ಅನ್ಯಧರ್ಮೀಯ ಯುವತಿಯರ ವಿವಾಹವಾಗಿ ಎಂದ ಸೂಲಿಬೆಲೆ ಹೇಳಿಕೆಗೆ ವ್ಯಾಪಕ ವಿರೋಧ

Published : Mar 11, 2025, 07:18 AM ISTUpdated : Mar 11, 2025, 07:44 AM IST
ಅನ್ಯಧರ್ಮೀಯ ಯುವತಿಯರ ವಿವಾಹವಾಗಿ ಎಂದ ಸೂಲಿಬೆಲೆ ಹೇಳಿಕೆಗೆ ವ್ಯಾಪಕ ವಿರೋಧ

ಸಾರಾಂಶ

ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ವಿವಾಹವಾಗಿ, ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಿ ಎಂಬ ಅಂಕಣಕಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಉಳ್ಳಾಲ/ಬೆಂಗಳೂರು (ಮಾ.11): ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ವಿವಾಹವಾಗಿ, ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಿ ಎಂಬ ಅಂಕಣಕಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಎಸ್‌ಡಿಪಿಐ ಸೇರಿ ಹಲವು ಸಂಘಟನೆಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೇ, ಸೂಲಿಬೆಲೆಯವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.  ವಿಶ್ವ ಹಿಂದೂ ಪರಿಷತ್ ವತಿಯಿಂದ ಭಾನುವಾರ ಮಂಗಳೂರಿನಲ್ಲಿ ನಡೆದಿದ್ದ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಬೃಹತ್ ಪಾದಯಾತ್ರೆಯ ಸಮಾರೋಪ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ್ದ ಸೂಲಿಬೆಲೆ, ಮತಾಂತರವಾದವರನ್ನು ಮತ್ತೆ ಘರ್ ವಾಪ್ಸಿ ಮಾಡುವ ಪ್ರಯತ್ನಕ್ಕೆ ಹಿಂದೂ ಯುವಕರನ್ನು ತರಬೇತುಗೊಳಿಸುವಂತೆ ಕರೆ ನೀಡಿದ್ದರು. 

ಸೂಲಿಬೆಲೆ ಹೇಳಿಕೆಗೆ ಡಿವೈಎಫ್‌ಐ ಮುಖಂಡ ಮುನೀರ್‌ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕೋಮು ಸೌಹಾರ್ದ ಕೆಡಿಸುವ ಯತ್ನ ಎಂದಿದ್ದಾರೆ. ಇದೇ ವೇಳೆ, ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಎಸ್‌ಡಿಪಿಐ, ಮುಸ್ಲಿಂ ಹುಡುಗಿಯರ ತಂಟೆಗೆ ಬಂದರೆ ಹುಷಾರ್‌ ಎಂದಿದೆ. ಈ ಮಧ್ಯೆ, ಸೋಮವಾರ ಸುದ್ದಿಮಾಧ್ಯಮದ ಜೊತೆ ಮಾತನಾಡಿದ ಸೂಲಿಬೆಲೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಘರ್ ವಾಪ್ಸಿಗೆ ಹಿಂದೂ ಯುವಕರ ತರಬೇತುಗೊಳಿಸಿ: ಮತಾಂತರವಾದವರನ್ನು ಮತ್ತೆ ಘರ್ ವಾಪ್ಸಿ ಮಾಡುವ ಪ್ರಯತ್ನಕ್ಕೆ ಹಿಂದೂ ಯುವಕರನ್ನು ತರಬೇತುಗೊಳಿಸಿ, ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ವಿವಾಹವಾಗಿರಿ ಎಂದು ಅಂಕಣಕಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಹಿಂದೂ ಸಮಾಜದ ಐಕ್ಯತೆ, ಲೋಕ ಕಲ್ಯಾಣಾರ್ಥವಾಗಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಭಾನುವಾರ ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ನಡೆದ ಐದನೇ ವರ್ಷದ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಬೃಹತ್ ಪಾದಯಾತ್ರೆಯ ಸಮಾರೋಪ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣಗೈದರು.

ಬಿ.ವೈ.ವಿಜಯೇಂದ್ರ ಕೆಳಗಿಳಿಸಲು ಮಹಾರಾಷ್ಟ್ರ ಸಿಎಂ ದೇವೇಂದ್ರಗೆ ಭಿನ್ನರ ಮೊರೆ

ಹಿಂದುತ್ವ ಗೌರವಿಸುವ ಜನಪ್ರತಿನಿಧಿಗಳು ನಾಡು ಆಳಿದಾಗ ಹಿಂದೂ ಧರ್ಮ ಸುದೀರ್ಘ ಉಳಿಯಲು ಸಾಧ್ಯ. ವಕ್ಫ್ ಆಸ್ತಿಯ ನವೀಕರಣಕ್ಕೆ 150 ಕೋಟಿ ರು. ನೀಡಿರುವ ರಾಜ್ಯ ಸರ್ಕಾರ ಪ್ರಚೋದನೆ ನೀಡಿ ಪ್ರತ್ಯೇಕತೆಯನ್ನು ಹುಟ್ಟುಹಾಕುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು. ಕರ್ನಾಟಕದಲ್ಲಿ ಹಿಂದುಗಳಿಗೆ ಏನೂ ಇಲ್ಲದಂತಾಗಿದೆ. ಹಾಗಾಗಿ ಹಿಂದುತ್ವವವನ್ನು ಗೌರವಿಸುವ ವ್ಯಕ್ತಿಗಳು ನಾಡನ್ನು ಆಳಿದರೆ ಮಾತ್ರ ಹಿಂದೂ ಧರ್ಮ ಸುದೀರ್ಘವಾಗಿ ಬಾಳಲಿದೆ ಎಂದರು. ಪ್ರಧಾನಿ ಮೋದಿಯ ಅಪ್ಪಟ ಅಭಿಮಾನಿ, ಕೊರಗಜ್ಜನ ಭಕ್ತೆ ಶತಾಯುಷಿ ತಿಪಟೂರಿನ ಶಿವಮ್ಮ(103) ಪಾದಯಾತ್ರೆಯಲ್ಲಿ ಭಾಗವಹಿಸಿ ಗಮನಸೆಳೆದರು.

PREV
Read more Articles on
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