ಅದು ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧಿ ಪಡೆದ ಸ್ಥಳ. ಅಷ್ಟೇ ಅಲ್ಲ ಆ ಸ್ಥಳ ಆಂಜನೇಯನ ಜನ್ಮಸ್ಥಳ ಎಂದೇ ಪ್ರಸಿದ್ಧಿ ಪಡೆದ ಸ್ಥಳ. ಇಷ್ಟು ದಿನಗಳ ಕಾಲ ಆ ಸ್ಥಳದಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ಜರುಗುತ್ತಿದ್ದವು.
ವರದಿ: ದೊಡ್ಡೇಶ್ ಯಲಿಗಾರ್, ಏಶಿಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ
ಕೊಪ್ಪಳ (ಏ.14): ಅದು ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧಿ ಪಡೆದ ಸ್ಥಳ. ಅಷ್ಟೇ ಅಲ್ಲ ಆ ಸ್ಥಳ ಆಂಜನೇಯನ (Anjaneya) ಜನ್ಮಸ್ಥಳ ಎಂದೇ ಪ್ರಸಿದ್ಧಿ ಪಡೆದ ಸ್ಥಳ. ಇಷ್ಟು ದಿನಗಳ ಕಾಲ ಆ ಸ್ಥಳದಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ಜರುಗುತ್ತಿದ್ದವು. ಆದರೆ ಈಗ ಆ ಸ್ಥಳದಲ್ಲಿ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ ಕಾಪಾಡುವಂತಹ ಯೋಗ ಕಾರ್ಯಕ್ರಮ ಜರುಗುತ್ತಿದೆ. ಅಷ್ಟಕ್ಕೂ ಯಾವುದು ಆ ಸ್ಥಳ? ಆ ಸ್ಥಳದಲ್ಲಿ ನಡೆಯುತ್ತಿರುವ ಯೋಗ ಕಾರ್ಯಕ್ರಮ (Yoga Program) ಮಾಡುತ್ತಿರುವವರು ಯಾರು ಅನ್ನೋದನ್ನ ನೋಡೋಣ ಈ ರಿಪೋರ್ಟ್ ನಲ್ಲಿ.
ಯಾವ ಸ್ಥಳದಲ್ಲಿ ಯೋಗ ಕಾರ್ಯಕ್ರಮ ಆಯೋಜನೆ: ಅಂಜನಾದ್ರಿ ಪರ್ವತ (Anjanadri Hill) ಯಾರಿಗೆ ತಾನೇ ಗೋತ್ತಿಲ್ಲ ಹೇಳಿ ಈ ಸ್ಥಳ. ಆಂಜನೇಯನ ಜನ್ಮಸ್ಥಳ ಎಂದೇ ಈ ಸ್ಥಳ ಪ್ರಸಿದ್ಧಿಯನ್ನು ಹೊಂದಿದೆ. ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಇರುವ ಈ ಅಂಜನಾದ್ರಿ ಪರ್ವತ ಇಡೀ ದೇಶದಲ್ಲಿಯೇ ಪ್ರಸಿದ್ಧಿಯನ್ನು ಪಡೆದ ಸ್ಥಳವಾಗಿದೆ. ರಾಮಾಯಣ ಕಾಲದಿಂದಲೂ ಈ ಕಿಷ್ಕಿಂಧಾ ಭಾಗ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದ್ದು, ಕೆಳಭಾಗದಿಂದ 575 ಮೆಟ್ಟಿಲುಗಳನ್ನು ಏರಿಕೊಂಡು ಹೋದರೆ ಮೇಲ್ಭಾಗದಲ್ಲಿ ಆಂಜನೇಯನ ದೇವಸ್ಥಾನ ಇದೆ. ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಇಲ್ಲಿಗೆ ಆಂಜನೇಯನ ದರ್ಶನ ಪಡೆಯಲು ಬರುತ್ತಾರೆ. ಇಂತಹ ಪ್ರಸಿದ್ಧಿ ಪಡೆದಿರುವ ಅಂಜನಾದ್ರಿ ಪರ್ವತದ ಮೇಲ್ಭಾಗದಲ್ಲಿ ಯೋಗ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಕೊಪ್ಪಳದ ಶೇ. 60ರಷ್ಟು ದೇವಸ್ಥಾನದಲ್ಲಿ ದಲಿತರಿಗಿಲ್ಲ ಪ್ರವೇಶ..?
ಯಾರಿಂದ ಯೋಗ ಕಾರ್ಯಕ್ರಮ ಆಯೋಜನೆ: ರಾಜ್ಯದಲ್ಲಿ ಯೋಗದಲ್ಲಿ ಶ್ರೇಷ್ಠತೆಯನ್ನು ಹೊಂದಿರುವವರು ಯಾರು ಎಂದರೆ ತಟ್ಟನೆ ನೆನಪಾಗುವುದು ವಚನಾನಂದ ಸ್ವಾಮೀಜಿ. ಹರಿಹರದ ಪಂಚಮಸಾಲಿ ಪೀಠದ ಪೀಠಾಧಿಪತಿಗಳಾದ ಶ್ರೀ ವಚನಾನಂದ ಸ್ವಾಮೀಜಿಗಳು (Vachanananda Swamiji) ಯೋಗದಲ್ಲಿ ವಿಶೇಷ ಪ್ರಾವೀಣ್ಯತೆ ಹೊಂದಿದ್ದಾರೆ. ವಚನಾನಂದ ಸ್ವಾಮೀಜಿಗಳು ಇದೀಗ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಪರ್ವತದ ಮೇಲ್ಭಾಗದಲ್ಲಿ ಯೋಗ ಕಾರ್ಯಕ್ರಮ ಹಮ್ಮಿಕೊಂದಿದ್ದಾರೆ.
