ಯಾದಗಿರಿ ನಗರದಲ್ಲಿ ಹೆಚ್ಚಾದ ಕಳ್ಳತನ ಪ್ರಕರಣಗಳು: ಕಳ್ಳರನ್ನು ಹಿಡಿಯಲು ಪೋಲಿಸರ ಹರಸಾಹಸ

By Govindaraj S  |  First Published Oct 6, 2023, 12:15 PM IST

ಯಾದಗಿರಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿಯನ್ನು ಹೊಂದಿದೆ. ಸರ್ಕಾರ ಜಿಲ್ಲೆಯ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ.‌ ಖರ್ಚಯ ಮಾಡುತ್ತಿದೆ. ಆದ್ರೆ ಇದಕ್ಕೆ ಅಧಿಕಾರಿಗಳ ಸಾಥ್ ಕೊಡುತ್ತಿಲ್ಲ. 


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ (ಅ.06): ಯಾದಗಿರಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿಯನ್ನು ಹೊಂದಿದೆ. ಸರ್ಕಾರ ಜಿಲ್ಲೆಯ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ.‌ ಖರ್ಚಯ ಮಾಡುತ್ತಿದೆ. ಆದ್ರೆ ಇದಕ್ಕೆ ಅಧಿಕಾರಿಗಳ ಸಾಥ್ ಕೊಡುತ್ತಿಲ್ಲ. ಯಾದಗಿರಿ ಜಿಲ್ಲಾ ಕೇಂದ್ರವಾಗಿದ್ದರಿಂದ ಹಲವು ಕೆಲಸಕ್ಕಾಗಿ ದಿನನಿತ್ಯ ಸಾಕಷ್ಟು ಜನರ ನಗರಕ್ಕೆ ಬರ್ತಾರೆ. ಅದೇ ರೀತಿ ಸಾಕಷ್ಟು ರೀತಿಯಲ್ಲಿ ನಾನಾ ಚಟುವಟಿಗಳು ಆಗ್ತಾಯಿರುತ್ತವೆ. ಇದರ ಜೊತೆಗೆ ಕಳ್ಳತನ, ಅಕ್ರಮ ಹಾಗೂ ಅಪಘಾತ ಪ್ರಕರಣಗಳು ಸಹ ಹೆಚ್ಚಾಗಿ ನಡೆಯುತ್ತಿವೆ. ಕಳ್ಳರು ಯಾವುದೆ ಭಯವಿಲ್ಲದೇ ತಮ್ಮ ಕೈಚಳ ತೋರಿಸಿ ಅರಾಮಾಗಿ ಎಸ್ಕೇಪ್ ಆಗುತ್ತಿದ್ದಾರೆ. ಆ ಕಳ್ಳರನ್ನು ಹುಡುಕಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಅಲ್ಲಿರುವ ಸಿಸಿಟಿವಿಯನ್ನು ದುರಸ್ತಿ ಮಾಡದೇ ಕಳ್ಳರಿಗೆ, ಅಕ್ರಮ ದಂಧೆಕೋರರಿಗೆ ಭಯವಿಲ್ಲದಂತಾಗಿದೆ.

Latest Videos

undefined

ಹಾಳಾದ ಸಿಸಿಟಿವಿಯನ್ನು ದುರಸ್ತಿ ಮಾಡದ ಅಧಿಕಾರಿಗಳು: ಯಾದಗಿರಿ ಜಿಲ್ಲಾ ಕೇಂದ್ರವಾಗಿ 14 ವರ್ಷಗಳಾಗಿದೆ. ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ನಗರಕ್ಕೆ ಬರುವ ಜನರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರ ಜೊತೆಗೆ ಸಹಜವಾಗಿ ನಾನಾ ರೀತಿಯ ಅಕ್ರಮ ಚಟುವಟಿಕೆಗಳು ಸಹ ಜೋರಾಗಿಯೇ ನಡೆಯುತ್ತಿವೆ. ಅದರಲ್ಲೂ ಕಳ್ಳತನ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿವೆ. ಕಳ್ಳರು ಮನೆಗಳನ್ನು ಟಾರ್ಗೆಟ್ ಮಾಡಿ ಖದಿಯುತ್ತಿದ್ದಾರೆ. ಇದರಿಂದ ಯಾವುದೇ ಭಯ-ಭೀತಿಯಿಲ್ಲದೇ ಎಸ್ಕೇಪ್ ಆಗ್ತಿದ್ದಾರೆ. ಆದ್ರೆ ಪೊಲೀಸರು ಕಳ್ಳರನ್ನ ಹಿಡಿಯಲು ಹರಸಾಹಸ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ಕಾರಣಕ್ಕೆ ಕಳೆದ 6 ವರ್ಷದ ಹಿಂದೆ ಪೊಲೀಸರು ನಗರಸಭೆಯ ಸಹಕಾರದಿಂದ ನಗರದ ಪ್ರಮುಖ ಏರಿಯಾಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನ ಅಳವಡಿಸುವ ಕೆಲಸವನ್ನ ಮಾಡಿದ್ದಾರೆ. ಆದ್ರೆ ನಗರದ ಎಲ್ಲಾ ಸಿಸಿಟಿವಿಗಳು ಹಾಲಾಗಿದ್ದು, ಅವುಗಳು ಏನಾಗಿವೆ ಎಂಬುದನ್ನು ನೋಡುವವರು ಇಲ್ಲದಂರಾಗಿದೆ.

