ಧರ್ಮ, ಜಾತಿ ಸಂಘರ್ಷದಲ್ಲಿ ಪರಂಪರೆ ಮಾಯ: ರಂಭಾಪುರಿ ಶ್ರೀ

By Kannadaprabha News  |  First Published Oct 28, 2022, 8:47 AM IST

Ballari News: ಧರ್ಮ,ಜಾತಿ ಸಂಘರ್ಷದಲ್ಲಿ ಪರಂಪರೆ ಮಾಯ, ಶ್ರೀವೀರಭದ್ರೇಶ್ವರ ಸ್ವಾಮಿಯ ನೂತನ ರಥದ ಪ್ರಾಣ ಪ್ರತಿಷ್ಠಾಪನೆಯಲ್ಲಿ ರಂಭಾಪುರಿ ಶ್ರೀಗಳು ಆತಂಕ


ಹರಪನಹಳ್ಳಿ (ಅ. 28): ಧರ್ಮ ಮತ್ತ ಜಾತಿಯ ಸಂಘರ್ಷದಲ್ಲಿ ನಮ್ಮ ಭಾರತೀಯ ಸಂಸ್ಕೃತಿ, ಪಂರಪರೆಗಳ ಆದರ್ಶಗಳು ಮಾಯವಾಗುತ್ತಿವೆ ಎಂದು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಶಿವಾಚಾರ್ಯರು ಮಹಾಸ್ವಾಮಿಗಳು ಆತಂಕ ವ್ಯಕ್ತಪಡಿಸಿದರು. ಅವರು ಪಟ್ಟಣದ ಕಾಳಿಕಾಂಬ ರಥಶಿಲ್ಪ ಕೇಂದ್ರ,ತರಳಬಾಳು ಕಲ್ಯಾಣ ಮಂಟಪದ ಬಳಿ ಬುಧವಾರ ಹರಪುರಿ ಸಾರಿ ಬಯಲು ಶ್ರೀವೀರಭದ್ರೇಶ್ವರ ಸ್ವಾಮಿಯ ನೂತನ ರಥದ ಪ್ರಾಣ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೈಚಾರಿಕತೆ ಮತ್ತು ಆಧುನಿಕತೆ ಹೆಸರಿನಲ್ಲಿ ಲಂಗು ಲಗಾಮು,ದಿಕ್ಕು, ದಿಶೆ ಇಲ್ಲದೆ ಜನಸಮುದಾಯ ಕವಲುದಾರಿಯಲ್ಲಿ ಹೊರಟಿರುವುದು ಬಹಳಷ್ಟುಆತಂಕಕಾರಿಯಾಗಿದ್ದು,ಧರ್ಮ ಪೀಠಗಳ ಮಾರ್ಗದರ್ಶನದಲ್ಲಿ ನಡೆಯದೆ ಹೋದರೆ ಭವಿಷ್ಯತ್ತಿನ ದಿನಗಳಲ್ಲಿ ಅನೇಕ ಆತಂಕ,ನೋವುಗಳನ್ನು ಅನುಭವಿಸಬೇಕೆ ಹೊರತು ಬೇರೆ ದಾರಿ ಇಲ್ಲ ಎಂದು ಹೇಳಿದರು.

Tap to resize

Latest Videos

undefined

ಇತಿಹಾಸವುಳ್ಳ ಸ್ಥಳೀಯ ಹರಪುರಿ ಸಾರಿ ಬಯಲು ಶ್ರೀವೀರಭದ್ರೇಶ್ವರ ದೇವಸ್ಥಾನ ಭಕ್ತ ಸಂಕುಲದ ನಂಬಿಗೆ ಶ್ರದ್ಧಾ ಕೇಂದ್ರವಾಗಿದೆ.ಭವ್ಯ ಭದ್ರ ನೂತನ ರಥ ನಿರ್ಮಿಸಿ ಇಂದು ಪ್ರಾಣ ಪ್ರತಿಷ್ಠಾಪನೆ ಮಾಡಿ ಲೋಕಾರ್ಪಣೆಗೊಳ್ಳುತ್ತಿರುವುದು ತಮ್ಮೆಲ್ಲರ ಧರ್ಮ ನಿಷ್ಠೆಗೆ ಸಾಕ್ಷಿಯಾಗಿದೆ.ದುಷ್ಟರ ಸಂಹಾರ ಶಿಷ್ಟರ ಸಂರಕ್ಷಣೆ ಶ್ರೀವೀರಭದ್ರಸ್ವಾಮಿಯ ಅವತಾರದ ಮೂಲ ಉದ್ದೇಶವಾಗಿದೆ ಎಂದರು.

