ಮಧುಮೇಹ ಮಾತ್ರೆಯಲ್ಲಿ ಪ್ಲಾಸ್ಟಿಕ್ ಆರೋಪ : ನೀರಲ್ಲೂ ಕರಗುತ್ತಿಲ್ಲ..?

By Suvarna NewsFirst Published Jan 12, 2020, 1:14 PM IST
Highlights

ಮಧುಮೇಹಕ್ಕೆ ಬಳಸುವ ಮಾತ್ರೆಯಲ್ಲಿ ಪ್ಲಾಸ್ಟಿಕ್ ಅಂಶ ಇದೆ ಎಂದು ಮಹಿಳೆಯೋರ್ವರು ಆರೋಪಿಸಿದ್ದಾರೆ. ಪೂರ್ತಿ ದಿನ ನೀರಲ್ಲಿ ಹಾಕಿದರೂ ಕರಗುತ್ತಿಲ್ಲ ಎಂದಿದ್ದಾರೆ.

ಹಾಸನ [ಜ.12]: ಮಧುಮೇಹ ಮಾತ್ರೆಯಲ್ಲಿ ಪ್ಲಾಸ್ಟಿಕ್ ಇದೆ ಎಂದು ಮಹಿಳೆಯೋರ್ವರು ಆರೋಪಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ನಿವಾಸಿ ಮಹಿಳೆಯೋರ್ವರು ಮಧುಮೇಹ ಕಾಯಿಲೆಗೆ ಬಳಸುವ ಮಾತ್ರೆ ನೀರಿನಲ್ಲಿ ಹಾಕಿದರೂ ಕರಗುತ್ತಿಲ್ಲ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಪೂರ್ಣ ದಿನ ನೀರಿನಲ್ಲಿ ಹಾಕಿದ್ದರೂ ಮಾತ್ರೆ ಕರಗುತ್ತಿಲ್ಲ. ಮಾತ್ರೆ ಸೇವನೆ ಬಳಿಕ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದೆ. ಮಾತ್ರೆ ತುಂಡು ಮಾಡಿದರೂ ತುಂಡಾಗುತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ. 

ಯುವತಿ ಜೊತೆ ಲವ್ವಿ ಡವ್ವಿ : ಫೋಟೊ ವೈರಲ್ ಆಗುತ್ತಿದ್ದಂತೆ ಚರ್ಚ್ ಬಿಟ್ಟು ಓಡಿದ ಫಾದರ್.

ಪ್ರಯೋಗಾಲಯದಲ್ಲಿ ಮಾತ್ರೆಯನ್ನು ಪರೀಕ್ಷಿಸಬೇಕು ಎಂದು ಮಹಿಳೆ ಹೇಳಿದ್ದಾರೆ. ಆದರೆ ಇದರ ಸತ್ಯಾಸತ್ಯತೆಗಳು ಪರೀಕ್ಷೆ ಬಳಿಕವಷ್ಟೇ ಬಯಲಾಗಬೇಕಿದೆ.

click me!