ಮೆಟ್ರೋದಲ್ಲಿ ಯುವಕನ ಅಸಭ್ಯ ವರ್ತನೆ, ಮಹಿಳೆಯಿಂದ ಕಪಾಳಮೋಕ್ಷ, ಸುರಕ್ಷತೆ ಬಗ್ಗೆ ಧ್ವನಿ ಎತ್ತಿದ ನಾರಿಯರು

Published : Apr 13, 2024, 03:27 PM IST
ಮೆಟ್ರೋದಲ್ಲಿ ಯುವಕನ ಅಸಭ್ಯ ವರ್ತನೆ, ಮಹಿಳೆಯಿಂದ ಕಪಾಳಮೋಕ್ಷ, ಸುರಕ್ಷತೆ ಬಗ್ಗೆ ಧ್ವನಿ ಎತ್ತಿದ ನಾರಿಯರು

ಸಾರಾಂಶ

ನಮ್ಮ ಮೆಟ್ರೋದಲ್ಲಿ  ಪದೇ ಪದೇ ಮಹಿಳೆ ಜೊತೆ ಅಸಭ್ಯ ವರ್ತನೆ ಪ್ರಕರಣ ಮುನ್ನೆಲೆಗೆ ಬರುತ್ತಿದೆ. ಹೀಗಾಗಿ ಮೆಟ್ರೋ ಸುರಕ್ಷತೆಯ ಬಗ್ಗೆ ಪ್ರಶ್ನೆ ಎದ್ದಿದೆ.  

ಬೆಂಗಳೂರು (ಏ.13): ನಮ್ಮ ಮೆಟ್ರೋದಲ್ಲಿ  ಪದೇ ಪದೇ ಮಹಿಳೆ ಜೊತೆ ಅಸಭ್ಯ ವರ್ತನೆ ಪ್ರಕರಣ ಮುನ್ನೆಲೆಗೆ ಬರುತ್ತಿದೆ. ಹೀಗಾಗಿ ಮೆಟ್ರೋ ಸುರಕ್ಷತೆಯ ಬಗ್ಗೆ ಪ್ರಶ್ನೆ ಎದ್ದಿದೆ.  ಮೆಜೆಸ್ಟಿಕ್ ಮೆಟ್ರೋ ನಲ್ಲಿ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ್ದು, ತಕ್ಷಣ ಎಚ್ಚೆತ್ತ ಮಹಿಳೆ ಕಪಾಳ ಮೋಕ್ಷ ಮಾಡಿದ್ದಾರೆ. ಪದೇ ಪದೇ ಇಂತಹ ಪ್ರಕರಣ ಬೆಳಕಿಗೆ ಬಂದ್ರೂ ನಮ್ಮ ಮೆಟ್ರೋ ದಿವ್ಯ ನಿರ್ಲ್ಯಕ್ಷ್ಯ ಜಾಣ ಕುರುಡುತನ ತೋರುತ್ತಿದೆ ಎಂಬ ಆರೋಪ ಕೇಳಿಬಂದಿದೆ. 

