ವೈರ್‌ಲೆಸ್‌ ಸ್ಕೆತಸ್ಕೋಪ್‌ ಕಂಡುಹಿಡಿದ ಮಲೆನಾಡು ಯುವಕ

By Kannadaprabha News  |  First Published Apr 30, 2020, 2:13 PM IST

ಕೊರೋನಾ ವೈರಸ್‌ ಸೋಂಕಿರುವ ರೋಗಿಗಳನ್ನು ಪರೀಕ್ಷೆ ನಡೆಸಲು ವೈದ್ಯರೂ ಯೋಚಿಸುವಂತಾಗಿರುವ ಈ ಸಂದರ್ಭದಲ್ಲಿ ಮಲೆನಾಡಿನ ಯುವಕನೊಬ್ಬ ವೈರ್‌ಲೆಸ್‌ ಸ್ಕೆತಸ್ಕೋಪ್‌ ಕಂಡು ಹಿಡಿದಿದ್ದಾನೆ.


ಚಿಕ್ಕಮಗಳೂರು(ಏ.30): ಕೊರೋನಾ ವೈರಸ್‌ ಸೋಂಕಿರುವ ರೋಗಿಗಳನ್ನು ಪರೀಕ್ಷೆ ನಡೆಸಲು ವೈದ್ಯರೂ ಯೋಚಿಸುವಂತಾಗಿರುವ ಈ ಸಂದರ್ಭದಲ್ಲಿ ಮಲೆನಾಡಿನ ಯುವಕನೊಬ್ಬ ವೈರ್‌ಲೆಸ್‌ ಸ್ಕೆತಸ್ಕೋಪ್‌ ಕಂಡು ಹಿಡಿದಿದ್ದಾನೆ.

ಜಿಲ್ಲೆಯ ಕೊಪ್ಪ ಪಟ್ಟಣದ ಕೆ.ಆದರ್ಶ, ಈ ಸಾಧನೆ ಮಾಡಿರುವ ಯುವಕ. ಸ್ಕೆತಸ್ಕೋಪ್‌ಗೆ ಸುಮಾರು 200 ವರ್ಷಗಳ ಇತಿಹಾಸ ಇದೆ. ರೋಗಿಯ ಹೃದಯ ಬಡಿತ ಹಾಗೂ ಶ್ವಾಸಕೋಶವನ್ನು ಸಾಮಾನ್ಯ ಸ್ಕೆತಸ್ಕೋಪ್‌ನಿಂದಲೇ ಪರೀಕ್ಷೆ ಮಾಡಬಹುದು.

Tap to resize

Latest Videos

ರಾಜ್ಯದ ಕೊರೋನಾ ಸೋಂಕಿತ ಪತ್ರಕರ್ತನ ಹೆಜ್ಜೆಗುರುತು..!

ಆದರೆ, ಕೊರೋನಾ ವೈರಸ್‌ ಸೋಂಕು ಪೀಡಿತ ರೋಗಿಗಳ ತಪಾಸಣೆ ಮಾಡುವುದು ಕಷ್ಟ. ಜತೆಗೆ ಇದು, ಅಷ್ಟುಸುರಕ್ಷಿತವಲ್ಲ ಎಂಬ ಮಾತು ವೈದ್ಯರದ್ದು. ಇಂತಹ ಸಂದರ್ಭದಲ್ಲಿ ಕೆ.ಆದಶ್‌ರ್‍ ಅವರ ನೇತೃತ್ವದ ತಂಡ ಕಂಡು ಹಿಡಿದ ವೈರ್‌ಲೆಸ್‌ ಸ್ಕೆತಸ್ಕೋಪ್‌ಗೆ ಅತಿ ಹೆಚ್ಚು ಬೇಡಿಕೆ ಬರುತ್ತಿದೆ.

"

ಬಾಂಬೆಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐ.ಐ.ಟಿ)ಯಲ್ಲಿ 2015ರಲ್ಲಿ ರಿಸರ್ಚರ್‌ ಆಗಿ ಸೇರಿಕೊಂಡ ಆದಶ್‌ರ್‍ ಸ್ಮಾರ್ಟ್‌ ಸ್ಕೆತಸ್ಕೋಪ್‌ ಬಗ್ಗೆ ಎರಡು ವರ್ಷ ಅಧ್ಯಯನ ಮಾಡಿ, ಇದೇ ಸಂಸ್ಥೆಯ ಡಾ.ರವಿ, ತಪಸ್ವಿ, ರೂಪೇಶ್‌, ಡಾ.ಪೀಂಟೋ ಅವರ ಜತೆ ಅನ್ವೇಷಣೆ ಮಾಡಿ ಯಶಸ್ವಿಯಾಗಿದ್ದಾರೆ.

