ಮದ್ದೂರು (ಆ.27): ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ನಮಗೆ ಕಾಂಗ್ರೆಸ್ ಸಹಾಯ ಮಾಡಿಲ್ಲ. ಜೆಡಿಎಸ್ ಕೂಡ ಮಾಡಿಲ್ಲ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಗೆಲುವಿನ ಗುರಿ ಮುಟ್ಟಲಾಗಿಲ್ಲ. ಬಿಜೆಪಿಗೆ ಅದು ಸಾಧ್ಯವಾಗಿದೆ. ಬಹುಮತದೊಂದಿಗೆ ಅಧಿಕಾರ ಹಿಡಿದಿದ್ದೇವೆ. ಹಿಂದೆಯೂ ಜೆಡಿಎಸ್ ನವರು ಮೇಯರ್ ಆಗುವುದಕ್ಕೆ ಪ್ರತ್ಯಕ್ಷ ಪರೋಕ್ಷವಾಗಿ ಬಹಳ ಸಹಾಯ ಮಾಡಿದ್ದೇವೆ ಎಂದರು.
ಮೊಟ್ಟ ಮೊದಲ ಬಾರಿಗೆ ಕಮಲಕ್ಕೊಲಿದ ಮೈಸೂರು ಮೇಯರ್ ಪಟ್ಟ : BJP ತಂತ್ರಗಾರಿಕೆಗೆ ಸಕ್ಸಸ್
ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಉತ್ತಮವಾಗಿ ನಡೆಯುತ್ತಿದೆ. ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಹಾಗು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಪಕ್ಷ ಸಂಘಟನೆಗೆ ಶಕ್ತಿ ತುಂಬುತ್ತಿದ್ದಾರೆ ಎಂದು ಹೇಳಿದರು.
ಪಕ್ಷದೊಳಗೆ ಮೂಲ ಮತ್ತು ವಲಸಿಗರು ಒಂದೊಂದು ದಾರಿಯಲ್ಲಿ ಹೋಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಟಿ ರವಿ ಪಕ್ಷಕ್ಕೆ ಇರುವುದು ಒಂದೇ ಸಿಂಬಲ್ , ಒಂದೇ ದಾರಿ. ಯಾರು ಎಷ್ಟೆ ದಾರಿಯಲ್ಲಿ ಹೋದರೂ ಅಂತಿಮವಾಗಿ ಪಕ್ಷ ದಾರಿಗೆ ಬರಲೇಬೇಕು ಎಂದರು.