ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ದಸರೆಗೆ ಎಷ್ಟು ಖರ್ಚಾಗಿದೆ ಇಲ್ಲಿದೆ ಮಾಹಿತಿ
ಮೈಸೂರು (ನ.02): ಕೋವಿಡ್ ಆತಂಕ ನಡುವೆಯೂ ಜರುಗಿದ ಈ ಬಾರಿಯ ಸರಳ ದಸರಾ ಮಹೋತ್ಸವಕ್ಕೆ 2.91 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಮೈಸೂರು ಅರಮನೆ ಮಂಡಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ದಸರೆಗೆ ರಾಜ್ಯ ಸರ್ಕಾರ 10 ಕೋಟಿ ರು. ಬಿಡುಗಡೆ ಮಾಡಿದೆ.
ಇದರಲ್ಲಿ 50 ಲಕ್ಷ ಶ್ರೀರಂಗಪಟ್ಟಣ ದಸರಾ ಹಾಗೂ 36 ಲಕ್ಷ ಚಾಮರಾಜನಗರ ದಸರೆಗೆ ನೀಡಲಾಗಿತ್ತು.
'ವಿಜ್ಞಾನಕ್ಕೆ ಸವಾಲಾದ ಅಲಮೇಲಮ್ಮನ ಶಾಪ' ...
ಉಳಿದ 9.14 ಕೋಟಿಗಳಲ್ಲಿ ಮೈಸೂರು ದಸರಾ ಮಹೋತ್ಸವಕ್ಕೆ 2.05 ಕೋಟಿ ಖರ್ಚಾಗಿದ್ದು, ಉಳಿಕೆ 7.08 ಕೋಟಿ ದಸರಾ ವಿಶೇಷಾಧಿಕಾರಿಗಳಾದ ಜಿಲ್ಲಾಧಿಕಾರಿ ಖಾತೆಯಲ್ಲಿದೆ. ಬಾಕಿ ಹಣವನ್ನು ಏನು ಮಾಡಬೇಕು ಎಂದು ಮುಖ್ಯಮಂತ್ರಿ ಗಮನಕ್ಕೆ ತಂದು ಮುಂದುವರಿಯುವುದಾಗಿ ಸಚಿವ ಹೇಳಿದರು.