ಶಿರಾದಲ್ಲಿ ಯಾರತ್ತ ಮತದಾರನ ಒಲವು : ಸಮೀಕ್ಷೆ ಹಿಂಗೆ ಹೇಳಿದೆ

By Kannadaprabha NewsFirst Published Oct 22, 2020, 12:58 PM IST
Highlights

ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು ಉಪ ಚುನಾವಣೆ ಅಬ್ಬರ ಜೋರಾಗಿದೆ. ಯಾರ ಗೆಲುವು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ

ತುಮಕೂರು (ಅ.22):  ಉಪಚುನಾವಣೆಗಳು ದಿಕ್ಸೂಚಿ ಅಂತ ನಾನು ಹೇಳಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರತಿಪಾದಿಸಿದರು. ಅವರು ಶಿರಾದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಿದೆ. ಎಲ್ಲಿದೆ ಸರ್ಕಾರ. ಒಬ್ಬ ಮಂತ್ರಿ ಎಲ್ಲಿದೆ ಪ್ರವಾಹ ಅಂದಿದ್ದಾರೆ. ಇನ್ನೊಬ್ರು ಅರೋಗ್ಯ ಸರಿ ಇಲ್ಲ ಅಂದಿದ್ದಾರೆ. ಹೀಗಾಗಿ ಸರ್ಕಾರದ ಆಡಳಿತದ ವಿರುದ್ಧ ಒಂದು ಸಂದೇಶ ನೀಡಬೇಕು. ನಾವು ಆಂತರಿಕ ಸರ್ವೆ ಮಾಡ್ಸಿಸಿದ್ದೇವೆ. ನಮ್ಮ ಸಮೀಕ್ಷೆ ಪ್ರಕಾರ ನಮಗೆ ಶೇ.44 ಮತ ಬರಲಿದೆ. ಒಂದು ಪಕ್ಷಕ್ಕೆ 22, ಮತ್ತೊಂದು ಪಕ್ಷಕ್ಕೆ ಶೇ.21 ಮತ ಬರಲಿದೆ ಎಂದು ತಿಳಿಸಿದರು.

ಬೈಎಲೆಕ್ಷನ್‌: 'ವಿಜಯೇಂದ್ರ ನೇತೃತ್ವದಲ್ಲಿ ಶಿರಾ ಕ್ಷೇತ್ರ ಗೆಲುವು' ...

"

ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ರಮೇಶ್‌ ಬಾಬು ಸ್ಪರ್ಧಿಸಿದ್ದಾರೆ. ಅವರು ಬುದ್ಧಿವಂತಿಕೆ, ಪ್ರಜ್ಞಾವಂತಿಕೆಯಿಂದ ಗಮನ ಸೆಳೆದಿದ್ದು ಗೊತ್ತಿದೆ. 69% ವಿದ್ಯಾರ್ಥಿಗಳು ನಗರ ಪ್ರದೇಶಗಳಿಂದ ಪದವೀಧರರಾಗಿ ಬರುತ್ತಿದ್ದಾರೆ. 47% ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಪದವೀಧರರಾಗಿ ಬರುತ್ತಿದ್ದಾರೆ ಎಂದರು.

ಮೋದಿ ಸಾಹೇಬ್ರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಅಂತಾ ಹೇಳಿದ್ದರು. ಆದರೆ 10% ಕೂಡ ತಲುಪಲು ಆಗಿಲ್ಲ. ಕೊರೋನಾ ಸಂದರ್ಭದಲ್ಲಿ ಯಡಿಯೂರಪ್ಪ ಸರ್ಕಾರ ಉದ್ಯೋಗ ಮರುಸೃಷ್ಟಿಗೆ ಯಾವ ಕ್ರಮನೂ ಕೈಗೊಳ್ಳಲಿಲ್ಲ. ನಮ್ಮ ಒತ್ತಾಯದ ಮೇರೆಗೆ ಕೆಲ ಸಮುದಾಯದವರಿಗೆ ಸಹಾಯ ಮಾಡಬೇಕು ಅಂತ ಬೇಡಿಕೆ ಇಟ್ಟಿದ್ದೆವು. ಆ ಸಮುದಾಯಗಳಿಗೆ 5, 6 ಸಾವಿರ ಘೋಷಿಸಿದರು. ನಿರುದ್ಯೋಗಿಗಳಿಗೆ ಈ ಬಿಜೆಪಿ ಸರ್ಕಾರ ಯಾವುದೇ ಕಾಳಜಿ ವಹಿಸಿಲ್ಲಾ. ಅಜೀಮ್‌ ಪ್ರೇಮ… ಜೀ ವಿವಿ ವರದಿ ಪ್ರಕಾರ 76% ಉದ್ಯೋಗ ಕಳೆದುಕೊಂಡಿದ್ದಾರೆ. ಆದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಇನ್ಯಾರಿಗೆ ನೀವು ಸಹಾಯ ಮಾಡ್ತೀರಾ. ನಿಮ್ಮ ಧ್ವನಿಯಾಗಿ ನಮ್ಮ ಕಾಂಗ್ರೆಸ್‌ ಅಭ್ಯರ್ಥಿಗಳನ್ನ ಗೆಲ್ಲಿಸಿ ಕಳಿಸಿಕೊಡಬೇಕು. ಮುಂದೆ ರಾಜ್ಯ ಹಾಗೂ ರಾಷ್ಟ್ರಕ್ಕೆ ಸ್ಪಷ್ಟಸಂದೇಶ ಕೊಡುವ ಅವಶ್ಯಕತೆಯಿದೆ ಎಂದರು.

