ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನೀರಿಗಾಗಿ ಆಗ್ರಹಿಸಿ ಯುವಕ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾನೆ. ಸಂತೋಷ ಬಿಜಾಪುರ ಎಂಬಾತ ಅರೆಬೆತ್ತಲೆಯಾಗಿ ಬೀದಿ ರಂಪ ಮಾಡಿದ ಯುವಕ. ಗ್ರಾಮದಲ್ಲಿ ಹಲವು ದಿನಗಳಿಂದ ಕುಡಿಯಲು ನೀರು ಹರಿಸಿಲ್ಲ. ಮನೆಯಲ್ಲಿ ಹನಿ ನೀರಿಲ್ಲ. ಕೇಳಿದರೆ ನೀರು ಬೇಕಾಬಿಟ್ಟಿ ಉತ್ತರ ಕೊಡುತ್ತಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಏನು ಕುಡಿಯುವುದು? ಯಾರಿಗೆ ಹೇಳುವುದು? ಎಂದು ಯುವಕ ಜಗಳ ತೆಗೆದಿದ್ದಾನೆ. ಕೊನೆಗೆ ಯುವಕನ ಮನೆಯವರು ಬಂದು ಕರೆದುಕೊಂಡು ಹೋಗಿದ್ದಾರೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ಡಿ.03): ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದೆ. ಅದ್ರಲ್ಲೂ ಇಂಡಿ ಭಾಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆಗಳು ಎದುರಾಗುತ್ತಿವೆ. ಈ ನಡುವೆ ವಾರಗಟ್ಟಲೇ ನೀರು ಬಿಡದ ಗ್ರಾಮ ಪಂಚಾಯಿತಿ ದುರಾಡಳಿತದಿಂದ ಬೇಸತ್ತ ಯುವಕನೊರ್ವ ಅರೆ ಬೆತ್ತಲೆ ಹೋರಾಟ ನಡೆಸಿದ್ದಾನೆ.
ನೀರಿಗಾಗಿ ಅರೆಬೆತ್ತಲಾದ ಯುವಕ..!
ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನೀರಿಗಾಗಿ ಆಗ್ರಹಿಸಿ ಯುವಕ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾನೆ. ಸಂತೋಷ ಬಿಜಾಪುರ ಎಂಬಾತ ಅರೆಬೆತ್ತಲೆಯಾಗಿ ಬೀದಿ ರಂಪ ಮಾಡಿದ ಯುವಕ. ಗ್ರಾಮದಲ್ಲಿ ಹಲವು ದಿನಗಳಿಂದ ಕುಡಿಯಲು ನೀರು ಹರಿಸಿಲ್ಲ. ಮನೆಯಲ್ಲಿ ಹನಿ ನೀರಿಲ್ಲ. ಕೇಳಿದರೆ ನೀರು ಬೇಕಾಬಿಟ್ಟಿ ಉತ್ತರ ಕೊಡುತ್ತಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಏನು ಕುಡಿಯುವುದು? ಯಾರಿಗೆ ಹೇಳುವುದು? ಎಂದು ಯುವಕ ಜಗಳ ತೆಗೆದಿದ್ದಾನೆ. ಕೊನೆಗೆ ಯುವಕನ ಮನೆಯವರು ಬಂದು ಕರೆದುಕೊಂಡು ಹೋಗಿದ್ದಾರೆ.
Vijayapura: ಮಟನ್ ಪೀಸ್‌ನಲ್ಲಿ ವಿಷ ಹಾಕಿ 20ಕ್ಕೂ ಹೆಚ್ಚು ಬೀದಿನಾಯಿಗಳ ದಾರುಣ ಹತ್ಯೆ!
ಯುವಕನಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ಪಿಡಿಓ..!
ಬಳಿಕ ಮತ್ತೆ ಪಂಚಾಯಿತಿಗೆ ಬಂದು ನೀರು ಕೊಡುವವರೆಗೂ ಜಾಗ ಬಿಟ್ಟು ಕದಲಲ್ಲ ಎಂದು ಹಠ ಹಿಡಿದಿದ್ದಾನೆ. ಪಿಡಿಓ ಮುಂದೆಯೆ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾನೆ. ಇದರಿಂದ ರೋಸಿಹೋದ ಪಿಡಿಓ ಶೋಭಾ ಹೊರಪೇಟ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಯುವಕನಿಗೆ ಕಪಾಳ ಮೋಕ್ಷ ಮಾಡ್ತಿದ್ದಂತೆ ನೀರಿಗಾಗಿ ಪ್ರತಿಭಟಿಸುತ್ತಿದ್ದವರು ಅಸಮಧಾನ ಹೊರಹಾಕಿದ್ದಾರೆ. ಬಳಿಕ ಪೊಲೀಸರನ್ನ ಕರೆಯಿಸಿ ಪರಿಸ್ಥಿತಿಯನ್ನ ತಿಳಿಗೊಳಿಸಲಾಗಿದೆ.