ಹಾಲುಗಲ್ಲದ ಕಂದನ ಕೈಲಿ ಫೀಡಿಂಗ್ ಬಾಟಲ್ ಕ್ಲೀನ್ ಮಾಡಿಸಿದ ಪೋಷಕರು: ವೀಡಿಯೋ ವೈರಲ್, ಆಕ್ರೋಶ

By Anusha Kb  |  First Published Sep 26, 2024, 6:14 PM IST

ಬಾಟಲ್‌ನ ತಳ ಸ್ವಚ್ಚಗೊಳಿಸಲು ಪೋಷಕರು ಮಾಡಿದ್ದು ಅಮಾನವೀಯ ಕೆಲಸ. ಹಾಲು ಕುಡಿಯುವ ಪುಟ್ಟ ಕಂದನ ಕೈಯನ್ನು ಬ್ರಶ್‌ನಂತೆ ಬಳಸಿ ಬಾಟಲಿಯ ತಳವನ್ನು ಸ್ವಚ್ಛಗೊಳಿಸಿ, ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೋಷಕರ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.


ಬಾಯಿ ಪುಟ್ಟದಾಗಿರುವ ಬಾಟಲ್‌ನ ತಳ ಸ್ವಚ್ಚಗೊಳಿಸುವುದು ಬಹಳ ಕಷ್ಟದ ಕೆಲಸ ಆದರೆ ಈಗ ಎಲ್ಲದಕ್ಕೂ ಒಂದು ಪರಿಹಾರ ಇರುವಂತೆ ಅದಕ್ಕೂ ಪರಿಹಾರ ಬಂದಿದ್ದು, ಕೋಲಿನಂತಹ ಉದ್ದದ ಬ್ರಶ್‌ ಮೂಲಕ ಬಾಟಲಿಯ ತಳವನ್ನು ಸ್ವಚ್ಛಗೊಳಿಸಬಹುದು. ಆದರೆ ಇಲ್ಲೊಬ್ಬರು ಪೋಷಕರು ಮಾತ್ರ ಮಾಡಿದ್ದು ಮಾತ್ರ ಅಮಾನವೀಯ ಕೆಲಸ. ಹಾಲು ಕುಡಿಯುವ ಪುಟ್ಟ ಕಂದನ ಕೈಯನ್ನು ಬ್ರಶ್‌ನಂತೆ ಬಳಸಿ ಪೋಷಕರು ಬಾಟಲಿಯ ತಳವನ್ನು ಸ್ವಚ್ಛಗೊಳಿಸಿದ್ದಾರೆ. ಜೊತೆಗೆ ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೋಷಕರ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಆಗಷ್ಟೇ ಜನಿಸಿದ ಮಗು ಬಿಡಿ ಕನಿಷ್ಠ ಮಗುವಿಗೆ ಎರಡು ವರ್ಷ ತುಂಬುವವವರೆಗಾದರೂ ಪೋಷಕರು ಮಕ್ಕಳನ್ನು ತುಂಬಾ ಜತನದಿಂದ ನೋಡಿಕೊಳ್ಳುತ್ತಾರೆ. ಸ್ವಲ್ಪ ಕಣ್ತಪ್ಪಿದ್ದರು ಪುಟ್ಟ ಮಕ್ಕಳು ದೊಡ್ಡ ಅನಾಹುತವನ್ನೇ ಮಾಡಿ ಬಿಡುತ್ತಾರೆ. ಆದರೆ ಈ ಪೋಷಕರು ಮಾತ್ರ ಪೂರ್ತಿ ವಿಚಿತ್ರ ಪುಟ್ಟ ಕಂದನ ಕೈನಲ್ಲಿ ಕೆಲಸ ಮಾಡಿಸಿಕೊಂಡಿದ್ದಾರೆ. ಅದೂ ಪಾತ್ರೆ ತೊಳೆಯುವ ಕೆಲಸ. 

Tap to resize

Latest Videos

undefined

ಪೋಷಕರಿಗೆ ಮಕ್ಕಳ ಪಾಲನೆಯ ಸಲಹೆ ನೀಡಿ, ಮತ್ತೆ ಕೆಂಗಣ್ಣಿಗೆ ಗುರಿಯಾದ ಇನ್ಫಿ ನಾರಾಯಣ ಮೂರ್ತಿ!

