ಭಯವೇ ನಮ್ಮನ್ನು ಬದುಕಿಸುವ ಸಂಜೀವಿನಿ ನೋಡೋಣ, ದೇವರಿದ್ದಾನೆ!

By Web Desk  |  First Published Sep 30, 2019, 4:20 PM IST

ಮಹಾಭಾರತದಲ್ಲಿ ಅತ್ಯಂತ ನಿರ್ಭಯನಾದ ವ್ಯಕ್ತಿ ಯಾರು ಎಂದು ಕೇಳಿದಾಗ ಕೃಷ್ಣ ಹೇಳುವ ಹೆಸರು ಭೀಮನದೂ ಅಲ್ಲ, ಅರ್ಜುನನದೂ ಅಲ್ಲ. ಸಹದೇವನದು. ಅವನು ಯಾಕೆ ನಿರ್ಭಯ ಅಂದರೆ ಅವರಿಗೆ ಮುಂದಾಗುವುದೆಲ್ಲ ಗೊತ್ತಿರುತ್ತದೆ. ನಾಳೆ ಹೀಗೆಯೇ ಎಂದು ಗೊತ್ತಾದವನಿಗೆ ಭಯ ಇಲ್ಲ. ನಾಳೆ ಏನು ಎಂಬುದು ಗೊತ್ತೇ ಇಲ್ಲದವನಿಗೂ ಭಯವಿಲ್ಲ. ಭಯವಿರುವುದು ನಾಳೆಯನ್ನು ಊಹಿಸಿಕೊಳ್ಳಬಲ್ಲವನಿಗೆ. ಹಾಗೆ ಊಹಿಸಿಕೊಳ್ಳುವವರು ನಾವು.


ಹಾಗಂತ ಯಾರೇ ಹೇಳಿದರೂ ಸಂತೋಷವಾಗುತ್ತದೆ. ಧೈರ್ಯ ಬರುತ್ತದೆ. ಅದೇ ಮಾತನ್ನು ಡಾಕ್ಟರರು ಹೇಳಿದ್ರು ಅಂತಿಟ್ಕೊಳ್ಳಿ. ಭಯಂಕರ ಭಯವಾಗುತ್ತದೆ. ಡಾಕ್ಟರೇ ದೈವೇಚ್ಛೆ ಅಂದುಬಿಟ್ಟರೆ ಅಲ್ಲಿಗೆ ಕತೆ ಮುಗೀತು ಅಂತಾನೇ ಅರ್ಥ.

ಹೇಗೆ ನಾವು ಆಪ್ತರಕ್ಷಕ ಅಂದುಕೊಂಡಿರುವವನ ಪ್ರಸ್ತಾಪವೇ ಭಯಕ್ಕೂ ಕಾರಣವಾಗುತ್ತದೆ ಎಂಬುದಕ್ಕಿದು ಒಂದು ಚಿಕ್ಕ ಉದಾಹರಣೆ.

Latest Videos

undefined

ಮಹಾಭಾರತದಲ್ಲಿ ಅತ್ಯಂತ ನಿರ್ಭಯನಾದ ವ್ಯಕ್ತಿ ಯಾರು ಎಂದು ಕೇಳಿದಾಗ ಕೃಷ್ಣ ಹೇಳುವ ಹೆಸರು ಭೀಮನದೂ ಅಲ್ಲ, ಅರ್ಜುನನದೂ ಅಲ್ಲ. ಸಹದೇವನದು. ಅವನು ಯಾಕೆ ನಿರ್ಭಯ ಅಂದರೆ ಅವರಿಗೆ ಮುಂದಾಗುವುದೆಲ್ಲ ಗೊತ್ತಿರುತ್ತದೆ. ನಾಳೆ ಹೀಗೆಯೇ ಎಂದು ಗೊತ್ತಾದವನಿಗೆ ಭಯ ಇಲ್ಲ. ನಾಳೆ ಏನು ಎಂಬುದು ಗೊತ್ತೇ ಇಲ್ಲದವನಿಗೂ ಭಯವಿಲ್ಲ. ಭಯವಿರುವುದು ನಾಳೆಯನ್ನು ಊಹಿಸಿಕೊಳ್ಳಬಲ್ಲವನಿಗೆ. ಹಾಗೆ ಊಹಿಸಿಕೊಳ್ಳುವವರು ನಾವು.

