ಶಿರಾ ತಾಲೂಕಿನಲ್ಲಿ ಈಗಾಗಲೇ ಹಲವಾರು ಕಾಲೇಜುಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸ್ಥಾಪನೆಯಾಗಿವೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಕೌಶಲ್ಯಾಧಾರಿತ ವಿದ್ಯಾಭ್ಯಾಸ ಮಾಡಿ ಮುಂದಿನ ದಿನಗಳಲ್ಲಿ ಶಿರಾ ತಾಲೂಕಿನಲ್ಲಿಯೇ ಉನ್ನತ ಹುದ್ದೆ ಪಡೆಯಿರಿ ಎಂದು ರಾಜ್ಯ ಸರ್ಕಾರ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದರು.
ಶಿರಾ : ಶಿರಾ ತಾಲೂಕಿನಲ್ಲಿ ಈಗಾಗಲೇ ಹಲವಾರು ಕಾಲೇಜುಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸ್ಥಾಪನೆಯಾಗಿವೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಕೌಶಲ್ಯಾಧಾರಿತ ವಿದ್ಯಾಭ್ಯಾಸ ಮಾಡಿ ಮುಂದಿನ ದಿನಗಳಲ್ಲಿ ಶಿರಾ ತಾಲೂಕಿನಲ್ಲಿಯೇ ಉನ್ನತ ಹುದ್ದೆ ಪಡೆಯಿರಿ ಎಂದು ರಾಜ್ಯ ಸರ್ಕಾರ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದರು.
ಶನಿವಾರ ನಗರದ ಶ್ರೀ ಕೆ. ಮಲ್ಲಣ್ಣ ಸ್ವಾರಕ ರಂಗನಾಥ ಪ.ಪೂ. ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ 2023-24ನೇ ಸಾಲಿನ, ಸಾಂಸ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ದಿ. ಶ್ರೀ ಕೆ.ಮಲ್ಲಣ್ಣ ಸ್ಮಾರಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ಶ್ರೀ ರಂಗನಾಥ ಆಂಗ್ಲ ಪ್ರಾಥಮಿಕ ಹಾಗೂ ಗಳ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
undefined
ಶಿರಾ ತಾಲೂಕು ತುಮಕೂರಿನ ನಂತರ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ತಾಲೂಕಿಗೆ ಹೊಂದಿಕೊಂಡಂತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾಗುವ ಸಾಧ್ಯತೆ ಇದ್ದು, ಇದಕ್ಕಾಗಿ ನಾನೂ ಶ್ರಮಿಸುತ್ತಿದ್ದೇನೆ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಮಾತನಾಡಿ, ಶಿರಾ ತಾಲೂಕಿನ ಮೂಲಕ ಚೆನೈ-ಪುಣೆ ರಸ್ತೆ ಮಾಡಿದರೆ ಇಂಡಸ್ಟ್ರೀಯಲ್ ಕಾರಿಡಾರ್ ಆಗುತ್ತದೆ. ಶಿರಾಕ್ಕೆ ಹೊಂದಿಕೊಂಡಂತೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣವೂ ಬರುವ ಸಾಧ್ಯತೆ ಇದೆ. ಶಿರಾದಲ್ಲಿರುವ ಕೈಗಾರಿಕಾ ವಲಯ ಇದರಿಂದ ಅಭಿವೃದ್ಧಿ ಹೊಂದುತ್ತಿದೆ. ಇವೆಲ್ಲಾ ಮುಂದಿನ ಯುವ ಪೀಳಿಗೆಗೆ ಪೂರಕವಾಗಿ ಅಭಿವೃದ್ಧಿ ಹೊಂದುತ್ತಿದೆ. ಬರದ ನಾಡು ಎಂದು ಕರೆಸಿಕೊಳ್ಳುತ್ತಿದ್ದ ಶಿರಾ ಅಭಿವೃದ್ಧಿ ಹೊಂದಿದ ನಾಡಾಗುತ್ತದೆ. ಮುಂದೆ ಬರುವ ಅವಕಾಶಗಳನ್ನು ಶಿರಾ ತಾಲೂಕಿನ ವಿದ್ಯಾರ್ಥಿಗಳು ಬಳಸಿಕೊಳ್ಳಿ. ವಿದ್ಯಾರ್ಥಿ ಜೀವನದಲ್ಲಿ ತಮ್ಮ ಭವಿಷ್ಯದ ಬಗ್ಗೆ ಹೆಚ್ಚು ಗಮನವಿಟ್ಟು ವಿದ್ಯಾಭ್ಯಾಸ ಮಾಡಿ. ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿ. ವಿದ್ಯಾರ್ಥಿಗಳು ಯಾವ ಸ್ಥಾನಕ್ಕಾದರೂ ಹೋಗಬಹುದು ಎಂದರು.
ಶ್ರೀ ರಂಗನಾಥ ಕಾಲೇಜಿನಲ್ಲಿ ಆಡಿಟೋರಿಯಂ ನಿರ್ಮಾಣ ಮಾಡಲಿಕ್ಕೆ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ 50 ಲಕ್ಷ ರು. ಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಪೂಜಾ, ಪ.ಪೂ. ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಅಶೋಕ್ ಕುಮಾರ್, ತಾಲೂಕು ಕುಂಚಿಟಿಗರ ಸಂಘದ ಕಾರ್ಯದರ್ಶಿ ಗುಳಿಗೇನಹಳ್ಳಿ ನಾಗರಾಜು, ಉಪಾಧ್ಯಕ್ಷ ಬಾಂಬೆ ರಾಜಣ್ಣ, ನಿರ್ದೇಶಕ ಡಿ.ಸಿ. ಅಶೋಕ್, ಎಸ್.ಎಲ್. ಗೋವಿಂದರಾಜು, ಶಶಿಧರ ಗೌಡ, ಲಕ್ಷ್ಮೀಕಾಂತ್, ಲಿಂಗದಹಳ್ಳಿ ಸುಧಾಕರ ಗೌಡ, ಶ್ರೀ ರಂಗನಾಥ ಕಾಲೇಜಿನ ಆಡಳಿತಾಧಿಕಾರಿ ಪಿ.ಎಚ್. ಮಹೇಂದ್ರಪ್ಪ, ರಂಗನಾಥ ಪ.ಪೂ. ಕಾಲೇಜಿನ ಪ್ರಾಂಶುಪಾಲ ಎಸ್.ಎಚ್. ರಂಗನಾಥ್, ಉಪನ್ಯಾಸಕ ವೆಂಕಟಾಚಲ ಸೇರಿದಂತೆ ಹಲವರು ಹಾಜರಿದ್ದರು.