ಹೊರ ಬಂದ್ರೆ ಸೀದಾ ಜೈಲು: ಡಿಸಿ, ಎಸ್ಪಿ ಎಚ್ಚರಿಕೆ

ಕೇಂದ್ರ ಸರ್ಕಾರದಡಿ ಬರುವ ಬೈಕೋ ಟೆಕ್ನಾಲಜಿ(ಬೈರಾಕ್‌)ಸಂಸ್ಥೆ ಸ್ಮಾರ್ಟ್‌ ಸ್ಕೆತಸ್ಕೋಪ್‌ ಅಭಿವೃದ್ಧಿಪಡಿಸಲು 50 ಲಕ್ಷ ಹಾಗೂ ಸ್ವಿಜರ್‌ಲ್ಯಾಂಡ್‌ನಲ್ಲಿ 2017ರಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಹೊಸ ಅನ್ವೇಷಣೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಬಂದ 10 ಲಕ್ಷ ರು. ಬಹುಮಾನದ ಹಣವನ್ನು ಹೊಸ ಅನ್ವೇಷಣೆಗೆ ಬಳಸಿಕೊಂಡು ಈ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ.

2018ರಲ್ಲಿ ಐಐಟಿ ಸಂಸ್ಥೆ ಈ ಸ್ಮಾರ್ಟ್‌ ಸ್ಕೆತಸ್ಕೋಪ್‌ ಲೋಕಾರ್ಪಣೆ ಮಾಡಿದ್ದು, ಇದುವರೆಗೆ ಸಾವಿರಕ್ಕೂ ಹೆಚ್ಚು ಮಾರಾಟವಾಗಿವೆ. ಈಗ ಪೇಟೆಂಟ್‌ ಪಡೆಯುವ ಕೊನೆಯ ಹಂತದಲ್ಲಿದ್ದು, ಭಾರತ ಸೇರಿ ಅಮೇರಿಕಾ, ಸಿಂಗಾಪುರ್‌ ದೇಶಗಳು ಪೇಟೆಂಟ್‌ ಪಡೆದುಕೊಳ್ಳುತ್ತಿವೆ.

ಪ್ರಯೋಜನಗಳೇನು?

ಸ್ಮಾರ್ಟ್‌ ಸ್ಕೆತಸ್ಕೋಪ್‌ ಕಂಡು ಹಿಡಿದಿರುವ ಕೆ.ಆದಶ್‌ರ್‍ ಅವರು ಇದರಿಂದಾಗುವ ಅನುಕೂಲ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ್ದು ಹೀಗೆ.. ಸಾಮಾನ್ಯ ಸ್ಕೆತಸ್ಕೋಪ್‌ಗಿಂತ ಇದರಲ್ಲಿ 16 ಪಟ್ಟು ವಾಲ್ಯುಮ್‌ ಜಾಸ್ತಿ ಇರುತ್ತದೆ. ತಮಗೆ ಎಷ್ಟುಬೇಕೋ ಅಷ್ಟಕ್ಕೆ ಸೌಂಡ್‌ ಇಡಬಹುದು. ಇದರಲ್ಲಿ ರೇಕಾರ್ಡ್‌ ಮಾಡುವ ವ್ಯವಸ್ಥೆ ಇದ್ದು, ಅದನ್ನೂ ಡಾಟಾದಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ಅದನ್ನು ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಸ್ಟೋರ್‌ ಮಾಡಿ ಯಾವಾಗಬೇಕಾದರೂ ನೋಡಿಕೊಳ್ಳಬಹುದು. ಇದರಲ್ಲಿ ಬ್ಲೂಟೂತ್‌ ಇದೆ. ಕೊರೋನಾ ಶಂಕಿತ ಹಾಗೂ ಸೋಂಕಿತ ರೋಗಿಗಳ ಹೃದಯ ಬಡಿತ ಹಾಗೂ ಶ್ವಾಸಕೋಶ ಹಾಗೂ ದೇಹದ ಇತರೆ ಭಾಗಗಳನ್ನು ಸಾಮಾನ್ಯ ಸ್ಕೆತಸ್ಕೋಪ್‌ನಲ್ಲಿ ಪರೀಕ್ಷೆ ಮಾಡಲು ವೈದ್ಯರು ಎಷ್ಟೇ ಮುಂಜಾಗ್ರತೆ ತೆಗೆದುಕೊಂಡರೂ ಭಯ ಇರುತ್ತದೆ. ಕೊರೋನಾ ರೋಗಿಗಳನ್ನು ಪರೀಕ್ಷೆ ಮಾಡುವ ಮೊದಲು ವೈದ್ಯರು ಸುರಕ್ಷಿತ ಕವಚ ಧರಿಸುತ್ತಾರೆ. ಈ ಸಂದರ್ಭದಲ್ಲಿ ಕಿವಿಗೆ ಬ್ಲೂ ಟೂತ್‌ ಹಾಕಿಕೊಂಡು, ವೈರ್‌ಲೆಸ್‌ ಸ್ಕೆತಸ್ಕೋಪ್‌ ಪರೀಕ್ಷೆ ಮಾಡಬಹುದು. ಇದರಿಂದ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ.

click me!