ಅಷ್ಟಕ್ಕೂ ನಾಳೆ ಏನಾಗಬಹುದು? ಯಾರೋ ಬಂಡಾಯ ಎದ್ದು ರಾಜೀನಾಮೆ ಕೊಡಬಹುದು, ಮಗ ಎದುರುಬೀಳಬಹುದು, ಯಾರೋ ಸಾಲ ಕೇಳಬಹುದು, ಸಾಲ ಕೊಟ್ಟವರು ತೀರಿಸದೇ ಇರಬಹುದು, ಆದಾಯ ತೆರಿಗೆಯ ಮಂದಿ ಮನೆಗೆ ಬರಬಹುದು, ಕಳ್ಳಪ್ರೇಮದ ವೃತ್ತಾಂತ ಮನೆಯಾಕೆಗೆ ಗೊತ್ತಾಗಬಹುದು, ಅವಳು ಮತ್ತೊಬ್ಬನನ್ನೂ ಹೀಗೇ ಪ್ರೀತಿಸುತ್ತಿರಬಹುದು....

ಪ್ರೇಮಂ ನಟಿಯ ಹೊಸ ಲವ್ ಸ್ಟೋರಿ

ಇವುಗಳಲ್ಲಿ ಮೂಲಭೂತ ಭಯ ಎಷ್ಟು? ಯಾವುದು? ಒಂದೂ ಅಲ್ಲ. ಮನುಷ್ಯನ ಬೇಸಿಕ್‌ ಆದ ಭಯ ಸಾವಿನದು. ಆದರೆ ಬದುಕುತ್ತಾ ಬದುಕುತ್ತಾ ನಾವು ಸಾವಿಗೆ ಹೆದರುವುದಕ್ಕಿಂತ ಹೆಚ್ಚು ಬದುಕಿಗೇ ಹೆದರುತ್ತಿರುತ್ತೇವೆ. ಇದ್ಯಾವ ವ್ಯಂಗ್ಯ?

ನಿಜವಾಗಿ ನೋಡಿದರೆ, ನಾವು ಯಾವುದರಿಂದ ತಪ್ಪಿಸಿಕೊಂಡು ಓಡುತ್ತಿರುತ್ತೇವೋ ಅದರ ಕಡೆಗೇ ಓಡುತ್ತಿರುತ್ತೇವೆ. ಈ ಮಾತು ಶುದ್ಧಾಂಗ ಹೊಂದಿಕೆಯಾಗುವುದು ಭಯಕ್ಕೆ. ಕತ್ತಲಲ್ಲಿ, ಬೆಳಕಿನಲ್ಲಿ, ಬೆತ್ತಲಾದಾಗ, ಮೈತುಂಬ ಬಟ್ಟೆಯಿದ್ದಾಗ, ಬಡತನದಲ್ಲಿ, ಸಿರಿವಂತಿಕೆಯಲ್ಲಿ, ನಿಧಾನದಲ್ಲಿ, ವೇಗದಲ್ಲಿ, ಆವೇಗದಲ್ಲಿ, ಆವೇಶದಲ್ಲಿ ನಮ್ಮನ್ನು ಒಂದು ಕ್ಪಣ ಮತ್ತು ನಿರಂತರವಾಗಿ ಕಾಡುವುದು ಬೆನ್ನಟ್ಟುವುದು ಕೇವಲ ಭಯ.

ಭಯವೆಂದರೇನು?

ಅದು ನಮ್ಮೆಲ್ಲರ ಪಾಲಿನ ಶನಿ. ನಮ್ಮನ್ನು ಹಿಂಜರಿಯುವಂತೆ ಮಾಡುವ ಒಂದು ಕಾಂಪ್ಲೆಕ್ಸು. ನಮ್ಮ ಸೋಲಿಗೆ ಭಯವೇ ಕಾರಣ. ನಮ್ಮ ಸಾವಿಗೂ ಭಯವೇ ಕಾರಣ. ನಮಗೆ ಸೋಲುವ ಭಯ, ಸಾಯುವ ಭಯ. ಭಯವೇ ಸೋಲಿಸುತ್ತದೆ, ಸಾಯಿಸುತ್ತದೆ. ಅಂಥದ್ದೊಂದು ಕಾಂಪ್ಲೆಕ್ಸನ್ನು ನಮಗೆ ಆ ಅಭಯದಾಯಕ ಭಗವಂತ ಕೊಟ್ಟಿದ್ದಾದರೂ ಯಾಕೆ?

