ಪುನೀತ್ ಅಭಿಮಾನಿಯಿಂದ ವಿಶ್ವ ಸೈಕಲ್ ಪ್ರವಾಸ

By Kannadaprabha News  |  First Published Dec 3, 2023, 9:34 AM IST

ತಮಿಳುನಾಡಿನ ಕೊಯಮತ್ತೂರಿನ ಮುತ್ತುಸೆಲ್ವಂ ನಟ ಪುನೀತ್‌ರಾಜ್‌ಕುಮಾರ್‌ ಅವರ ಅಭಿಮಾನಿ 1111 ದಿನಗಳ ವಿಶ್ವ ಸೈಕಲ್ ಪ್ರವಾಸ ಕೈಗೊಂಡು ತಿಪಟೂರಿಗೆ ಆಗಮಿಸಿದ್ದ ವೇಳೆ ಮಿನಿ ವಿಧಾನಸೌಧದ ಬಳಿ ಶಾಸಕ ಕೆ. ಷಡಕ್ಷರಿ ಅವವರೊಂದಿಗೆ ಗಿಡ ನೆಟ್ಟು ಚಿಕ್ಕನಾಯಕನಹಳ್ಳಿ ಕಡೆಗೆ ಪ್ರಯಾಣ ಬೆಳೆಸಿದರು.


 ತಿಪಟೂರು : ತಮಿಳುನಾಡಿನ ಕೊಯಮತ್ತೂರಿನ ಮುತ್ತುಸೆಲ್ವಂ ನಟ ಪುನೀತ್‌ರಾಜ್‌ಕುಮಾರ್‌ ಅವರ ಅಭಿಮಾನಿ 1111 ದಿನಗಳ ವಿಶ್ವ ಸೈಕಲ್ ಪ್ರವಾಸ ಕೈಗೊಂಡು ತಿಪಟೂರಿಗೆ ಆಗಮಿಸಿದ್ದ ವೇಳೆ ಮಿನಿ ವಿಧಾನಸೌಧದ ಬಳಿ ಶಾಸಕ ಕೆ. ಷಡಕ್ಷರಿ ಅವವರೊಂದಿಗೆ ಗಿಡ ನೆಟ್ಟು ಚಿಕ್ಕನಾಯಕನಹಳ್ಳಿ ಕಡೆಗೆ ಪ್ರಯಾಣ ಬೆಳೆಸಿದರು.

ಮುತ್ತುಸೆಲ್ವಂ ಭಾರತ ದೇಶದ 34 ರಾಜ್ಯ, 733 ಜಿಲ್ಲೆ ಜೊತೆಗೆ ನೇಪಾಳ, ಬಾಂಗ್ಲಾದೇಶ, ಥೈಲ್ಯಾಂಡ್ ದೇಶಗಳನ್ನು ಸೈಕಲ್ ಪ್ರವಾಸ ಮಾಡಿದ್ದಾರೆ.

Tap to resize

Latest Videos

undefined

ಒಟ್ಟು34300ಕಿ.ಲೋ ಮೀಟರ್ ಪ್ರವಾಸ 1111 ದಿನ ಮಾಡಿ ಗಿನ್ನಿಸ್ ದಾಖಲೆಗೆ ಹೊರಟಿದ್ದಾರೆ. ಮುತ್ತು ಅವರು 2021 ಡಿಸೆಂಬರ್‌ಲ್ಲಿ ಸೈಕಲ್ ಪ್ರವಾಸ ಆರಂಭಿಸಿದ್ದರು. ಮೇ 2025 ಕ್ಕೆ ಕೊನೆಗೊಳ್ಳಲಿದೆ. ಈಗಾಗಲೆ 15 ರಾಜ್ಯ ಸುತ್ತಿ 23 ತಿಂಗಳು ಪ್ರಯಾಣ ಮಾಡಿ, 19864  ಕಿ.ಮೀ ಪ್ರಯಾಣ ಮುಗಿಸಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಉಡುಗೊರೆಯಾಗಿ ಕೊಟ್ಟ ಸೈಕಲ್‌ನಲ್ಲಿ ಪ್ರವಾಸ ಮಾಡುತ್ತಿದ್ದು, ಪ್ರತಿ ತಾಲೂಕಿನಲ್ಲಿ 100 ಗಿಡ ನೆಟ್ಟು ಪ್ರಕೃತಿ ಉಳಿಸಬೇಕೆಂದು ಸಂದೇಶ ಸಾರುವ ಮೂಲಕ ಇದುವರೆಗೂ ೨ಲಕ್ಷದ ೧೩ಸಾವಿರ ಸಸಿ ನೆಟ್ಟಿರುವುದಾಗಿ ಸೆಲ್ವಂ ತಿಳಿಸಿದರು. 