ಯಾವ ಕಾರಣಕ್ಕೆ ಯೋಗ ಕಾರ್ಯಕ್ರಮ: ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಅಮೃತ ಮಹೋತ್ಸವದ ಆಚರಣೆಯಲ್ಲಿ ನಾವಿದ್ದೇವೆ. ಈ ಹಿನ್ನಲೆಯಲ್ಲಿ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತ ಸರಕಾರ ವಿಶೇಷವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಇದೆ. ಈ ಹಿನ್ನಲೆಯಲ್ಲಿ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಭಾರತ ಸರಕಾರ ದೇಶದ 100 ಪ್ರತಿಷ್ಠಿತ ಯೋಗ ಸಂಸ್ಥೆಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಬೆಂಗಳೂರಿನ ಶ್ವಾಸ ಯೋಗ ಸಂಸ್ಥೆಯೂ ಸಹ ಒಂದಾಗಿದೆ.
ಈ ಹಿನ್ನಲೆಯಲ್ಲಿ ಕೇಂದ್ರ ಆಯುಷ್ ಮಂತ್ರಾಲಯವು ಕರ್ನಾಟಕದ 75 ವಿಶೇಷವಾದ ಸ್ಥಳಗಳಲ್ಲಿ ಯೋಗ ಪ್ರಮೋಶನ್ ಮಾಡಲು ಸ್ಥಳಗಳನ್ನು ಆಯ್ಕೆ ಮಾಡಿದೆ.ಅದರಲ್ಲಿ ಅಂಜನಾದ್ರಿ ಪರ್ವತವೂ ಒಂದಾಗಿದೆ. ಈ ಹಿನ್ನಲೆಯಲ್ಲಿ ಅಂಜನಾದ್ರಿ ಪರ್ವತದಲ್ಲಿ ಶ್ವಾಸ ಯೋಗ ಸಂಸ್ಥೆಯ ಮುಖ್ಯಸ್ಥರು ಹಾಗೂ ಹರಿಹರ ಪಂಚಮಸಾಲಿ ಪೀಠದ ಪೀಠಾಧಿಪತಿಗಳಾದ ಶ್ರೀ ವಚನಾನಂದ ಸ್ವಾಮೀಜಿಗಳು ಯೋಗ ಪ್ರದರ್ಶನ ಹಾಗೂ ಯೋಗ ಮಹಫತ್ಸವ ಮಾಡಲಿದ್ದಾರೆ.
ಯಾವಾಗ ಯೋಗ ಮಹೋತ್ಸವ ಕಾರ್ಯಕ್ರಮ: ಇನ್ನೆರಡು ದಿನ ಕಳೆದರೆ ಹನುಮ ಜಯಂತಿ ಕಾರ್ಯಕ್ರಮ ಇದೆ. ಆ ದಿನ ಅಂಜನಾದ್ರಿ ಪರ್ವತಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನಲೆಯಲ್ಲಿ ಅಂಜನಾದ್ರಿಗೆ ಆಗಮಿಸುವ ಭಕ್ತರಿಗೆ ಯೋಗದ ಬಗ್ಗೆ ಮಾಹಿತಿ ಜ್ಞಾನ ಇರಲಿ ಎನ್ನುವ ದೃಷ್ಟಿಯಿಂದ ಇದೇ 16ರಂದು ಹನುಮ ಜಯಂತಿ ಹಿನ್ನಲೆಯಲ್ಲಿ ಅಂಜನಾದ್ರಿ ಪರ್ವತದಲ್ಲಿ ಯೋಗ ಮಹೋತ್ಸವ ಹಾಗೂ ಯೋಗ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 6 ಗಂಟೆಯಿಂದ 7 ಗಂಟೆವರೆಗೂ ಒಂದು ಗಂಟೆಗಳ ಕಾಲ ಯೋಗ ಪ್ರೊಟೋಕಾಲ್ ಪ್ರಕಾರ ಯೋಗ ಮಹೋತ್ಸವ ಕಾರ್ಯಕ್ರಮ ಜರುಗಲಿದೆ.
Koppala ರಾಮನನ್ನು ಜಪಿಸಿದ ಮುಸ್ಲಿಂ ಸಮುದಾಯ
ಇನ್ನು ಈ ಕಾರ್ಯಕ್ರಮಕ್ಕೆ ಬಾಬಾ ರಾಮದೇವ್ ಅವರ ಪತಂಜಲಿ ಯೋಗ ಸಂಸ್ಥೆ ಹಾಗೂ ಇತರೆ ಯೋಗ ಸಂಸ್ಥೆಯವರು ಸಹಕಾರ ನೀಡುತ್ತಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಲಿದ್ದಾರೆ. ಇಷ್ಟು ದಿನಗಳ ಕಾಲ ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸಿಮೀತವಾಗುತ್ತಿದ್ದ ಅಂಜನಾದ್ರಿ ಪರ್ವತ ಇದೀಗ ಯೋಗ ಕಾರ್ಯಕ್ರಮಕ್ಕೆ ಸಹ ಸಜ್ಜಾಗಿದೆ. ಒಟ್ಟಿನಲ್ಲಿ ಅಂಜನಾದ್ರಿ ಪರ್ವತ ದೇಶದ 75 ಐಕಾಲ್ ಸ್ಥಳಗಳಲ್ಲಿ ಒಂದಾಗಿರುವುದು ಹಾಗೂ ಈ ಸ್ಥಳದಲ್ಲಿ ಯೋಗ ಕಾರ್ಯಕ್ರಮ ಜರುಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯೇ ಸರಿ.