ರಾಜ್ಯದಲ್ಲಿ 5 ಗ್ಯಾರಂಟಿಗಳಿಂದ ಕಾಂಗ್ರೆಸ್‌ ಜನಮನ ಗೆದ್ದಿದೆ: ಸಚಿವ ಶರಣ ಪ್ರಕಾಶ ಪಾಟೀಲ್

ಕಳ್ಳರನ್ನು ಹಿಡಿಯಲು ಖಾಕಿ ಹರಸಾಹಸ: ನಗರದಲ್ಲಿ ನಡೆಯುತ್ತಿರುವ ಕಳ್ಳತನ, ಅಕ್ರಮ ಹಾಗೂ ಇತರೆ ಕಾನೂನು ಬಾಹಿರ ದಂಧೆಕೋರರಿಗೆ ಸೆರೆ ಹಿಡಿಯಲು ಪೋಲಿಸರಿಗೆ ಭಾರಿ ತೊಂದರೆ ಆಗುತ್ತಿದೆ. ಇದಕ್ಕಾಗಿಯೇ ಲಕ್ಷಾಂತರ ರೂ. ಖರ್ಚು ಮಾಡಿ ಪೊಲೀಸರಿಗೆ ಕ್ರೈಂ ಕಂಟ್ರೋಲ್ ಮಾಡಲು ಸಹಕಾರಿಯಾಗಲಿ ಎನ್ನುವ ಕಾರಣಕ್ಕೆ ನಗರದ ಪ್ರಮುಖ ಎಂಟು ಸರ್ಕಲ್ ಗಳಲ್ಲಿ ಹೈಕೆಟ್ ಸಿಸಿಟಿವಿ ಕ್ಯಾಮರಗಳನ್ನ ಅಳವಡಿಸಲಾಗಿದೆ. ಆದ್ರೆ ಕಳೆದ ಆರು ವರ್ಷಗಳಿಂದ ಒಂದೇ ಒಂದು ಸಿಸಿಟಿವಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ವಿಪರ್ಯಾಸ. ಇದರಿಂದ ಯಾದಗಿರಿ ನಗರದಲ್ಲಿ ಹೆಚ್ಚಾಗಿ ಬೈಕ್ ಕಳ್ಳನ, ಸರಗಳ್ಳತನ ದಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಆದ್ರೆ ಕಳ್ಳರನ್ನ ಹಿಡಿಯಲು ಪೊಲೀಸರು ಮಾತ್ರ ಕಷ್ಟ ಪಡುತ್ತಿದ್ದಾರೆ. ಹೆಸರಿಗೆ ಮಾತ್ರ ಹಾಕಿರುವ ಸಿಸಿಟಿವಿ ಕ್ಯಾಮರಾಗಳನ್ನ ಕಂಡು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದಲ್ಲಿ ಸಿಸಿಟಿವಿ ದುರಸ್ತಿಗೊಳಿಸಿ, ಜನರ ಆಕ್ರೋಶ: ಯಾದಗಿರಿ ನಗರದ ನೋಡಲು ಚಿಕ್ಕದು ಕಂಡರು ಇಲ್ಲಿ ಕಳ್ಳರ ಕೈ ಚಳಕ ಮಾತ್ರ ಜೋರಾಗಿಯೇ ಇರುತ್ತದೆ. ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ, ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಗಳನ್ನು ಖದೀಮರು ಬಹಳ ಸುಲಭವಾಗಿ ಏಗರಿಸಿ ಪರಾರಿಯಾಗ್ತಾರೆ. ಜೊತೆಗೆ ಕೆಲವು ಖದೀಮರು ಪಲ್ಸರ್ ಬೈಕ್ ನಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಹಿಳೆಯರ ಸರಗಳನ್ನು  ಹಗಲು ಹೊತ್ತಿನಲ್ಲೇ ಕಳ್ಳತನ  ಮಾಡುತ್ತಿರುವ ಘಟನೆಗಳು ಬೆಳಕಿಗೆ ಬರ್ತಾಯಿವೆ. ಇದಕ್ಕೆಲ್ಲಾ ಕಾರಣ ಅಂದ್ರೆ ನಗರದ ಪ್ರಮುಖ ಕಡೆ ಇರುವ ಹಾಳಾದ ಸಿಸಿಟಿವಿ ಕ್ಯಾಮರಾಗಳೇ ಕಾರಣ. 

