* ಶಾಲಾ ಹಂತದಲ್ಲೇ ಮಕ್ಕಳು ನೈತಿಕ ಶಿಕ್ಷಣ, ಧರ್ಮ, ಸಂಸ್ಕೃತಿ ಕಲಿಯಬೇಕು
* ಭಗವದ್ಗೀತೆ ಸೇರ್ಪಡೆ ಅವಶ್ಯ
* ಭಗವದ್ಗೀತೆ ಸೇರ್ಪಡೆ ವಿಚಾರ ಸಿದ್ದರಾಮಯ್ಯ ಸ್ವಾಗತಿಸಿರುವುದು ಅವರ ಸದ್ಬುದ್ಧಿಗೂ ಸ್ವಾಗತ
ಹುಬ್ಬಳ್ಳಿ(ಮಾ.20): ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ವಿಷಯ ಸೇರ್ಪಡೆ ಮಾಡುವುದರಲ್ಲಿ ತಪ್ಪೇನಿದೆ? ಈ ವಿಷಯದಲ್ಲಿ ಜಾತಿವಾದ ಮಾಡದೇ ಎಲ್ಲರೂ ಸ್ವಾಗತಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಹೇಳಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಾಲಾ ಹಂತದಲ್ಲೇ ಮಕ್ಕಳು(Children) ನೈತಿಕ ಶಿಕ್ಷಣ, ಧರ್ಮ, ಸಂಸ್ಕೃತಿ ಕಲಿಯಬೇಕು. ಈ ಹಿನ್ನೆಲೆಯಲ್ಲಿ ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದರಿಂದ ಶಾಲಾ ಮಕ್ಕಳಿಗೆ ಪುರಾಣೇತಿಹಾಸದಂತಹ ಸಾಕಷ್ಟು ವಿಷಯಗಳ ತಿಳಿವಳಿಕೆ ಮೂಡುತ್ತದೆ. ಹಾಗಾಗಿ ಭಗವದ್ಗೀತೆ ಸೇರ್ಪಡೆ ಅವಶ್ಯ ಎಂದು ಪ್ರತಿಪಾದಿಸಿದರು.
ಭಗವದ್ಗೀತೆ ಸೇರ್ಪಡೆ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಸ್ವಾಗತಿಸಿರುವುದು ಅವರ ಸದ್ಬುದ್ಧಿಯನ್ನೂ ಸ್ವಾಗತಿಸುತ್ತೇನೆ ಎಂದು ವ್ಯಂಗ್ಯವಾಡಿದರು. ಕಾಶ್ಮೀರದಲ್ಲಿ ನರಹತ್ಯೆ ಆಗಿರುವುದು ಮತ್ತು ದೇಶದ ಗೌರವಾನ್ವಿತ ನಾಗರಿಕರು ರಸ್ತೆ ಬದಿ ಬಂದು ಜೀವನ ಮಾಡಿದ್ದು, ಇತಿಹಾಸದಲ್ಲಿ ಎಂದೂ ಆಗಿಲ್ಲ. ಈ ನೈಜ ಘಟನೆಗಳನ್ನು ನಿರ್ದೇಶಕರು ಸಿನಿಮಾದಲ್ಲಿ ದಾಖಲಿಸಿದ್ದಾರೆ. ಇತಿಹಾಸದ ಕರಾಳತೆ ನಮಗೆ ಪಾಠವಾಗಬೇಕು. ಸಿನಿಮಾ ಚೆನ್ನಾಗಿದೆ. ಹಾಗಾಗಿ ಅದು ಪಾಪ್ಯುಲರ್ ಆಗಿದೆ ಎಂದ ಅವರು, ಕಾಶ್ಮೀರಿ ಫೈಲ್(The Kashmir Files) ಹಾಗೂ ಇತರ ನರಹತ್ಯೆ ಘಟನೆಗಳ ಹೋಲಿಕೆ ಬಗ್ಗೆ ವ್ಯಾಖ್ಯಾನಿಸುವುದಿಲ್ಲ. ಕಾಶ್ಮೀರಿ ಫೈಲ್ ಸಿನಿಮಾ ಚೆನ್ನಾಗಿದೆ ಎಂದಿದ್ದೇವೆ ಹೊರತು ಅದನ್ನು ಬೆಂಬಲಿಸಿಲ್ಲ ಎಂದು ಸ್ಪಷ್ಟಪಡಿಸಿದರು. ದೇಶದಲ್ಲಿ ಇತರೆಡೆಗಳಲ್ಲಿಯೂ ನರಹತ್ಯೆ ಪ್ರಕರಣಗಳ ಸಿನಿಮಾಗಳು ಬರಲಿ. ಅವುಗಳನ್ನು ಬೆಂಬಲಿಸುವ ಬಗ್ಗೆ ಆಗಿನ ಸರ್ಕಾರಗಳು ಏನು ಮಾಡುತ್ತವೆಯೋ ನೋಡೋಣ ಎಂದರು.