ಭಗವಂತ ಇದ್ದಾನೋ ಇಲ್ಲವೋ ಎಂಬ ಅನುಮಾನ, ಇಲ್ಲದೇ ಹೋದರೆ ಎಂಬ ಭಯ. ಇದ್ದರೂ ಭಯವೇ. ನಾವು ಇಲ್ಲದೇ ಇರುವುದರ ಕುರಿತೂ ಇರುವುದರೂ ಕುರಿತೂ ಸಮಾನವಾಗಿ ಭಯಪಡುತ್ತೇವೆ. ಯಾಕೆಂದರೆ ಭಯವಿರುವುದು ಬಯಲಿನಲ್ಲಲ್ಲ; ಮನಸಿನ ಆಲಯದಲ್ಲಿ.

ನೀವು ಸ್ವಾರ್ಥಿಯಾದ್ರೆ ಆಯಸ್ಸು ಕಡಿಮೆಯಾಗುತ್ತೆ!

ಏನಿದು ಭಯ?

ಅದು ನಮ್ಮನ್ನು ಕಾಯುವ ಶಕ್ತಿ ಅನ್ನುತ್ತದೆ ಮನೋವಿಜ್ಞಾನ. ಭಯವೇ ಇಲ್ಲದೆ ಹೋಗಿದ್ದರೆ ಗಂಟೆಗೆ ನೂರಿಪ್ಪತ್ತು ಕಿಲೋಮೀಟರ… ವೇಗದಲ್ಲಿ ಬೈಕು ಓಡಿಸಬಹುದಾಗಿತ್ತು. ಸಾವು ತಕ್ಪಣವೇ ಬರುತ್ತಿತ್ತು. ಆದರೆ ಹಾಳಾದ ಭಯ, ವೇಗ ಎಪ್ಪತ್ತು ದಾಟಿದ ತಕ್ಪಣ ಎದೆ ಡವಗುಡುತ್ತದೆ, ಕಾಲು ಬ್ರೇಕು ಒತ್ತುತ್ತದೆ. ಹೆದರಿ ಸಾಯುವವರೂ ಹೆದರಿಕೆಯಿಂದಲೇ ಬದುಕಿಕೊಳ್ಳುತ್ತಾರೆ.

ಹಾಗಿದ್ದರೆ ಭಯವೆಂದರೆ ಅಜ್ಞಾನವಲ್ಲ?

ಅಲ್ಲ, ಅದು ಜ್ಞಾನ. ಅದುವೇ ವಿಜ್ಞಾನ. ಭಯ ನಮ್ಮನ್ನು ಪೊರೆಯುವ ಶಕ್ತಿ. ಭಯವಿಲ್ಲದೆ ಹೋಗಿದ್ದರೆ ಕತ್ತಲಲ್ಲಿ ಎತ್ತರದ ಕಟ್ಟಡ ಏರಿ ನಿರಾತಂಕ ಅದರ ಅಂಚಿನಲ್ಲಿ ಕೂರಬಹುದಾಗಿತ್ತು. ಬೀಳುವ ಭಯ ಹಾಗೆ ಮಾಡದಂತೆ ತಡೆಯುತ್ತದೆ. ನಾನು ಹೆದರೋಲ್ಲ ಅಂತ ಮುನ್ನುಗ್ಗುವವರು ಒಮ್ಮೊಮ್ಮೆ ಗೆಲ್ಲುತ್ತಾರೆ, ಬದುಕುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಸಾಯುತ್ತಾರೆ. ಅದೂ ಭಯದ ಸಾವೇ. ಭಯವನ್ನು ಮೀರಲೆತ್ನಿಸುವುದು ಕೂಡ ಒಂದು ಭಯವೇ. ತಾಗಿಕೊಂಡಿರುವವನಷ್ಟೇ ನೀಗಿಕೊಂಡವನೂ ದುರ್ಬಲ!