ಮಹಿಳೆಯರ ಸುರಕ್ಷತೆಗೆ ನಮ್ಮ ಮೆಟ್ರೋ ಆದ್ಯತೆ ಕೊಡುವಂತೆ ಮಹಿಳಾ ಪ್ರಯಾಣಿಕರು ಆಗ್ರಹಸಿದ್ದಾರೆ. ಅಸಭ್ಯ ವರ್ತನೆ ತೋರಿಸಿ ಖಾಸಗಿ ಅಂಗಾಂಗ ಸ್ಪರ್ಶಿಸಿ ವಿಕೃತಿ ಮೆರೆದ ಪ್ರಕರಣ ಬೆಳಕಿಗೆ ಬಂದಿದ್ದು. ಇದರ ವಿರುದ್ಧ ಕ್ರಮ ಮಾತ್ರ BMRCL ಕಡೆಯಿಂದ ಶೂನ್ಯವಾಗಿದೆ. ಮೆಟ್ರೋದಲ್ಲಿ ವುಮೆನ್ ಸ್ಕ್ವಾಡ್ ತರಬೇಕೆಂದು  ಒತ್ತಾಯಿಸಲಾಗುತ್ತಿದೆ. ಜೊತೆಗೆ ಎಮರ್ಜೆನ್ಸಿ ಬಟನ್ / ಡೇಂಜರ್ ಬಟನ್ ಅಳವಡಿಕೆಗೆ ಆಗ್ರಹಿಸಲಾಗುತ್ತಿದೆ. ಈ ಮೂಲಕ ಲಕ್ಷಾಂತರ ಜನರ ಮಧ್ಯೆ ಪುಂಡರ ಪತ್ತೆಗೆ ಪ್ಲಾನ್ ರೂಪಿಸಲು ಡಿಮ್ಯಾಂಡ್ ಹೆಚ್ಚಿದೆ. ಪ್ರತೀ ಬೋಗಿಗೆ ಹೈ ಡೆಫಿನೇಶನ್ ಸಿಸಿ ಟಿವಿ ಅಳವಡಿಕೆಗೆ ಒತ್ತಾಯ ಮಾಡಲಾಗುತ್ತಿದೆ.

ಇತ್ತೀಚಿನ ಪ್ರಮುಖ ಪ್ರಕರಣಗಳ ನೋಡೋದಾದ್ರೆ 
ಪ್ರಕರಣ 1

ದಿನಾಂಕ: 2023ರ ನವೆಂಬರ್ 22
ಸ್ಥಳ: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ
ಭಾರೀ ಜನದಟ್ಟಣೆಯ ಮಧ್ಯೆ ಮಹಿಳೆ ಮೆಟ್ರೋ ಭೋಗಿ ಏರಿದ್ರು , ಆಕೆಯ  ಹಿಂಭಾಗ ಸ್ಪರ್ಶಿಸಿ ವ್ಯಕ್ತಿಯೊಬ್ಬ ವಿಕೃತಿ ಮೆರೆದಿದ್ದ, ಆಕೆ ಜೋರಾಗಿ ಕಿರುಚಿದರೂ ಆಕೆಯ ಸಹಾಯಕ್ಕೆ ಯಾರು ಬರಲಿಲ್ಲ, ಈ ಕಹಿ ಘಟನೆ ಬಗ್ಗೆ ಆಕೆಯ ಸ್ನೇಹಿತೆ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿದ್ದು ಬೆಳಕಿಗೆ ಬಂದಿತ್ತು

ಪ್ರಕರಣ 2
ದಿನಾಂಕ: 2023 ಡಿಸೆಂಬರ್ 7
ಸ್ಥಳ: ರಾಜಾಜಿನಗರ ಮೆಟ್ರೋ 
-22 ವರ್ಷದ ಯುವತಿಯ ಮೈ ಕೈ ಮುಟ್ಟಿ ಯುವಕನೊಬ್ಬ ಅಸಭ್ಯ ವರ್ತನೆ ತೋರಿದ್ದ, 
-ಯುವತಿ ಪ್ರತಿರೋಧ ವ್ಯಕ್ತ ಪಡಿಸ್ತಾಯಿದ್ದ ಹಾಗೇ ಆತಂಕಗೊಂಡ ಯುವಕ ಮೆಜೆಸ್ಟಿಕ್ ಅಲ್ಲಿ ಮೆಟ್ರೋ ನಿಲ್ತಾಯಿದ್ದ ಹಾಗೇ ಓಡಿ ಹೋಗ್ತಾನೆ 

ಪ್ರಕರಣ 3
ದಿನಾಂಕ  2023 ರ ಡಿಸೆಂಬರ್ 23
ಸ್ಥಳ:ನ್ಯಾಶನಲ್ ಕಾಲೇಜು 
-ನ್ಯಾಶನಲ್ ಕಾಲೇಜು ಬಳಿ ಮೆಟ್ರೋ ಹತ್ತಿದ್ದ ಶಿಕ್ಷಕಿ, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಜನ ಸಂದಣಿಯ ಮಧ್ಯೆ ಇಳಿಯುವಾಗ ಶಿಕ್ಷಕಿಯ ಹಿಂಭಾಗದಿಂದ ಸ್ಪರ್ಶಿಸಿ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡ್ತಾನೆ.

