ತಂತ್ರಜ್ಞಾನ ಬೆಳೆದಂತೆ ಕೃಷಿ ಕ್ಷೇತ್ರವೂ ಬೆಳೆಯುತ್ತಿದೆ. ಬೆಳೆದ ಬೆಳೆಯ ನಡುವಿನ ಕಳೆ ತೆಗೆಯಲು ರೈತರು ಅನೇಕ ಯಂತ್ರ, ಸಾಧನಗಳ ಮೋರೆ ಹೋಗುತ್ತಿದ್ದಾರೆ. ಆ ನಿಟ್ಟಿನಲ್ಲಿ ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದ ಯುವಕ ಚನ್ನವೀರಸ್ವಾಮಿ ಮುಳಗುಂದಮಠ ತ್ರಿಚಕ್ರ ವಾಹನದ ಮೂಲಕ ಕಳೆ ತೆಗೆಯುವ ಸಾಧನ ಅಭಿವೃದ್ಧಿಪಡಿಸಿದ್ದಾರೆ.
ಬಾಲಕೃಷ್ಣ ಜಾಡಬಂಡಿ
ಹುಬ್ಬಳ್ಳಿ (ಫೆ.13) : ತಂತ್ರಜ್ಞಾನ ಬೆಳೆದಂತೆ ಕೃಷಿ ಕ್ಷೇತ್ರವೂ ಬೆಳೆಯುತ್ತಿದೆ. ಬೆಳೆದ ಬೆಳೆಯ ನಡುವಿನ ಕಳೆ ತೆಗೆಯಲು ರೈತರು ಅನೇಕ ಯಂತ್ರ, ಸಾಧನಗಳ ಮೋರೆ ಹೋಗುತ್ತಿದ್ದಾರೆ. ಆ ನಿಟ್ಟಿನಲ್ಲಿ ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದ ಯುವಕ ಚನ್ನವೀರಸ್ವಾಮಿ ಮುಳಗುಂದಮಠ(Channaveeraswamy mulagundamath) ತ್ರಿಚಕ್ರ ವಾಹನದ ಮೂಲಕ ಕಳೆ ತೆಗೆಯುವ ಸಾಧನ ಅಭಿವೃದ್ಧಿಪಡಿಸಿದ್ದಾರೆ.
ಸಾಧಿಸುವ ಛಲ, ನಿರಂತರ ಪರಿಶ್ರಮವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಮಾತಿಗೆ ಇವರು ಸಾಕ್ಷಿಯಾಗಿದ್ದಾರೆ. ಕೋವಿಡ್ ಲಾಕ್‌ಡೌನ್(Covid lockdown) ವೇಳೆಯನ್ನೇ ತಮ್ಮ ಪ್ರಯೋಗಕ್ಕೆ ಸದುಪಯೋಗಪಡಿಸಿಕೊಂಡಿದ್ದಾರೆ.
ಕೊಪ್ಪಳ: ಆಕಸ್ಮಿಕ ಬೆಂಕಿ; 20 ಲಕ್ಷ ರೂ. ಮೌಲ್ಯದ 4 ಎಕರೆ ತೋಟಗಾರಿಕೆ ಬೆಳೆ ನಾಶ
ಕಂಪ್ಲಿಕೊಪ್ಪ(Kamplikoppa)ದಲ್ಲಿಯೇ ತಂದೆ ಸ್ಥಾಪಿಸಿದ ವೆಲ್ಡಿಂಗ್ ಶಾಪ್ ಮುನ್ನಡೆಸುತ್ತಿರುವ ಚನ್ನವೀರಸ್ವಾಮಿ ಲಾಕ್‌ಡೌನ್ ಸಂದರ್ಭ ನಿರಂತರವಾಗಿ ಬೈಕ್‌ನಿಂದಾಗಿ ಕಳೆ ತೆಗೆಯುವ ಸಾಧನ ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದರು. ಗುಜರಿ ಹಾಕುವ ಸ್ಥಿತಿಯಲ್ಲಿದ್ದ ಬೈಕ್‌ನ್ನು ಎರಡ್ಮೂರು ಬಾರಿ ಆವಿಷ್ಕಾರಕ್ಕೆ ಬಳಸಿಕೊಂಡು ಪ್ರಾರಂಭದಲ್ಲಿ ವೈಫಲ್ಯ ಕಂಡಿದ್ದರು. ಬಳಿಕ 2022ರ ಡಿಸೆಂಬರ್‌ನಲ್ಲಿ ಮರಳಿ ಯತ್ನ ಮಾಡಿದ್ದು, ಕೊನೆಗೂ ಯಶಸ್ಸು ಗಳಿಸಿದ್ದಾರೆ.
