ಇದ್ದಕ್ಕಿದ್ದಂತೆ ರಕ್ತದಂತೆ ಕೆಂಪಾಯ್ತು ನದಿ..ಘಟನೆಯ ಹಿಂದಿದೆ ನಿಗೂಢ ಕಾರಣ!

By Vinutha Perla  |  First Published Dec 27, 2023, 3:35 PM IST

ನದಿಯಲ್ಲಿ ಸಾಮಾನ್ಯವಾಗಿ ತಿಳಿಯಾದ ತಾಜಾ ನೀರು ಹರಿಯೋದು ಸಾಮಾನ್ಯ. ಆದ್ರೆ ಇಲ್ಲೊಂದೆಡೆ ಮಾತ್ರ ನದಿಯಲ್ಲಿ ಸಹಜವಾದ ನೀರು ಹರಿಯುವ ಬದಲು ಗಾಢ ಕೆಂಪು ಬಣ್ಣದ ರಕ್ತದ ಕೋಡಿಯಂತಿರೋ ನೀರು ಹರೀತಿದೆ. ಜನರು ಗಾಬರಿಯಾಗಿದ್ದಾರೆ.


ನದಿಯಲ್ಲಿ ಸಾಮಾನ್ಯವಾಗಿ ತಿಳಿಯಾದ ತಾಜಾ ನೀರು ಹರಿಯೋದು ಸಾಮಾನ್ಯ. ಆದ್ರೆ ಇಲ್ಲೊಂದೆಡೆ ಮಾತ್ರ ನದಿಯಲ್ಲಿ ಸಹಜವಾದ ನೀರು ಹರಿಯುವ ಬದಲು ಗಾಢ ಕೆಂಪು ಬಣ್ಣದ ರಕ್ತದ ಕೋಡಿಯಂತಿರೋ ನೀರು ಹರೀತಿದೆ. ಈ ಆಘಾತಕಾರಿ ಘಟನೆ ನಡೆದಿರೋದು ರಷ್ಯಾದಲ್ಲಿ. ಇಲ್ಲಿನ ಜನರು ಕೆಂಪು ಬಣ್ಣಕ್ಕೆ ತಿರುಗಿರೋ ಈ ನದಿಯನ್ನು ನೋಡಿ ಗಾಬರಿಯಾಗಿದ್ದಾರೆ. ದಕ್ಷಿಣ ರಷ್ಯಾದ ಕೆಮೆರೊವೊದಲ್ಲಿನ ಇಸ್ಕಿಟಿಮ್ಕಾ ನದಿಯು ಈ ಆತಂಕಕಾರಿ ರೂಪಾಂತರಕ್ಕೆ ಒಳಗಾಗಿದೆ. ನದಿಯ ಸಂಪೂರ್ಣ ನೀರು, ಕೆಂಪು ಬಣ್ಣಕ್ಕೆ ತಿರುಗಿದ್ದು, ಆತಂಕವನ್ನುಂಟು ಮಾಡಿದೆ.

ಕೆಂಪು ಬಣ್ಣಕ್ಕೆ ತಿರುಗಿದ ನದಿಯನ್ನು ನೋಡಿ ಬಹುತೇಕರು ಇದು ರಕ್ತದ ಕೋಡಿ ಎಂದು ಅಂದುಕೊಂಡಿದ್ದರು. ಆದರೆ ಅಸಲಿಗೆ ಇದು ರಕ್ತವಲ್ಲ. ಬದಲಿಗೆ ನೀರು ಕೆಂಪು ಬಣ್ಣಕ್ಕೆ ತಿರುಗಿದೆ. ಹೀಗಾಗಿ ಸಂಪೂರ್ಣ ನದಿಯಲ್ಲಿ ರಕ್ತ ಹರಿಯುವಂತೆ ಕಾಣುತ್ತಿದೆ. ಹೀಗಾಗಿ ಸಹಜವಾಗಿಯೇ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ನಿಗೂಢ ಘಟನೆಯು ನೀರಿನ ಗುಣಮಟ್ಟದ ಸಮಸ್ಯೆಯಿಂದ ಉಂಟಾಗಿದೆ ಎಂದು ಹೇಳಲಾಗ್ತಿದೆ. ನದಿಯ ಬಣ್ಣದ ಬದಲಾವಣೆ, ನೀರಿನ ಮಾಲಿನ್ಯವನ್ನು ಎದುರಿಸಲು ಜಾಗತಿಕ ಕ್ರಮದ ತುರ್ತು ಅಗತ್ಯವನ್ನು ಒತ್ತಿಹೇಳಿದೆ.

Tap to resize

Latest Videos

ಅಕ್ಕ ಪಕ್ಕವೇ ಹರಿಯುತ್ತೆ ಕಪ್ಪು-ಬಿಳಿ ನದಿ, ಆದ್ರೂ ಒಂದಾಗೋಲ್ಲ, ಪ್ರಕೃತಿ ವಿಸ್ಮಯಕ್ಕೆ ತಲೆ ಬಾಗದಿರಲು ಆಗುತ್ತಾ?

