ಕಾರ್ಯಕರ್ತರು ಸಂಘಟಿತರಾಗಿ ಪಕ್ಷ ಕಟ್ಟಬೇಕು : ಹನುಮಂತೇಗೌಡ

By Kannadaprabha News  |  First Published Jan 23, 2024, 10:53 AM IST

ಸಂಘಟಿತರಾಗಿ ಪಕ್ಷ ಸದೃಢವಾಗಿ ಕಟ್ಟುವುದರೊಂದಿಗೆ, ಮುಂದಿನ ದಿನಗಳಲ್ಲಿ ಪಾವಗಡ ತಾಲೂಕಿನಲ್ಲಿ ಭಾರತೀಯ ಜನತಾ ಪಕ್ಷದ ಧ್ವಜ ಹಾರಿಸುವಂತೆ ಮಧುಗಿರಿ ಬಿಜೆಪಿ ಸಂಘಟನಾತ್ಮಕ ಜಿಲ್ಲಾ ಘಟಕದ ನೂತನ ಜಿಲ್ಲಾಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ ಕಾರ್ಯಕರ್ತರಿಗೆ ಕರೆ ನೀಡಿದರು.


  ಪಾವಗಡ :  ಸಂಘಟಿತರಾಗಿ ಪಕ್ಷ ಸದೃಢವಾಗಿ ಕಟ್ಟುವುದರೊಂದಿಗೆ, ಮುಂದಿನ ದಿನಗಳಲ್ಲಿ ಪಾವಗಡ ತಾಲೂಕಿನಲ್ಲಿ ಭಾರತೀಯ ಜನತಾ ಪಕ್ಷದ ಧ್ವಜ ಹಾರಿಸುವಂತೆ ಮಧುಗಿರಿ ಬಿಜೆಪಿ ಸಂಘಟನಾತ್ಮಕ ಜಿಲ್ಲಾ ಘಟಕದ ನೂತನ ಜಿಲ್ಲಾಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ ಕಾರ್ಯಕರ್ತರಿಗೆ ಕರೆ ನೀಡಿದರು.

ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರ ಸ್ಥಾನವಹಿಸಿಕೊಂಡ ಬಳಿಕ, ಪ್ರಥಮ ಬಾರಿಗೆ ಗುರುವಾರ ಪಾವಗಡಕ್ಕೆ ಆಗಮಿಸಿದ್ದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ ಅವರು, ಅಧ್ಯಕ್ಷರ ಆಯ್ಕೆಯ ಬೇಡಿಕೆ ಇಟ್ಟಿರಲ್ಲಿಲ್ಲ. 17ನೇ ವಯಸ್ಸಿಗೆ ರಾಜಕೀಯಕ್ಕೆ ಪ್ರವೇಶಿಸಿ ಆನೇಕ ಹೋರಾಟಗಳ ಮೂಲಕ ಬಿಜೆಪಿ ಸಂಘಟನೆಗೆ ಶ್ರಮಿಸಲಾಗಿತ್ತು. ರಾಜ್ಯ ಹಾಗೂ ಬಿಜೆಪಿ ಹೈಕಮಂಡ್ ಗುರ್ತಿಸಿ, ಸಂಕ್ರಾತಿ ಹಬ್ಬದಂದು ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರ ಸ್ಥಾನ ಕಲ್ಪಿಸಿದೆ. ನಿಮ್ಮೆಲ್ಲರ ಸಹಕಾರದ ಮೇರೆಗೆ ನನ್ನ 32ನೇ ಚಿಕ್ಕ ವಯಸ್ಸಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನವಹಿಸಿದ್ದು, ಈ ಮಹತ್ತರ ಸ್ಥಾನದ ಜವಾಬ್ದಾರಿ ಹೊರುವ ಮೂಲಕ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಿದ್ದೇನೆ. ಬಿಜೆಪಿ ಒಂದು ತತ್ವ ಸಿದ್ಧಾಂತದ ಪಕ್ಷ, ಈ ಪರಿಪ್ರಮಾಣದ ನಿಷ್ಟಾವಂತ ಕಾರ್ಯಕರ್ತರು ಯಾವುದೇ ಪಕ್ಷದಲ್ಲಿ ನೋಡಲು ಸಾಧ್ಯವಿಲ್ಲ. ಆನೇಕ ಹೋರಾಟಗಳಲ್ಲಿ ಭಾಗವಹಿಸಿದ್ದು ಹಲವು ಬಾರಿ ಜೈಲಿಗೂ ಹೋಗಿದ್ದೇನೆ. ಎರಡು ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿದ್ದರೂ ಇಲ್ಲಿನ ಪಕ್ಷ ಪ್ರಬಲ ಸಂಘಟನೆಯಲ್ಲಿ ಹಿನ್ನಡೆಯಾಗಿದೆ ಎಂದರು.