10 ರೈತರಿಂದ ಆರ್ಡರ್:
ಬೆಂಗಳೂರಿನ ಕಂಪನಿಯೊಂದರಲ್ಲಿ ಎಲೆಕ್ಟ್ರಿಕಲ್ ಸೂಪರ್‌ವೈಸರ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ತಮ್ಮ ವೃತ್ತಿಯೊಂದಿಗೆ ಕೃಷಿಯನ್ನು ಉಪವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಕೃಷಿ ಬಗ್ಗೆ ಅಪಾರ ಆಸಕ್ತಿ ಹೊಂದುವ ಜತೆಗೆ ಏನಾದರೂ ಮಾಡಬೇಕೆಂಬ ಛಲವಿದೆ. ಕೃಷಿಕ ತಂದೆಗೆ ಸಹಾಯಕವಾಗಬೇಕೆಂದು ತ್ರಿಚಕ್ರ ವಾಹನದ ಮೂಲಕ ಕಳೆ ತೆಗೆಯುವ ಸಾಧನ ಅಭಿವೃದ್ಧಿಪಡಿಸಿದ್ದಾರೆ. ಅದರ ಪ್ರಾಯೋಗಿಕ ಕಾರ್ಯವನ್ನು ಮೊದಲು ತಮ್ಮ 4 ಎಕರೆ ಹೊಲದಲ್ಲಿ ಮಾಡಿ ಯಶಸ್ವಿಯಾಗಿದ್ದಾರೆ. ಇದನ್ನು ಕಂಡ ಸುತ್ತಮುತ್ತಲಿನ ರೈತರು ಇಂತಹ ಸಾಧನ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಸುಮಾರು 10 ರೈತರು ಆರ್ಡರ್ ನೀಡಿದ್ದು, ಅದರಲ್ಲಿ ಮೂವರು ಈಗಾಗಲೇ ಮುಂಗಣ ಹಣ ನೀಡಿದ್ದಾರೆ.
. 60 ಸಾವಿರ ಖರ್ಚು:
ಹಳೇ ಬೈಕ್‌ನಿಂದ ಅಭಿವೃದ್ಧಿಪಡಿಸಲಾದ ತ್ರಿಚಕ್ರ ವಾಹನಕ್ಕೆ ಒಂದು ಲೀಟರ್ ಪೆಟ್ರೋಲ್ ಹಾಕಿದರೆ ಒಂದು ಎಕರೆ ವ್ಯಾಪ್ತಿಯಲ್ಲಿ ಕಳೆ ತೆಗೆಯಬಹುದು. ವೇಗದ ಮಿತಿ ಕಡಿತಗೊಳಿಸಲಾಗಿದೆ. ದಿನಕ್ಕೆ 8ರಿಂದ 10 ಎಕರೆಯಲ್ಲಿ ಕಳೆ ತೆಗೆಯಬಹುದು. 1 ತ್ರಿಚಕ್ರ ವಾಹನ ತಯಾರಿಸಲು . 50ರಿಂದ 60 ಸಾವಿರ ಖರ್ಚಾಗುತ್ತದೆ. ಬೈಕ್‌ಗೆ ಅಗತ್ಯವಾಗಿ ಬೇಕಾದ ಎಲ್ಲ ಸಾಮಗ್ರಿ ಅಳವಡಿಸಲಾಗಿದೆ. ಇದರ ಹೊರತಾಗಿ ವೆಲ್ಡಿಂಗ್ ಮೂಲಕ ಹಿಂದುಗಡೆ 3 ಕುಂಟಿ ಜೋಡಿಸಲಾಗುತ್ತದೆ. ಚನ್ನವೀರಸ್ವಾಮಿ ವೆಲ್ಡಿಂಗ್ ಶಾಪ್‌ನಲ್ಲಿ ಕುಂಟಿ, ಕೂರಗಿ, ರಂಟಿ ಸೇರಿದಂತೆ ಕೃಷಿ ಉಪಕರಣ ತಯಾರಿಸುತ್ತಾರೆ. ವಾಹನ ರಿಪೇರಿ, ಪೇಟಿಂಗ್ ಮುಂತಾದ ಕಾರ್ಯವನ್ನೂ ಮಾಡುತ್ತಾರೆ. ವೃತ್ತಿಪರ ಐಟಿಐ, ಬಿಎ ಪದವಿ ಪಡೆದಿರುವ ಚನ್ನವೀರಸ್ವಾಮಿ ಕಾರ್ಯಕ್ಕೆ ಅವರ ತಂದೆ ಬಸವಣ್ಣಯ್ಯ, ಸಹೋದರ ನಾಗರಾಜ್ ಸಾಥ್ ನೀಡಿದ್ದಾರೆ.
ಕೂಲಿ ಕಾರ್ಮಿಕರ ಅಭಾವ, ಜಾನುವಾರಗಳ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಕಳೆನಾಶಕದಿಂದ ರೈತಸಮೂಹವನ್ನು ದೂರವಿಡುವ ನಿಟ್ಟಿನಲ್ಲಿ ಇಂತಹ ಸಾಧನಗಳು ಅನ್ನದಾತರಿಗೆ ನೆರವಾಗಲಿವೆ ಎಂಬುದಂತೂ ಸತ್ಯ.
ರೈತರ ಸಮಗ್ರ ಅಭಿವೃದ್ಧಿಗೆ ಯೋಜನೆಗಳು ಜಾರಿ: ಸಂಸದ ರಾಘವೇಂದ್ರ
ಸಾಧನ ಅಭಿವೃದ್ಧಿಪಡಿಸುವಾಗ ಹಲವರು ಪ್ರೋತ್ಸಾಹ ನೀಡಿದರು. ಇನ್ನು ಕೆಲವರು ಕೀಳಾಗಿ ಕಂಡರು. ಲಾಕ್‌ಡೌನ್ ವೇಳೆ ಪ್ರಯೋಗ ಮಾಡಿ ಸೋತಿದ್ದೆ. ಈಗ ತ್ರಿಚಕ್ರ ವಾಹನ ಸಿದ್ಧಪಡಿಸಿದ್ದೇನೆ. 10ರಿಂದ 12 ರೈತರು ಕಳೆ ತೆಗೆಯುವ ಸಾಧನ ಮಾಡಿಕೊಡುವಂತೆ ತಿಳಿಸಿದ್ದಾರೆ.
ಚನ್ನವೀರಸ್ವಾಮಿ ಮುಳಗುಂದಮಠ