Hijab Verdict: ಮಕ್ಕಳಿಗೆ ವಿದ್ಯೆಗಿಂತ ಮುಖ್ಯ ಯಾವುದೂ ಇಲ್ಲ: ಕೇಂದ್ರ ಸಚಿವ ಜೋಶಿ
ಭಗವದ್ಗೀತೆ ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆ: ಮುನೇನಕೊಪ್ಪ
ಹುಬ್ಬಳ್ಳಿ: ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ವಿಚಾರದಲ್ಲಿ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನನ್ನ ಒಪ್ಪಿಗೆ ಇದೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ(Shankar Patil Munenkoppa) ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಷಯವಾಗಿ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಈಗಾಗಲೇ ಮಾತನಾಡಿದ್ದಾರೆ. ಅವರು ಮಾತನಾಡಿದ ಮೇಲೆ ನಾನು ಹೇಳುವುದು ಸರಿಯಲ್ಲ. ಆದರೆ ನಮ್ಮ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಒಪ್ಪಿಗೆ ಇದೆ ಎಂದರು.
ಕಾಂಗ್ರೆಸ್(Congress) ಆಕ್ಷೇಪಿಸುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸಿಗರು ಬರೀ ಚುನಾವಣೆ ದೃಷ್ಟಿಕೋನದಿಂದಲೇ ಎಲ್ಲ ಹೇಳಿಕೆ ನೀಡುತ್ತಾರೆ. ಸದನದಲ್ಲೂ ವೋಟ್ ಬ್ಯಾಂಕ್ ರಾಜಕಾರಣದಂತೆ ಮಾತನಾಡುತ್ತಾರೆ. ಯಾವಾಗಲೂ ಅವರದ್ದು ಮತಬ್ಯಾಂಕ್ ರಾಜಕೀಯ(Vote Bank Politics). ದೇಶದಲ್ಲಿ ಜನ ತಿರಸ್ಕರಿಸಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲೂ(Election) ಎಲ್ಲೂ ಅಧಿಕಾರ ಪಡೆಯಲು ಅವರಿಗೆ ಸಾಧ್ಯವಾಗಿಲ್ಲ. ಆದರೂ ಪಾಠ ಕಲಿತಿಲ್ಲ. ಇನ್ನಾದರೂ ಅವರು ಪಾಠ ಕಲಿಯಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ(Narendra Modi), ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.
Karnataka Politics: ಬಿಜೆಪಿ ಎಂದೂ ಗೆಲ್ಲದ ಕ್ಷೇತ್ರ ಗೆಲ್ಲೋಣ: ಸಿಎಂ ಬೊಮ್ಮಾಯಿ
ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿಚಾರ ರಾಷ್ಟ್ರಮಟ್ಟದಲ್ಲಿ ಹಬ್ಬಿಸುವ ಆವಶ್ಯಕತೆ ಇರಲಿಲ್ಲ. ಜತೆಗೆ ಕೋರ್ಟ್ ತೀರ್ಪು ಕೊಟ್ಟಮೇಲೂ ಬಂದ್ ಮಾಡಲಾಗುತ್ತಿದೆ. ಅದಕ್ಕೆ ಅವರು ಬೆಂಬಲ ಸೂಚಿಸುತ್ತಾರೆ. ನಾವು ಭಾರತೀಯರು ಸಂವಿಧಾನದ ಆಶಯಕ್ಕೆ ಧಕ್ಕೆ ಬಾರದಂತೆ ಬದುಕಬೇಕು. ಈ ನೆಲದ ಕಾನೂನನ್ನು ಪಾಲಿಸಬೇಕು. ಕಾಂಗ್ರೆಸ್‌ನ ಈ ನಡೆ ಸರಿಯಲ್ಲ ಎಂದರು.
‘ದಿ ಕಾಶ್ಮೀರ ಫೈಲ್ಸ್’ ಚಿತ್ರ ದೇಶದ ಎಲ್ಲ ಭಾಷೆಗಳಲ್ಲಿ ಬಿಡುಗಡೆಯಾಗಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಬಿಡುಗಡೆಯಾಗಬೇಕು. ಈ ಮೂಲಕ ದೇಶದ ಜನತೆಗೆ ಇತಿಹಾಸ ತಿಳಿಯಬೇಕು.