ಇನ್ನು ನಗರದ ಹೃದಯಭಾಗವಾದ ಶಾಸ್ತ್ರೀ ಹಾಗೂ ಸುಭಾಷ್ ಸರ್ಕಲ್ ನಲ್ಲಿ ಸಿಸಿಟಿವಿ ಅನಿವಾರ್ಯವಾಗಿ ಇರಲೇಬೇಕು. ಯಾಕೆಂದ್ರೆ ಈ ಎರಡು ಸರ್ಕಲ್ ಗಳು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಕಡೆ ಹೆಚ್ಚಿನ ಜನ ತಿರುಗಾಡ್ತಾರೆ. ಆದ್ರೆ ಈ ಸರ್ಕಲ್ ನಲ್ಲಿ ಹಾಕಿರುವ ಕ್ಯಾಮರಾಗಳು ಬಂದ್ ಆಗಿದ್ದು, ಸಿಸಿಟಿ ಲವಿ ಅಳವಡಿಸಿದರಿಂದ ಇಲ್ಲಿಯವರೆಗೆ ಆನ್ ಆಗಿಯೇ ಇಲ್ಲ. ಇಂತಹ ಏರಿಯಾಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಕಳ್ಳರು ಮನೆಗಳ್ಳರು ಸೇರಿ ನಾನಾ ರೀತಿಯ ಕೈಚಳಕ ತೋರಿಸಿ ಇದೆ ಸರ್ಕಲ್ ಗಳ ಮಾರ್ಗವಾಗಿ ರೈಲ್ವೆ ಹಾಗೂ ಬಸ್ ನಿಲ್ದಾಣಕ್ಕೆ ಹೋಗಿ ಎಸ್ಕೇಪ್ ಆಗ್ತಿದ್ದಾರೆ. 

ಲಿಂಗಾಯತ ಅಧಿಕಾರಿಗಳಿಗೆ ಸಮಸ್ಯೆ ಆಗಿಲ್ಲ: ಸಚಿವರು

ಘಟನೆ ನಡೆದಾಗ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಿಸಿದಾಗ  ಪೊಲೀಸರು ಕಳ್ಳರನ್ನ ಹಿಡಿಯಲು ಮುಂದಾಗ್ತಾರೆ. ಆದ್ರೆ ಪೋಲಿಸರಿಗೆ ಯಾವುದೇ ಸುಳಿವು ಸಿಗದ ಕಾರಣಕ್ಕೆ ಕಳ್ಳರನ್ನ ಹುಡುಕಲು ತಿಂಗಳುಗಳು ಗಟ್ಟಲೇ ಸಮಯ ಆಗ್ತದೆ. ನಗರಸಭೆ ಅಧಿಕಾರಿಗಳು ಲಕ್ಷಾಂತರ ರೂ.‌ ಖರ್ಚು ಮಾಡಿ ಸಿಸಿಟಿವಿ ಅಳವಡಿಸಿ ಕೈ ತೊಳೆದುಕೊಂಡಿದೆ. ಆದ್ರೆ ಅದನ್ನ ನಿರ್ವಹಣೆ ಮಾಡುವ ಕೆಲಸವನ್ನ ಮರೆತು ಬಿಟ್ಟಿದ್ದಾರೆ. ನಗರಸಭೆ ಅಧಿಕಾರಿಗಳು ಮಾತ್ರ ಯಾವುದಕ್ಕೂ ಮುಂದಾಗದೆ ನಿರ್ಲಕ್ಷ್ಯ ವಹಿಸುತ್ತಿರುವುದು ವಿಪರ್ಯಾಸ. ಒಟ್ಟಾರೆ ಅಭಿವೃದ್ಧಿಯಲ್ಲಿ ಹಿಂದುಳಿದ ಯಾದಗಿರಿ ಜಿಲ್ಲೆಯಲ್ಲಿ ಕ್ರೈಂ ರೇಟ್ ಕಡಿಮೆ ಮಾಡಬೇಕು. ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕ್ರಮ, ಕಳ್ಳತನಕ್ಕೆ ದಾರಿ ಮಾಡಿ ಕೊಟ್ಟಂತಾಗಿದೆ. ಕೂಡಲೇ ಕೆಟ್ಟು ಹೋದ ಸಿಸಿಟಿವಿಯನ್ನು ದುರಸ್ತಿಗೊಳಿಸಿ ಕಳ್ಳತನ, ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಬೇಕಿದೆ.

click me!