ವೈರಲ್ ಆದ ವೀಡಿಯೋದಲ್ಲೇನಿದೆ. 
ನವಜಾತ ಶಿಶುವಿನ ಕೈನಲ್ಲಿ ಹಾಲಿನ ಬಾಟಲ್‌ ಸ್ವಚ್ಛಗೊಳಿಸುವ ಕೆಲಸವಿದು. ಟ್ವಿಟ್ಟರ್‌ನಲ್ಲಿ ಚೈಲ್ಡ್ ಲೇಬರ್ ಅಂತ ಈ ವೀಡಿಯೋ ಪೋಸ್ಟ್ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಪೋಷಕರು ಮಗುವಿನ ಹಾಲಿನ ಬಾಟಲನ್ನು ಹೊರಗೆ ತೆಗೆದಿದ್ದಾರೆ. ಅದನ್ನು ಸೋಪು ನೀರಿನಲ್ಲಿ ಅದ್ದಿಡಲಾಗಿರುತ್ತದೆ. ನಂತರ ಮಗುವಿನ ಕೈಯನ್ನು ಸೋಪು ನೀರಿನಲ್ಲಿ ಮುಳುಗಿಸಿ ಬಳಿಕ ಹಾಲಿನ ಬಾಟಲಿನೊಳಗೆ ಕೈಯನ್ನು ತುಂಬಿಸಿ ಸುತ್ತಲೂ ಕೈ ತಿರುಗಿಸಿ ಮಗುವಿನ ಕೈಯಲ್ಲೇ ಬಾಟಲ್‌ನ ಒಳಭಾಗವನ್ನು ಸ್ವಚ್ಛಗೊಳಿಸುತ್ತಾರೆ. ಬಾಟಲನ್ನು ಸ್ವಚ್ಛಗೊಳಿಸಿದ ನಂತರ ಮಿಲ್ಕ್ ಬಾಟಲ್‌ನ ಮುಚ್ಚಳವನ್ನು ಸೋಪು ನೀರಿನಿಂದ ತೆಗೆದು ಅದನ್ನು ಮಗುವಿನ ಕೈನಲ್ಲೇ ತೊಳೆಸುತ್ತಾರೆ. ಅಲ್ಲದೇ ಅದರಲ್ಲಿರು ನಿಪ್ಪಲ್‌ನಲ್ಲಿಯೂ ಮಗುವಿನ ಕೈ ಬೆರಳನ್ನೂ ತೂರಿಸಿ ಸ್ವಚ್ಛಗೊಳಿಸುತ್ತಾರೆ. ಬಳಿಕ ಆ ಪುಟ್ಟ ಕೈಗಳಲ್ಲೇ ಅದನ್ನು ನೆನೆ ಹಾಕಿಸುತ್ತಾರೆ. ಅಲ್ಲಿಗೆ ವೀಡಿಯೋ ಕೊನೆಗೊಂಡಿದೆ. 

ಐಶ್ವರ್ಯಾ ರೈಯಂತೆ ಮಗಳಿಗಾಗಿ ದಾದಿ ನೇಮಿಸದೇ ತಾವೇ ನೋಡ್ಕೋತಾರಂತೆ ದೀಪಿಕಾ ಪಡುಕೋಣೆ

19 ಸೆಕೆಂಡ್‌ಗಳ ಈ ವೀಡಿಯೋವನ್ನು 1.8 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದು, ಪೋಷಕರ ವರ್ತನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಸೋಪು ನೀರುವ ವಿಷಕಾರಿಯಾಗಿದ್ದು, ನವಜಾತ ಶಿಶುಗಳಿಗೆ ಹಾಣಿಯುಂಟು ಮಾಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಪೋಷಕರು ಯಾವುದು ಕೂಡ ಉಚಿತವಾಗಿ ಬರುವುದಿಲ್ಲ ಎಂಬುದನ್ನು ಈಗಲೇ ಮಗುವಿಗೆ ತಿಳಿಸಿ ಹೇಳುತ್ತಿದ್ದಾರೆ. ಬದುಕಿ ಉಳಿಯಲು ಕೆಲಸ ಮಾಡುವುದು ಅತ್ಯಗತ್ಯ ಎಂಬುದನ್ನು ತೋರಿಸುತ್ತಿದ್ದಾರೆ ಎಂದು ಒಬ್ಬರು ವೀಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ.  ಆದರೆ ಬಹುತೇಕರು ಪೋಷಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರು ಮಗುವಿನ ಲಾಭ ಪಡೆಯುತ್ತಿದ್ದಾರೆ. ಮಗುವಿನ ಕೈಯನ್ನು ಬಳಸುವ ಮೂಲಕ ಮಗುವನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಬಾಲಕಾರ್ಮಿಕ ಪದ್ಧತಿ, ನಿಮಗೆ ಪಾಪ ತಟ್ಟುವುದು, ಇದು ತಪ್ಪು ಕೆಲಸ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ.

ಅದೇನೆ ಇರಲಿ ಪುಟ್ಟ ಮಕ್ಕಳಿಗೆ ಎಳವೆಯಲ್ಲೇ ಜೀವನ ಪಾಠ ಕಲಿಸಬೇಕು ಎಂಬುದು ನಿಜ ಆದರೆ. ಹೀಗೆ ವರ್ಷ ತುಂಬದ ಮಗುವಿನ ಪುಟ್ಟ ಕೈಯನ್ನು ಕೆಮಿಕಲ್ ಇರುವ ಸೋಪ್ ವಾಟರ್‌ನಲ್ಲಿ  ಮುಳುಗಿಸಿ ಪಾತ್ರೆ ತೊಳೆಸುತ್ತಿರುವುದು ಎಷ್ಟು ಸರಿ?

 

बाल मजदूरी 😭🤐 pic.twitter.com/tHHMEvnItV

— Prof cheems ॐ (@Prof_Cheems)

 

click me!