ಮಗ​ಳಿಗೆ ಅನಾ​ರೋ​ಗ್ಯ: ​ಆತ್ಮ​ಹ​ತ್ಯೆಗೆ ಶರಣಾದ ತಾಯಿ

Kannadaprabha News   | Asianet News
Published : Nov 19, 2020, 12:15 PM IST
ಮಗ​ಳಿಗೆ ಅನಾ​ರೋ​ಗ್ಯ: ​ಆತ್ಮ​ಹ​ತ್ಯೆಗೆ ಶರಣಾದ ತಾಯಿ

ಸಾರಾಂಶ

ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ| ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದಲ್ಲಿ ನಡೆದ ಘಟನೆ| ಈ ಸಂಬಂಧ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಹೊನ್ನಾವರ(ನ.19): ತನ್ನ ಮಗಳ ಅನಾರೋಗ್ಯದ ವಿಷಯ ಮನಸ್ಸಿಗೆ ಹಚ್ಚಿಕೊಂಡು ತಾಯಿ ನದಿಗೆ ಹಾರಿ ಮೃತಪಟ್ಟ ಕರುಣಾಜನಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ ನಡೆದಿದೆ. 

ಮೃತಪಟ್ಟ ದುರ್ದೈವಿ ತಾಲೂಕಿನ ಹಡಿನಬಾಳ ಜಂಬೊಳ್ಳಿಯ 45 ವರ್ಷದ ಮಂಜುಳಾ ನಾಯ್ಕ ಎಂದು ಗುರುತಿಸಲಾಗಿದೆ. 

ರೈತರಿಗೆ ಕೋಟ್ಯಂತ ರು. ಬಾಕಿ ಕೊಡ್ಬೇ​ಕಿದ್ದ ಗಿರಣಿ ಮಾಲಿಕ ಆತ್ಮ​ಹ​ತ್ಯೆ!

ಇವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ತನ್ನ ಮಗಳಿಗಿದ್ದ ಮಾನಸಿಕ ಕಾಯಿಲೆಯನ್ನು ಮನಸ್ಸಿಗೆ ಹಚ್ಚಿಕೊಂಡು ಹಡಿನಬಾಳ ಸೇತುವೆ ಮೇಲಿಂದ ಗುಂಡಬಾಳ ನದಿಗೆ ಹಾರಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