Tap to resize

Latest Videos

undefined

ಇಲ್ಲಿನ ಬಿಜೆಪಿ ಕಾರ್ಯಕರ್ತರು ಸಂಘಟನಾತ್ಮಕ ಶಕ್ತಿಯುಳ್ಳವರಾಗಿದ್ದು, ಇಲ್ಲಿನ ಬಿಜೆಪಿ ಕಾರ್ಯಕರ್ತರ ಉತ್ಸಾಹ ಹಾಗೂ ಉಮ್ಮಸ್ಸುಹಾಗೂ ಸದೃಢತೆಯ ನಿಲುವು ಹೊಂದಿದ್ದು, ಹೆಚ್ಚು ಸಂಘಟಿತರಾಗಿ ಮುಂದಿನ ದಿನಗಳಲ್ಲಿ ಪಾವಗಡದಲ್ಲಿ ಬಿಜೆಪಿ ಬಾವೂಟ ಹಾರಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿಜಿ ಅವರ ಉತ್ತಮ ನಾಯಕತ್ವದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಸಾಧ್ಯವಾಗಿದೆ. ಸಂಘಟತ್ಮಕ ನಾಯತ್ವ ಹೊಂದಿದರೆ ನಮ್ಮ ಗ್ರಾಮಗಳಲ್ಲಿ ನಾವು ಸಹ ಉತ್ತಮ ಕೆಲಸ ಮಾಡಲು ಸಾಧ್ಯವಿದೆ. ಬಹುತೇಕ ಕಾಂಗ್ರೆಸ್‌ ಕಾರ್ಯಕರ್ತರು ಸಹ ಶ್ರೀರಾಮಮಂದಿರ ವಿಚಾರದಲ್ಲಿ ನಮ್ಮ ಪರ ನಿಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದು, ಶ್ರೀ ರಾಮಮಂದಿರದ ವಿಚಾರದಲ್ಲಿ ರಾಷ್ಟ್ರದಲ್ಲಿ ಎಲ್ಲಡೆ ಸಕಾರತ್ಮಕ ಸ್ಪಂಧನೆ ಸಿಕ್ಕಿದೆ ಎಂದರು.

ಇದೇ ವೇಳೆ ತಾಲೂಕು ಬಿಜೆಪಿಯ ಹಿರಿಯ ಮುಖಂಡರಾದ ಡಾ.ಜಿ. ವೆಂಕಟರಾಮಯ್ಯ, ಜಿಲ್ಲಾ ಘಟಕದ ಪಾವಗಡ ರವಿ, ತಾಲೂಕು ಬಿಜೆಪಿ ಅಧ್ಯಕ್ಷ ರವಿಶಂಕರನಾಯ್ಕ್‌, ಮಾಜಿ ಅಧ್ಯಕ್ಷ ಜಿ.ಟಿ. ಗಿರೀಶ್‌, ಪೆಟ್ರೋಲ್‌ ಬಂಕ್‌ ಪುರುಷೋತಮರೆಡ್ಡಿ, ಜಿಲ್ಲಾ ಘಟಕದ ಶಿವಕುಮಾರ್‌ ಸಾಕೇಲ್‌, ಅಲ್ಕುಂದರಾಜ್‌, ತಾಲೂಕು ಬಿಜೆಪಿ ಕಾರ್ಯದರ್ಶಿ ಶೇಖರ್‌ಬಾಬು ಮದ್ದಿಬಂಡೆ ಕೃಷ್ಣಮೂರ್ತಿ ಹಾಗೂ ಮುಖಂಡರಾದ ಸೂರ್ಯ ನಾರಾಯಣ್‌, ದೊಡ್ಡಹಳ್ಳಿ ಆಶೋಕ್‌, ವೆಂಕಟಾಪುರದ ಸೀತಾರಾಮ್‌ ನಾಯ್ಕ್‌, ಕ್ಯಾದಿಗುಂಟೆ ಮಲ್ಲಿಕಾರ್ಜನ, ತಾಲೂಕು ಬಿಜಿಪಿ ಎಸ್‌ಸಿ ಘಟಕದ ಅಧ್ಯಕ್ಷ ರಾಜೇಂದ್ರ, ಬಿ. ಹೊಸಹಳ್ಳಿಯ ಪ್ರಸಾದ್‌ಬಾಬು ಹಾಗೂ ಇತರೆ ಆನೇಕ ಮಂದಿ ಬಿಜೆಪಿ ಕಾರ್ಯಕರ್ತರಿದ್ದರು.

click me!