ಯಾತನೆಗೆ ಅಂಜುವ ಮನುಷ್ಯ ತನ್ನ ಭಯದಲ್ಲೇ ಆ ಯಾತನೆಯನ್ನು ಅನುಭವಿಸಿ ಆಗಿರುತ್ತದೆ ಅನ್ನುತ್ತಾರೆ. ನಾಳೆ ನಿನಗೆ ಶಿಕ್ಪೆ$ಯಾಗುತ್ತದೆ ಎಂದು ಯಾರಿಗಾದರೂ ಹೇಳಿ ನೋಡಿ, ಶಿಕ್ಪೆ$ಯಾಗುವ ಮೊದಲೇ ಆತ ಅದರ ಯಾತನೆಯನ್ನು ಅನುಭವಿಸಿರುತ್ತಾನೆ. ಅದು ಮತ್ತೊಂದು ರೀತಿಯ ಭಯ.

ನಮ್ಮನ್ನು ಪ್ರೀತಿಸಿಕೊಳ್ಳದೇ ಇತರರನ್ನು ಪ್ರೀತಿಸುವುದು ಸಾಧ್ಯವೇ ಇಲ್ಲ

ಹಾಗಿದ್ದರೆ ಭಯದಲ್ಲಿ ವಿಧವಿಧಗಳಿವೆಯೇ? ಒಳ್ಳೆಯ ಭಯ, ಕೆಟ್ಟಭಯ ಎಂಬುದಿದೆಯೇ?

ಖಂಡಿತಾ, ಭಯವೇ ನಮ್ಮ ಶಕ್ತಿ ಮತ್ತು ಮಿತಿ. ತನ್ನ ಹತೋಟಿ ಮೀರಿದ ವೇಗದಲ್ಲಿ ಕಾರು ಓಡಿಸಲಾರದ ವ್ಯಕ್ತಿಯ ಭಯ ಕನ್‌ಸ್ಟ್ರಕ್ಟಿವ್‌. ಗೆಳೆಯರು ಗೇಲಿ ಮಾಡುತ್ತಾರೆ ಎಂಬ ಕಾರಣಕ್ಕೆ ವೇದಿಕೆ ಹತ್ತಿ ಎರಡು ಮಾತಾಡದವನ ಭಯ ಡಿಸ್ಟ್ರಕ್ಟಿವ್‌!

ಅಂದರೆ?

ಅಷ್ಟೇ. ಭಯವೇ ಜೀವನ್ಮುಖಿ, ಭಯವೇ ಜೀವವಿರೋಧಿ. ಭಯ ಬದುಕಿಸುತ್ತದೆ, ಭಯವೇ ಸಾಯಿಸುತ್ತದೆ. ಅದು ಚಾಕುವಿನಂತೆ, ನಾವು ಹೇಗೆ ಬಳಸುತ್ತೀವೋ ಹಾಗೆ. ನಾಳೆ ಸಾಯುವ ಭಯ ಇವತ್ತು ಒಬ್ಬನಲ್ಲಿ ಏನನ್ನಾದರೂ ಸಾಧಿಸುವ ಛಲ ತುಂಬಿದರೆ ಅದು ಸಾತ್ವಿಕ ಭಯ. ನಾಳೆ ಸಾಯುವ ಭಯ ಇವತ್ತೇ ಆತನನ್ನು ಸಾಯಿಸಿದರೆ ಅದು ತಾಮಸ ಭಯ.

ಭಯ ಹುಟ್ಟುವುದೇ ಮನಸ್ಸಿನಲ್ಲಿ, ಬೆಳೆಯುವುದು ನಮ್ಮ ಕಲ್ಪನೆಯಲ್ಲಿ, ಸಾಯುವುದು ನಮ್ಮ ವೈರಾಗ್ಯದಲ್ಲಿ. ಒಂಟಿಯಾಗಿದ್ದಾಗ ನಾಳೆ ಕೆಲಸ ಹೋದರೇನಪ್ಪ ಎಂಬ ಭಯ ಕಾಡುತ್ತದೆ. ಕೆಲಸವಿಲ್ಲದೇ ಪರದಾಡುವ ಸ್ಥಿತಿ ಕಣ್ಣಮುಂದೆ ಬರುತ್ತದೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ಎಂಬ ವೈರಾಗ್ಯದಲ್ಲಿ ಸಾಯುತ್ತದೆ.

ಆದರೆ ಅದೇ ಭಯ ಆತನಿಗೆ ಮತ್ತೊಂದು ಕೆಲಸ ಹುಡುಕುವಂತೆ ಪ್ರೇರೇಪಿಸಿದರೆ, ಆ ಹೊಸ ಕೆಲಸ ಅವನ ಭಾಗ್ಯದ ಬಾಗಿಲನ್ನೇ ತೆರೆದರೆ, ಮತ್ತೆಂದೂ ಭಯವಿಲ್ಲದಂತೆ ಆತ ಬದುಕಬಲ್ಲನೇ?