ಪಕೋಡ ಮಾರಿ ಅಂದರು: ಬಿಜೆಪಿಯ ಕೆಲ ಸ್ನೇಹಿತರು ಪಕೋಡ ಮಾರಿ ಅಂದರು. ಇಡೀ ವಿದ್ಯಾವಂತ ವರ್ಗಕ್ಕೆ ಇಂಥ ಪರಿಸ್ಥಿತಿ ಅಯ್ತು ಅಂದರೆ, ಸಾಮಾನ್ಯರ ಕಥೆ ಏನು ಎಂದು ಪ್ರಶ್ನಿಸಿದ ಡಿಕೆಶಿ, ಶಿರಾ ಟ್ರೆಂಡ್‌ ಹೇಗಿದೆ ಅನ್ನೋದನ್ನ ತಾವೇ ನೋಡಿದ್ದೀರಾ. ಇಲ್ಲಿನ ಜನ ಬಹಳ ಬುದ್ಧಿವಂತರಿದ್ದಾರೆ. ಜಯಚಂದ್ರ ಅವರು ಶಾಸಕರಾಗಿದ್ದಾಗ ಹೇಗೆ ಅಭಿವೃದ್ಧಿ ಮಾಡಿದ್ದರು. ಆಮೇಲೆ ಏನಾಯ್ತು ಎಂಬುದು ಗೊತ್ತಿದೆ. ನಾವು ಕಾರ್ಯಕರ್ತರ, ಮತದಾರರ ಬಳಿ ಚರ್ಚೆ ಮಾಡಿದ್ದೇವೆ. ನಮ್ಮ ಬಳಿಯೂ ಒಂದು ವರದಿ ಇದೆ. ಆ ವರದಿ ನೋಡಿದರೆ ನೀವು ಶಾಕ್‌ ಆಗ್ತೀರಾ ಎಂದರು.

ಸಿದ್ದರಾಮಯ್ಯನವರೇ ಮುಂದಿನ ಸಿಎಂ ಅನ್ನೋ ಜಮೀರ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರಿದ್ದಾರೆ. ಅದಕ್ಕೆ ಅವರೇ ಪ್ರತಿಕ್ರಿಯೆ ಕೊಡ್ತಾರೆ ಎಂದರು.

ಯುದ್ಧ ಸ್ವೀಕಾರಕ್ಕೆ ಸಿದ್ಧ

ಡಿಕೆಶಿ ಮೀರ್‌ ಸಾದಿಕ್‌ ಎಂಬ ಡಿಸಿಎಂ ಅಶ್ವಥ್‌ ನಾರಾಯಣ… ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ಅವರು ಎಜುಕೇಷನ್‌ ಮಿನಿಸ್ಟರ್‌. ಅವರ ಡಿಕ್ಶನರಿಲಿ ಬೇರೆ ಪದಗಳಿದ್ರೇ ಬಳಸಲಿ. ಯುದ್ಧ ಸ್ವೀಕಾರ ಮಾಡೋಕೆ ತಯಾರಿದ್ದೇವೆ. ಯಡಿಯೂರಪ್ಪ ಅವ್ರನ್ನ ಇಳಿಸೋಕೆ ಏನ್‌ ಮಾಡ್ಬೇಕೋ ಮಾಡ್ತಿದ್ದಾರೆ. ನಾನು ನಮ್ಮ ಪಾರ್ಟಿನ ಕಟ್ಟೋಕೆ ಕಾರ್ಯಕರ್ತನಾಗಿ ಕೆಲಸ ಮಾಡ್ತಿದ್ದೇನೆ. ನಾನು ಪಕ್ಷದ ಅಧ್ಯಕ್ಷ. ಆ ರೇಸ್‌ ಈ ರೇಸ್‌ ಅಂತಾ ಏನಿಲ್ಲ. ನನ್ನ ಮೇಲೆ ನಡೆದ ದಾಳಿ ಒಳ್ಳೆಯದಾ, ಕೆಟ್ಟದಾ ಅಂತ ಜನ ತೀರ್ಮಾನ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರವಿ ಹಾಗೇ ಗ್ರಾಪಂ ಸದಸ್ಯನೂ ಮಾತಾಡಲ್ಲ

ಪರಮೇಶ್ವರ್‌, ರಾಜಣ್ಣ ಬಿಜೆಪಿಗೆ ಸಹಾಯ ಮಾಡುತ್ತಾರೆ ಅನ್ನೋ ಸಿಟಿ ರವಿ ಹೇಳಿಕೆಗೆ, ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಗ್ರಾಮ ಪಂಚಾಯ್ತಿ ಸದಸ್ಯನೂ ಮಾತಾಡಲ್ಲ ಹಾಗೆ ಮಾತಾಡಿದರೆ ಏನು ಹೇಳಬೇಕು ಎಂದು ಮರು ಪ್ರಶ್ನಿಸಿದರು.

click me!