ಕೆಂಪು ನೀರಿನ ನದಿಗಿಳಿಯದ ಬಾತುಕೋಳಿಗಳು
ಸ್ಥಳೀಯರು, ನದಿಯ ಬಣ್ಣ ಬದಲಾಗಿರುವುದನ್ನು ಮೊದಲು ಗಮನಿಸಿದರು. ಯಾವಾಗಲೂ ಸಾದಾ ಬಣ್ಣದಲ್ಲಿದ್ದ ನದಿ, ದಿಢೀರ್ ಆಗಿ ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡಿತು. ಅಷ್ಟೇ ಅಲ್ಲ, ಯಾವಾಗಲೂ ನದಿಯಲ್ಲಿ ಈಜುತ್ತಿದ್ದ ಬಾತುಕೋಳಿಗಳು ನೀರಿಗಿಳಿಯಲು ನಿರಾಕರಿಸಿದವು. ಹೀಗಾಗಿ ಈ ವಿಷಯ ಹೆಚ್ಚು ಮಂದಿಯ ಗಮನ ಸೆಳೆಯಿತು. ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆದವು. ಜನರು ಪರಿಸರ ಮಾಲಿನ್ಯ, ನೀರಿನ ಮಾಲಿನ್ಯದ ಬಗ್ಗೆ ಹೆಚ್ಚು ಚರ್ಚಿಸಿದರು.

ಪರಿಸರ ಅಧಿಕಾರಿಗಳು, ಗುರುತಿಸಲಾಗದ ಮಾಲಿನ್ಯಕಾರಕಗಳಿಂದ ನದಿ ಕೆಂಪು ಬಣ್ಣಕ್ಕೆ ತಿರುಗಿದೆ ಎಂಬುದಾಗಿ ತಿಳಿಸಿದ್ದಾರೆ. ಕೆಮೆರೋವ್‌ನ ಡೆಪ್ಯುಟಿ ಗವರ್ನರ್ ಆಂಡ್ರೇ ಪನೋವ್ ನಗರದ ಚಂಡಮಾರುತದ ಒಳಚರಂಡಿ ವ್ಯವಸ್ಥೆಯನ್ನು ಮಾಲಿನ್ಯಕ್ಕೆ ಕಾರಣವಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಮಾಹಿತಿ ನೀಡಿದೆ. ನದಿಯ ಬಣ್ಣ ಬದಲಾವಣೆಗೆ ನಿರ್ದಿಷ್ಟ ಕಾರಣವೇನು ಅನ್ನೋದು ಕೆಮಿಕಲ್‌ ಟೆಸ್ಟ್‌ನಿಂದ ತಿಳಿದುಬರಬೇಕಿದೆ.

ನಿಮಗೆ ಗೊತ್ತಾ? ಭಾರತದ ಪ್ರಮುಖ ನದಿಗಳಲ್ಲೊಂದಾದ ಈ ನದಿ ಭೂಮಿ ಮೇಲೆ ಇಲ್ವೇ ಇಲ್ಲ!

2020ರಲ್ಲಿ ಉತ್ತರ ಸೈಬೀರಿಯಾದಲ್ಲಿ ನಡೆದಿತ್ತು ಇಂಥದ್ದೇ ಘಟನೆ
ಈ ಹಿಂದೆ 2020ರ ಜೂನ್‌ನಲ್ಲಿ ಉತ್ತರ ಸೈಬೀರಿಯಾದ ನೊರಿಲ್ಸ್ಕ್ ಬಳಿಯ ವಿದ್ಯುತ್ ಕೇಂದ್ರದಲ್ಲಿ ಡೀಸೆಲ್ ಜಲಾಶಯದ ಕುಸಿತದ ನಂತರ ಹಲವಾರು ಆರ್ಕ್ಟಿಕ್ ನದಿಗಳು ಕೆಂಪು ಬಣ್ಣಕ್ಕೆ ತಿರುಗಿದ್ದವು. ರಷ್ಯಾದಲ್ಲಿ ಸದ್ಯ ನಡೆದಿರೋ ಈ ಘಟನೆ ಈ ಹಿಂದಿನ ಘಟನೆಯನ್ನು ನೆನಪಿಸಿದೆ. ದುರಂತದಿಂದಾಗಿ 15,000 ಟನ್ ಇಂಧನ ನದಿಗೆ ಮತ್ತು 6,000 ಟನ್ ಮಣ್ಣಿಗೆ ಸೇರ್ಪಡೆಗೊಂಡಿತು. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತುರ್ತು ಪರಿಸ್ಥಿತಿಯನ್ನು ಘೋಷಿಸಲು ಕಾರಣವಾಯಿತು. 

ಇಸ್ಕಿಟಿಮ್ಕಾ ನದಿ ಮತ್ತು ನೊರಿಲ್ಸ್ಕ್ ಘಟನೆಗಳು ಪ್ರಪಂಚದಾದ್ಯಂತ ಕೈಗಾರಿಕಾ ಚಟುವಟಿಕೆಗಳು ಮತ್ತು ಇತರ ಹಲವು ಕಾರಣಗಳಿಂದ ಹೆಚ್ಚುತ್ತಿರುವ ಪರಿಸರ ಸವಾಲುಗಳನ್ನು ಒತ್ತಿಹೇಳುತ್ತವೆ. ನೊರಿಲ್ಸ್ಕ್‌ನಲ್ಲಿ ಜೂನ್ 2020ರ ಇಂಧನ ಸೋರಿಕೆಯು ಈ ಪ್ರದೇಶದಲ್ಲಿ ಅತ್ಯಂತ ಕೆಟ್ಟದಾಗಿದೆ ಎಂದು ಪರಿಗಣಿಸಲಾಗಿದೆ, ಈ ರೀತಿ ನೀರಿನಲ್ಲಿ ಕರಗುವ ಇಂಧನವು ಸಮುದ್ರ ಜೀವಿಗಳಿಗೆ ತೀವ್ರ ಅಪಾಯವನ್ನುಂಟು ಮಾಡುತ್ತದೆ. ಪರಿಸರದ ಮೇಲೆ ಇದರ ಪ್ರಭಾವವನ್ನು ತಗ್ಗಿಸಲು ಸೂಕ್ತ ಕ್ರಮದ ಅಗತ್ಯವನ್ನು ಎತ್ತಿ ತೋರಿಸುತ್ತದೆ. 

click me!