಡೀ ಟೈಮ್ ಟೇಬಲ್. ನಿಮಗೆ ಸಿಗುವ ಸಮಯಕ್ಕೆ ಅನುಗುಣವಾಗಿ ಟೈಮ್ ಟೇಬಲ್ ಸಿದ್ಧಪಡಿಸಿ. ಈ ಟೈಮ್ ನಲ್ಲಿ ನಿಮಗೆ ಸುಲಭ ಅನಿಸೋ ಸಬ್ಜೆಕ್ಟ್ ಅನ್ನು ಮೊದಲಿಗೆ ಓದೋದು ಮರೀಬೇಡಿ. ನಂತರ ಕಷ್ಟದ ಸಬ್ಜೆಕ್ಟ್ ಓದಿ. ಏಕೆಂದರೆ ನಿಮಗೆ ಓದಲು ಸ್ಪೂರ್ತಿ ಬರಬೇಕು ಅಂದರೆ ಓದೋ ಸಬ್ಜೆಕ್ಟ್ ಇಂಟೆರೆಸ್ಟಿಂಗ್ ಅನಿಸಬೇಕು. ಆ ಮೇಲೆ ಆ ಆಸಕ್ತಿ ಕಷ್ಟದ ವಿಷಯವನ್ನೂ ಆಸಕ್ತಿಯಿಂದ ಓದೋ ಹಾಗೆ ಮಾಡುತ್ತೆ. ಎಲ್ಲಾ ವಿಷಯಕ್ಕೂ ಒಂದೇ ರೀತಿಯ ಟೈಮ್ ಕೊಡಿ. ಇದಲ್ಲದೇ ಅರ್ಧ ಗಂಟೆ ಎಕ್ಸ್ಟ್ರಾ ಟೈಮ್ ಇಟ್ಕೊಳ್ಳಿ. ಕೆಲವೊಮ್ಮೆ ಕೆಲವೊಂದು ವಿಷಯಕ್ಕೆ ನೀವು ಕೊಟ್ಟ ಸಮಯ ಸಾಕಾಗಲ್ಲ. ಅದಕ್ಕೆ ಈ ಎಕ್ಸ್ಟ್ರಾ ಟೈಮ್ ಅನ್ನು ಬಳಸಿಕೊಳ್ಳಬಹುದು. ಒಂದು ಸಬ್ಜೆಕ್ಟ್ ನಿಂದ ಇನ್ನೊಂದು ಸಬ್ಜೆಕ್ಟ್ ಗೆ ಶಿಫ್ಟ್ ಆಗುವ ಮೊದಲು ಹತ್ತು ನಿಮಿಷಗಳ ಗ್ಯಾಪ್ ತಗೊಳ್ಳಿ.

 

ಎಲ್ಲರೊಂದಿಗೂ ಬೆರೆತು ಬಾಳಲು ಕಣ್ತುಂಬಾ ನಿದ್ರಿಸಿ.

 

ಮನನ ಮಾಡೋದು ಬಹಳ ಇಂಪಾರ್ಟೆಂಟ್

ಹೆಚ್ಚಿನವರು ಗಡಿಬಿಡಿಯಲ್ಲಿ ಓದಿ ಮುಗಿಸ್ತಾರೆ. ಆದರೆ ಎಕ್ಸಾಂನಲ್ಲಿ ಏನೊಂದೂ ನೆನಪಾಗಲ್ಲ. ಏಕೆಂದರೆ ಓದಿದ ಮೇಲೆ ಅದನ್ನು ರಿಕಾಲ್‌ ಮಾಡಿಕೊಂಡಿರಲ್ಲ. ಓದೋದರಷ್ಟೇ ಮುಖ್ಯ ಓದಿದ್ದನ್ನು ಪುನಃ ನೆನಪಿಸಿಕೊಳ್ಳೋದು. ನೀವೇನು ಓದಿದ್ರೆ ಅನ್ನೋದನ್ನು ರಫ್ ಆಗಿ ಪಾಯಿಂಟ್ ಬೈ ಪಾಯಿಂಟ್ ಬರೆದಿಟ್ಟುಕೊಂಡು ಮತ್ತೊಮ್ಮೆ ನೆನಪಿಸಿ.ಹೀಗೆ ಮಾಡಿದಾಗ ಎಕ್ಸಾಂ ಹಿಂದಿನ ದಿನ ಒಮ್ಮೆ ಎಲ್ಲವನ್ನೂ ನೋಡಿಕೊಂಡು ಹೋದರೆ ಸಾಕು, ಎಲ್ಲ ನೆನಪಿರುತ್ತೆ.

 