ಇಲ್ಲ, ಭಯ ಅಭದ್ರತೆಯಾಗಿ ಕಾಡುತ್ತದೆ. ಅಂಜಿಕೆಯಾಗಿ, ಅಧೈರ್ಯವಾಗಿ, ಅಪನಂಬಿಕೆಯಾಗಿ, ಸುಳ್ಳಾಗಿ, ಮುಳ್ಳಾಗಿ ಭಯ ಕಾಡುವುದುಂಟು. ಅದೊಂದು ಪಾರ್ಥೇನಿಯಂ ಕಳೆ. ರಕ್ತಬೀಜಾಸುರನ ಸಂತತಿ. ಭಯದಿಂದ ಬಿಡುಗಡೆಯೇ ಇಲ್ಲ. ನನ್ನ ಡಿಕ್ಪನರಿಯಲ್ಲಿ ಭಯವೆಂಬ ಪದವೇ ಇಲ್ಲ ಅನ್ನುವವನು ಒಂದೋ ಹುಂಬ ಅಥವಾ ಸುಳ್ಳುಗಾರ.

ಗಮನಿಸಿನೋಡಿ. ಆಶೆಗಳನ್ನು ನೀಗಿಕೊಂಡವರಿಗೆ, ಭಯವೂ ಇರುವುದಿಲ್ಲ. ಅಂದರೆ ಭಯವಿಲ್ಲದ ಸ್ಥಿತಿಯೆಂದರೆ ಹತಾಶೆಯದ್ದು. ಅಲ್ಲಿ ಆಶೆಗಳಿಲ್ಲ, ಭರವಸೆಗಳಿಲ್ಲ, ನಾಳೆಗಳಿಲ್ಲ, ಭಯವೂ ಇಲ್ಲ.

ಅಲೆಕ್ಸಾಂಡರ್‌ ಪೋಪ್‌ ಬರೆದ ;  ವಿವೇಕಿಗಳು ತುಳಿಯಲು ಅಂಜುವ ಹಾದಿಗೆ ಮೂರ್ಖರು ಕುಪ್ಪಳಿಸಿಕೊಂಡು ಸಾಗುತ್ತಾರೆ. ಅಂದರೆ ಅರ್ಥ ಇಷ್ಟೇ, ಭಯವಿಲ್ಲದವನು ಮೂರ್ಖ.

ಆಶೆಗೂ ಭಯಕ್ಕೂ ಅವಿನಾಭಾವ ಸಂಬಂಧ. ಆಶೆಯಿಂದಲೇ ಭಯ. ನಮ್ಮ ಆಶೆಗಳು ಹಿಡಿಯಷ್ಟುಭಯ ಬೊಗಸೆಯಷ್ಟು. ಪ್ರೀತಿಸುವುದಕ್ಕೆ ನಿರಾಕರಣದ ಭಯ, ಪೂಜಿಸುವುದಕ್ಕೆ ನಿರಾಕಾರದ ಭಯ, ಒಪ್ಪಿ$ಕೊಳ್ಳುವುದಕ್ಕೆ ಅಜ್ಞಾನದ ಭಯ, ಬಿಟ್ಟುಬಿಡುವುದಕ್ಕೆ ಜ್ಞಾನದ ಭಯ, ಶೂನ್ಯವಾಗುವುದಕ್ಕೆ ಅಹಂಕಾರದ ಭಯ, ಅಹಂಕಾರಿಯಾಗುವುದಕ್ಕೆ ಸಮಾಜದ ಭಯ.

ಪ್ರೀತಿಸುವವರಿಗೆ ಭಯವಿರೋಲ್ಲ ಅಂತಾರೆ. ಅದೂ ಸುಳ್ಳೇ. ಹಾಗೆ ನೋಡಿದರೆ ಪ್ರೀತಿ ಹುಟ್ಟುವುದೇ ಭಯದಲ್ಲಿ.

ಹಾಗಿದ್ದರೆ ನಾವು ಭಯಪಡಬೇಕಾದದ್ದು ಯಾವುದಕ್ಕೆ? ಕೇವಲ ಭಯಕ್ಕೆ.

