ಡಿಕೆಶಿಗೆ ಸಿಎಂ ಪಟ್ಟ ಸಿಕ್ಕಿದ್ರೆ ಸಂತೋಷ : JDS ಶಾಸಕ

Published : Nov 12, 2019, 11:34 AM IST
ಡಿಕೆಶಿಗೆ ಸಿಎಂ ಪಟ್ಟ ಸಿಕ್ಕಿದ್ರೆ ಸಂತೋಷ : JDS ಶಾಸಕ

ಸಾರಾಂಶ

ಕರ್ನಾಟಕದಲ್ಲಿ ಬಿಜೆಪಿ ಸದ್ಯಕ್ಕೆ ಅಧಿಕಾರ ಕಳೆದುಕೊಳ್ಳುವುದಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದ್ರೆ ನಮಗೆ ಸಂತೋಷ ಎಂದು ಜೆಡಿಎಸ್ ಶಾಸಕರೋರ್ವರು ಹೇಳಿದ್ದಾರೆ.

ಕೋಲಾರ (ನ.12) :ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ  ಸದ್ಯಕ್ಕೆ ಅಧಿಕಾರ ಕಳೆದುಕೊಳ್ಳುವುದಿಲ್ಲ ಎಂದು ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಹೇಳಿದ್ದಾರೆ. 

ಕೋಲಾರದಲ್ಲಿ ಮಾತನಾಡಿದ ಶಾಸಕ ಶ್ರೀನಿವಾಸ ಗೌಡ ನಮ್ಮ ನಾಯಕ ಎಚ್.ಡಿ.ದೆವೇಗೌಡ ಅವರೂ ಸಹ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂದರು. 

ಸದ್ಯದ ರಾಜ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಚುನಾವಣೆಗೆ ಹೋಗಲು ಯಾವ ಪಕ್ಷಗಳು ಕೂಡ ಸಿದ್ಧವಿಲ್ಲ. ಹೋದರೆ ಮೈಮೇಲಿನ ಕೂಡಲು ಉದುರಿ ಹೋಗುತ್ತೆ ಎಂದರು. 

ಇನ್ನು ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿ.ಕೆ.ಶಿವಕುಮಾರ್ ಅವರು ಸಿಎಂ ಆದರೆ ನಮಗೆ ಸಂತೋಷ.  ನಮ್ಮ ಸಮುದಾಯವದವರು ಸಿಎಂ ಆಗುತ್ತಾರೆ ಎಂದರೆ ಸ್ವಾಗತ ಮಾಡುತ್ತೇನೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ವೇಳೆ ಕೆ.ಎಚ್ ಮುನಿಯಪ್ಪ ಅವರ ಬಗ್ಗೆಯೂ ಮಾತನಾಡಿದ ಶ್ರೀನಿವಾಸ್ ಗೌಡ, ಚುನಾವಣೆಯಲ್ಲಿ ಸೋತ ಬಳಿಕ ಕೈ ಕಟ್ಟಿ ಕೂರುವುದು ಒಳ್ಳೆಯದಲ್ಲ. ನಾನು ಎರಡು ಬಾರಿ ಸೋತಾಗ ಈ ರೀತಿ ಕೈ ಕಟ್ಟಿ ಕೂರಲಿಲ್ಲ ಎಂದರು. 

ಈಗಾಗಲೇ ಜೆಡಿಎಸ್ ಮುಖಂಡರಾದ ದೇವೇಗೌಡರು ಬಿಜೆಪಿಯ ಪರವಾಗಿ ಮಾತುಗಳನ್ನು ಆಡುತ್ತಿದ್ದು, ಮುಂಬರುವ ಉಪ ಚುನಾವಣೆಯಲ್ಲಿಯೂ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿ ಟಫ್ ಫೈಟ್ ನೀಡಲು ಮುಂದಾಗಿದ್ದು, ಜೆಡಿಎಸ್ ಶಾಸಕರೂ ಕೂಡ ಬಿಜೆಪಿ ಸರ್ಕಾರ ಸದೃಢವಾಗಿರಲಿದೆ ಎಂದಿದ್ದಾರೆ. 

PREV
click me!

Recommended Stories

ಗಗನಕ್ಕೇರಿದ ಟೊಮೆಟೊ ದರ, ಕೋಲಾರದ ಗೂದೆ ಹಣ್ಣಿಗೆ ದೇಶದಾದ್ಯಂತ ಇನ್ನಿಲ್ಲದ ಬೇಡಿಕೆ!
Kolar Road Accident: ಬ್ರಿಡ್ಜ್‌ನಿಂದ ಕೆಳಗೆ ಬಿದ್ದ ಕಾರು, ನಾಲ್ವರು ಯುವಕರು ಸ್ಥಳದಲ್ಲೇ ಸಾವು!