ಯಾವ ಚಾಪ್ಟರ್ ಅನ್ನೂ ಸ್ಕಿಪ್ ಮಾಡಬೇಡಿ

ಓದೋದಿಕ್ಕೆ ಟೈಮ್ ಇಲ್ಲ ಅಂತಾನೋ, ಇಷ್ಟು ಮಾರ್ಕ್ ಗೆ ಇಷ್ಟು ಓದಿದ್ರೆ ಸಾಕು ಅಂತಾನೋ, ಕೆಲವೊಮ್ಮೆ ಆ ಚಾಪ್ಟರ್ ಅಷ್ಟು ಇಂಪಾರ್ಟೆಂಟ್ ಅಲ್ಲ ಅಂದುಕೊಂಡೋ ಕೆಲವು ಹುಡುಗ್ರು ಮಧ್ಯದ ಕೆಲವೊಂದು ಚಾಪ್ಟರ್ ಗಳನ್ನು ಓದದೇ ಬಿಟ್ಟು ಬಿಡ್ತಾರೆ. ಇಂಥ ತಪ್ಪು ಖಂಡಿತಾ ಮಾಡೋದಕ್ಕೆ ಹೋಗ್ಬೇಡಿ. ನಿಮ್ಮ ದುರಾದೃಷ್ಟಕ್ಕೆ ಅದೇ ಚಾಪ್ಟರ್ ನಿಂದ ಆಯ್ಕೆಗಳಿಲ್ಲದ ಪ್ರಶ್ನೆ ಬರುವ ಸಾಧ್ಯತೆ ಇದೆ. ಆಗ ನಿರಾಯಾಸವಾಗಿ ಬರುವ ಮಾರ್ಕ್ ಕೈ ತಪ್ಪಿ ಗೋಳಾಡಬೇಕಾಗುತ್ತೆ.

 

ದಯಮಾಡಿ ವಯಸ್ಸಾಗದಂತೆ ವರ ನೀಡಿ!

 

ಟೆನ್ಶನ್ ಗೆ ಜಾಗನೇ ಕೊಡಬೇಡಿ

ನಿಮ್ಮ ಆತ್ಮವಿಶ್ವಾಸವನ್ನು ಕಮರಿಸಿಹಾಕುತ್ತೆ ಟೆನ್ಶನ್. ಎಕ್ಸಾಂಗೆ ನೀವೆಷ್ಟೇ ಓದಿ ರೆಡಿಯಾದರೂ ಈ ಟೆನ್ಶನ್ ಒಕ್ಕರಿಸಿಕೊಂಡರೆ ಕರೆಕ್ಟ್ ಟೈಮ್ ಗೆ ಎಲ್ಲ ಮರೆತುಹೋಗುವ ಸಾಧ್ಯತೆ ಇದೆ. ಸಾಮಾನ್ಯ ಟೆನ್ಶನ್, ಭಯ ಆಗೋದು ನಿಮಗೆ ಪಾಠಗಳು ಅರ್ಥ ಆಗದೇ ಇದ್ದಾಗ. ಕಡಿಮೆ ಮಾರ್ಕ್ಸ್ ಬಂದ್ರೆ ಅನ್ನುವ ಭಯ ಇದ್ದಾಗ. ಯಾವಾಗ ನೀವು ಅಂಥಾ ಗೊಂದಲಗಳನ್ನೆಲ್ಲ ಕ್ಲಿಯರ್ ಮಾಡ್ಕೊಳ್ತೀರೋ ಆಗ ಟೆನ್ಶನ್ ಇರಲ್ಲ. ಟೆನ್ಶನ್ ಶುರುವಾಗುವಾಗಲೇ ಐದು ನಿಮಿಷ ನಿಮ್ಮ ಉಸಿರನ್ನೇ ಗಮನಿಸಿ ಏಕಾಗ್ರತೆ ತಂದುಕೊಳ್ಳಿ. ಒತ್ತಡಕ್ಕೆ ಗುರಿಯಾದ ಮನಸ್ಸಿಗೆ ಕಾಮ್ ಆಗಿರಲು ಹೇಳಿ. ನನಗೆಲ್ಲ ತಿಳಿದಿದೆ, ನಾನು ಎಕ್ಸಾಂನಲ್ಲಿ ಚೆನ್ನಾಗಿ ಬರೀತೀನಿ. ಕಡಿಮೆ ಮಾರ್ಕ್ಸ್‌ ಬಂದರೂ ಅದು ದೊಡ್ಡ ಅಫೆನ್ಸ್ ಅಲ್ಲ ಅಂತ ನಿಮಗೆ ನೀವೇ ಸಮಾಧಾನ ಮಾಡ್ಕೊಂಡು ಹೋಗಿ. ಹೀಗೆ ಮಾಡಿದರೆ ನಿಜಕ್ಕೂ ನೀವು ಪರೀಕ್ಷೆ ಚೆನ್ನಾಗಿಯೇ ಮಾಡ್ತೀರಾ.

 

ಊಟ, ನಿದ್ದೆಯೂ ಬಹಳ ಮುಖ್ಯ ಗೊತ್ತಿರಲಿ.

ಪರೀಕ್ಷೆ ಟೈಮ್ ನಲ್ಲಿ ಹೆಚ್ಚಿನ ಮಕ್ಕಳಿಗೆ ಊಟ, ನಿದ್ದೆ ಬಗ್ಗೆ ಗಮನವೇ ಇರಲ್ಲ. ಆದರೆ ಒಳ್ಳೆಯ ಆಹಾರ, ಚೆನ್ನಾದ ನಿದ್ದೆಯೂ ನೀವು ಚೆನ್ನಾಗಿ ಎಕ್ಸಾಂ ಬರೀಲಿಕ್ಕೆ ಹೆಲ್ಪ್ ಮಾಡುತ್ತೆ ಅನ್ನೋದು ಗೊತ್ತಿರಲಿ. ಎಂಟು ಗಂಟೆ ನಿದ್ದೆ, ಪ್ರೊಟೀನ್ ಯುಕ್ತ ಆಹಾರ ಮಿಸ್ ಮಾಡ್ಲೇ ಬೇಡಿ. ಬೇಕಿದ್ದರೆ ಈ ಸಮಯದಲ್ಲಿ ಕಾರ್ಬೋ ಹೈಡ್ರೇಟ್ ಅಂಶ ಇರುವ ಆಹಾರ ಕಡಿಮೆ ತಿನ್ನಿ.

click me!