ನಮ್ಮನ್ನು ಹೆದರಿಸುವುದು ಭಯವೇ. ಅದು ಹೇಗೆ ಜೀವವನ್ನು ಮುನ್ನೆಡೆಸುವ ಬೆಳಕೋ ಹಾಗೇ ಅದು ಜೀವವನ್ನು ತತ್ತರಿಸುವ ಕತ್ತಲೂ. ಈ ಕತ್ತಲಲ್ಲಿ ನಮಗೆ ಎಡವುವ ಭಯ, ಗುರಿ ತಲುಪದಿರುವ ಭಯ. ನಮ್ಮದಲ್ಲದ ಗುರಿ ತಲುಪುವ ಭಯ. ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು ಎಂಬಲ್ಲಿ ಬೆಳಕೇ ಅಭಯ.

ಹಿತೋಪದೇಶದಲ್ಲೊಂದು ಸೂಕ್ತಿಯಿದೆ; ದೋಷಗಳಿಗೆ ಹೆದರಿ ಕೆಲಸ ಆರಂಭಿಸದೇ ಇರುವುದು, ಅಜೀರ್ಣವಾಗುವ ಭಯದಿಂದ ಊಟ ಮಾಡುವುದನ್ನು ಬಿಟ್ಟಷ್ಟೇ ಮೂರ್ಖತನದ್ದು.

ನಮ್ಮ ಎಲ್ಲ ಪ್ರಾರ್ಥನೆಗಳ ಸ್ವರೂಪ ಅದೇ. ಎಲ್ಲಿ ಮನಕಳುಕಿರದೋ, ಎಲ್ಲಿ ತಲೆ ಬಾಗಿರದೋ.. ಎಂದೇ ಶಾಲೆಯಲ್ಲಿ ಹೇಳಿಕೊಡುವ ಪ್ರಾರ್ಥನೆ ಶುರುವಾಗುತ್ತದೆ. ನಮ್ಮ ಅಳುಕನ್ನು ಹೋಗಲಾಡಿಸು ಎಂದು ನಾವು ಕೇಳಿಕೊಳ್ಳುತ್ತೇವೆ. ಭಯವಿರಲಿ, ಅದನ್ನು ಮೀರುವ ಆತ್ಮವಿಶ್ವಾಸವೂ ಇರಲಿ ಎಂದಷ್ಟೇ ಅದರ ಅರ್ಥ.

ನಾವು ಭಗವಂತನನ್ನು ಕೇಳುವುದೆಲ್ಲ ಅಭಯಪ್ರದಾನವನ್ನೇ. ನಿರ್ಭಯವಾದ ಸ್ಥಿತಿಯಲ್ಲಿ ಮನಸ್ಸು ತುಂಬ ಕ್ರಿಯಾಶೀಲವೂ ಸೃಜನಶೀಲವೂ ಆಗಿರುತ್ತದಂತೆ. ಒಳ್ಳೆಯ ಕಾವ್ಯ ಹುಟ್ಟುವುದು ಅಂಥ ಸ್ಥಿತಿಯಲ್ಲೇ.

ಹಾಗಿದ್ದರೆ ಭಯವನ್ನು ಮೀರುವುದು ಹೇಗೆ?

ನಮ್ಮ ಶಕ್ತಿಯನ್ನು ಅರ್ಥಮಾಡಿಕೊಳ್ಳುವ ಮೂಲಕ, ನಮ್ಮ ಆಶೆಗಳನ್ನು ಹತ್ತಿಕ್ಕಿಕೊಳ್ಳುವ ಮೂಲಕ, ನಮ್ಮ ಉದ್ದೇಶವನ್ನು ಸಾತ್ವಿಕ ಆಗಿಸುವ ಮೂಲಕ. ಈ ಜಗತ್ತಿನ ಅತ್ಯಂತ ಒಳ್ಳೆಯ ಮತ್ತು ದಕ್ಪ$ ಪೊಲೀಸ… ಅಧಿಕಾರಿಯೆಂದರೆ ಭಯ. ಭಯದಿಂದಲೇ ನಾವು ಸಿಟ್ಟಿಗೆದ್ದವರಿಗೆ ಚಾಕು ಹಾಕುವುದಿಲ್ಲ, ಮೋಸ ಮಾಡಿದವರಿಗೆ ಕಪಾಳಕ್ಕೆ ಹೊಡೆಯುವುದಿಲ್ಲ. ಬದಲಾಗಿ ಮತ್ತೆ ಗೆಲ್ಲುತ್ತೇವೆ ಎಂಬ ಛಲದೊಂದಿಗೆ ಮತ್ತೊಮ್ಮೆ ಶುರುಮಾಡುತ್ತೇವೆ. ಅದಕ್ಕಿಂತ ಧೈರ್ಯ ಮತ್ತೊಂದಿಲ್ಲ. ಸರಿಸುಮಾರು ನಲುವತ್ತು ವರುಷಗಳ ಕಾಲ ಕಟ್ಟಿದ ಬದುಕು ಕುಸಿದು ಬಿದ್ದಾಗ ಮತ್ತೆ ಕಟ್ಟುತ್ತೇನೆ ಎಂದು ಹೊರಡುವವನು ಧೈರ್ಯವಂತ.