ಇದನ್ನೂ ಓದಿ: ಇಳಿ ವಯಸ್ಸಲ್ಲೂ ರಂಭಾಪುರಿ ಶ್ರೀ ಧರ್ಮ ರಕ್ಷಣೆಗೆಗಾಗಿ ಹೋರಾಡುತ್ತಿದ್ದಾರೆ: ಸಚಿವ ಆರಗ ಜ್ಞಾನೇಂದ್ರ

ರಥ ನಿರ್ಮಾಣದಲ್ಲಿ ಕಲಾವಿದರ ನೈಪುಣ್ಯವನ್ನು ಮೆಚ್ಚಿದ ಶ್ರೀಗಳು ಆತ್ಮಬಲದಿಂದ ಸಕಲರನ್ನು ಉದ್ಧರಿಸಿದಂತಹ ಉಜ್ಜಯಿನಿ ಪೀಠದ ಲಿಂಗೈಕ್ಯ ಶ್ರೀಗಳ ಭಾವಚಿತ್ರವನ್ನು ಅಳವಡಿಸುವ ಮುಖಾಂತರ ರಥವು ಪರಿಪೂರ್ಣವಾಗಲಿದೆ.ರಥ ಶಿಲ್ಪಿ ಚನ್ನೇಶ ಆಚಾರ್ಯ ಅವರಿಗೆ ಮುಂದಿನ ದಿನಗಳಲ್ಲಿ ಕನ್ನಡ ರಾಜೋತ್ಸವ ಪ್ರಶಸ್ತಿ ಲಭಿಸುವಂತಾಗಲಿ ಎಂದರು.

ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ,ನಂಬಿಕೆ ಮತ್ತು ಶ್ರದ್ಧೆಯಿಂದ ನಡೆದು ಜೀವನದಲ್ಲಿ ನೆಮ್ಮದಿ ಪಡೆಯಬೇಕು. ಶ್ರೀರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಮತ್ತು ಗೋತ್ರಪುರುಷನಾಗಿ ಪೂಜೆಗೊಳ್ಳುವ ಶ್ರೀ ವೀರಭದ್ರಸ್ವಾಮಿ ನಮ್ಮೂರಿನಲ್ಲಿ ನೆಲೆಗೊಂಡಿರುವುದು ಸಂತಸವಾಗಿದೆ ಎಂದರು. ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.ಕಾರ್ಯಕ್ರಮದ ಸಂಘಟಕ ವೀರಮಲ್ಲಪ್ಪ ಪೂಜಾರ ಪ್ರಾಸ್ಥಾವಿಕವಾಗಿ ಮಾತನಾಡಿದರು.

ಗುರುಪಾದದೇವರ ಮಠದ ಗುರುಪಾದಯ್ಯ ಸ್ವಾಮಿಜಿ, ಶಿವಕುಮಾರಸ್ವಾಮಿಜಿ, ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪಸೆ,ಜಿಪಂ ಸಿಇಓ ಚನ್ನಪ್ಪ, ಟಿ.ಎಂ.ಚಂದ್ರಶೇಖರಯ್ಯ,ಪಿ.ಬಿ.ಗೌಡ, ಪಾಟೀಲ ಪ್ರವೀಣ್‌, ಶಶಿಧರ ಪೂಜಾರ, ಚಂದ್ರಶೇಖರ ಪೂಜಾರ, ಐಗೋಳು ಚಿದಾನಂದಪ್ಪ, ರಥ ಶಿಲ್ಪಿಗಳಾದ ಚನ್ನೇಶ ಆಚಾರ,ವಿರೇಶ್‌ ಆಚಾರ, ವಿಜಯಕುಮಾರ, ಪೂಜಾರ ಷಣ್ಮುಖಪ್ಪ,ರೇಣುಕಾತೊಂಡಿಹಾಳ, ಎಸ್‌.ಆರ್‌.ಗಂಗಪ್ಪ, ರವಿ,ಡಾ.ರಮೇಶಕುಮಾರ, ಡಾ.ನಾಗರಾಜ ಸೇರಿದಂತೆ ಇತರರು ಇದ್ದರು.

click me!