ಸೈಕಲ್ ಸವಾರಿ ದಾಖಲೆ ಮಾಡಿದ ವೃದ್ಧ

ಹುಬ್ಬಳ್ಳಿ (ನ.20) :  ನಗರದ 63ರ ಹಿರಿಯ ಗುರುಮೂರ್ತಿ ಮಾತರಂಗಿಮಠ ಅವರು ಮೂರು 5 ಸಾವಿರ ಕಿಮೀ ಸೈಕಲ್‌ ತುಳಿಯುವ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಇವರು ತಮ್ಮ 60 ನೇ ವಯಸ್ಸಿನಲ್ಲಿ ಸೈಕ್ಲಿಂಗ್ ಪ್ರಾರಂಭಿಸಿ, ಈ ವರ್ಷ 50 ಸಾವಿರ ಕಿಮೀ ಸೈಕಲ್‌ನಲ್ಲಿ ಕ್ರಮಿಸಿ ಸಾಧನೆ ಬರೆದಿದ್ದಾರೆ. ಸತತ ಮೂರು ದಿನಗಳ ಕಾಲ ನಿತ್ಯ 50 ಕಿಮೀ ಕ್ರಮಿಸಿದ ದಾಖಲೆಯೂ ಇವರದಾಗಿದೆ.

ಹುಬ್ಬಳ್ಳಿಯಲ್ಲಿ ಡ್ಯುಯಥ್ಲಾನ್ -2020 ರಲ್ಲಿ 10 ಕಿಮೀ ಓಡಿದರು ಮತ್ತು 40 ಕಿಲೋಮೀಟರ್ ಸೈಕ್ಲಿಂಗ್ ಮಾಡಿರುವುದು ಗಮನೀಯ.

ವಿಶ್ವದ ಅತ್ಯಂತ ದುಬಾರಿ ವಿಸ್ಕಿ ಬಾಟಲ್, ಬರೋಬ್ಬರಿ 22.7 ಕೋಟಿ ರೂಗೆ ಮಾರಾಟ!

22 ರಂದು ಕನಕದಾಸ ಜಯಂತಿ ಪೂರ್ವಭಾವಿ ಸಭೆ:

ಹುಬ್ಬಳ್ಳಿ: ತಾಲೂಕು ಆಡಳಿತದಿಂದ ನ. 30 ರಂದು ಕನಕದಾಸ ಜಯಂತಿಯನ್ನು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ನ. 22 ರಂದು ಬೆಳಗ್ಗೆ 11.30 ಗಂಟೆಗೆ ತಹಸೀಲ್ದಾರ್‌ ಕಾರ್ಯಾಲಯದ ಸಭಾಭವನದಲ್ಲಿ ಜಯಂತಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು, ಸಮಾಜದ ಮುಖಂಡರು, ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಭೆಗೆ ಹಾಜರಾಗಿ ಸೂಕ್ತ ಸಲಹೆ ಸೂಚನೆ ನೀಡಬೇಕೆಂದು ಹುಬ್ಬಳ್ಳಿ ಶಹರ ತಹಸೀಲ್ದಾರ್‌ ಕಲಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!