ವಿವೇಕಾನಂದರು ಯೂತ್ ಐಕಾನ್ ಆಗಿದ್ದು ಹೇಗೆ?

ಧೈರ್ಯವನ್ನು ಪಾಶವೀ ಶಕ್ತಿಗೂ ಹೋಲಿಸುವುದುಂಟು. ಶೂರರೂ ವೀರರೂ ಆಗಿರಬೇಕು ಎನ್ನುವುದು ಒಂದು ಭ್ರಮೆ. ಅದು ಹಿಂಸೆಗೆ ತೆರೆದುಕೊಂಡ ಮನಸ್ಸಿನ ಮಾತು. ನಿನ್ನನ್ನು ಒಂದೇ ಕ್ಪಣದಲ್ಲಿ ಕತ್ತರಿಸಿ ಎಸೆಯಬಲ್ಲೆ ಅನ್ನುವುದು ಧೈರ್ಯವಲ್ಲ, ನಿನ್ನ ಕತ್ತಿಗೆ ಒಂದೇ ಕ್ಪ$ಣದಲ್ಲಿ ಎದೆಗೊಡಬಲ್ಲೆ ಎನ್ನುವುದು ಅಭಯ. ಕೊಲ್ಲುವವನಷ್ಟುಭಯಗ್ರಸ್ತ ಮತ್ತೊಬ್ಬನಿಲ್ಲ, ಸಲಹುವವನಷ್ಟುಧೆರ್ಯಶಾಲಿ ಕೂಡ.

ಸಾಮಾನ್ಯವಾಗಿ ಭಯವನ್ನು ಗೆಲ್ಲುವ ಶಕ್ತಿಯಿರುವುದು ಸಿಟ್ಟಿಗೆ ಮಾತ್ರ. ಸಿಟ್ಟು ಬಂದಾಗ ಎಂಥ ನಡುರಾತ್ರಿಯೇ ಆಗಲೀ ನೀವು ಯಾವ ಭಯವೂ ಇಲ್ಲದೇ ನಡೆದುಹೋಗುತ್ತೀರಿ. ವೇಗವಾಗಿ ಕಾರು ಓಡಿಸುತ್ತೀರಿ, ನಿಮ್ಮ ಮೇಲಧಿಕಾರಿಯ ಕಪಾಳಕ್ಕೆ ಬಿಗಿಯುತ್ತೀರಿ, ಹೆಂಡತಿಯನ್ನು ಕೊಲೆ ಮಾಡುತ್ತೀರಿ.

 

ಆಮೇಲೆ ಅದಕ್ಕೆ ತಕ್ಕ ಶಿಕ್ಪೆಯೋ ಪ್ರಾಯಶ್ಚಿತ್ತವೋ ಆಗುತ್ತದೆ. ಅದಕ್ಕೇ ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು ಅನ್ನುತ್ತಾರೆ. ವಿವೇಕಯಿದ್ದಲ್ಲಿ ಭಯವೂ ಇರುವುದಿಲ್ಲ. ತಿಳುವಳಿಕೆಯ ಆಗಮನ; ಭಯದ ನಿರ್ಗಮನ. ಒಂದು ಮಾತಿದೆ: ನೀವು ಒಳಗೆ ಅಡಿಯಿಡಲು ಭಯಪಡುವ ಗುಹೆಯ ಒಳಗೇ ನೀವು ಹುಡುಕುವ ಸಂಪತ್ತು ಅಡಗಿರುತ್ತದೆ.

- ಜೋಗಿ 

click me!