ಪ್ರಕರಣ 4
ದಿನಾಂಕ:- *2024ರ ಜನವರಿ *
ಸ್ಥಳ:ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ
-ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಯುವತಿಯೊಬ್ಬಳ ಖಾಸಗಿ ಅಂಗ ಸ್ಪರ್ಶಿಸಿದ ಯುವಕನೊಬ್ಬ ಲೈಂಗಿಕ ಕಿರುಕುಳ ಕೊಟ್ಟಿದ್ದ. 
-ಈ ಬಗ್ಗೆ ಮೆಟ್ರೋ ನಿಗಮದ ಸಿಬ್ಬಂದಿಗೆ ಹೇಳ್ತಾ ಇದ್ದ ಹಾಗೇ ತಕ್ಷಣ ಆತನನ್ನ ಹಿಡಿದು ಪೊಲೀಸರಿಗೆ ಒಪ್ಪಿಸುವ ಕೆಲಸವಾಯಿತು. 
-ಪೊಲೀಸರ ಮುಂದೆ ಕ್ಷಮೆಯಾಚಿಸಿ ಯುವಕ ತೆರಳುತ್ತಾನೆ 

ಪ್ರಕರಣ 5
ದಿನಾಂಕ: ಮಾರ್ಚ್ 16, 2024
ಸ್ಥಳ : ರಾಜಾಜಿನಗರ ಮೆಟ್ರೋ ನಿಲ್ದಾಣ
-ಮೆಟ್ರೋ ನಿಲ್ದಾಣದ ಸಹಾಯಕ ಶಾಖಾಧಿಕಾರಿ ಮಹಿಳಾ  ಸಿಬ್ಬಂದಿಯ ಮೈ ಕೈ ಮುಟ್ಟಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದ ಅಂತ ಮಹಿಳಾ ಭದ್ರತಾ ಸಿಬ್ಬಂದಿ ಆರೋಪ ಮಾಡಿದ್ರು. 
-ಸುಬ್ರಹ್ಮಣ್ಯ  ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. 

ಪ್ರಕರಣ 6
ಸ್ಥಳ: ಜಾಲಹಳ್ಳಿ ಮೆಟ್ರೋ ನಿಲ್ದಾಣ
-ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ನಿಂತಿದ್ದ ಎದುರುಗಡೆಯ ಪ್ಲಾಟ್ ಫಾರ್ಮ್ ನಲ್ಲಿ ನಿಂತಿದ್ದ ಸಿಬ್ಬಂದಿಯ ಅಸಭ್ಯ ವರ್ತನೆ 
-ಖಾಸಗಿ ಅಂಗ ಸ್ಪರ್ಶಿಸಿ ಅಸಭ್ಯವಾಗಿ ಸನ್ನೆ ಮಾಡಿದ ಆರೋಪ
-ಇದನ್ನು ಮೊಬೈಲ್ ಅಲ್ಲಿ ಸೆರೆ ಹಿಡಿದ ಮಹಿಳೆಯಿಂದ BMRCL ಗೆ ದೂರು

ಪ್ರಕರಣ 7
ದಿನಾಂಕ 11 ಏಪ್ರಿಲ್ 2024
ಸ್ಥಳ: ಮೆಜೆಸ್ಟಿಕ್ 
-ಪೀಕ್ ಅವರ್ ನಲ್ಲಿ ಮೆಟ್ರೋದಲ್ಲಿ ವ್ಯಕ್ತಿಯೋರ್ವನಿಂದ ಅಸಭ್ಯ ವರ್ತನೆ 
-ಮಹಿಳೆಯ ಜೊತೆ ಅನುಚಿತ ವರ್ತನೆ ಮಾಡ್ತಾಯಿದ್ದ ಹಾಗೇ ಕಪಾಳ ಮೋಕ್ಷ ಮಾಡಿದ ಮಹಿಳೆ 
-ಉಪ್ಪಾರ ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ

PREV
Read more Articles on
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!