ನೀರು ಪೂರೈಕೆ: ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ: ಪ್ರಭು ಚವ್ಹಾಣ್‌

By Kannadaprabha News  |  First Published Nov 3, 2022, 3:55 AM IST
  • ನೀರು ಪೂರೈಕೆ: ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ
  • ಮನೆ ಮನೆಗೆ ನೀರು ಸರಬರಾಜು ಯೋಜನೆಗೆ ಸಚಿವ ಪ್ರಭು ಚವ್ಹಾಣ್‌ ಶಂಕುಸ್ಥಾಪನೆ

ಯಾದಗಿರಿ (ನ.3) : ಜಲ ಜೀವನ ಮಿಷನ್‌ ಯೋಜನೆಯಡಿ ಒಟ್ಟು 18.5 ಲಕ್ಷ ರು.ಗಳ ವೆಚ್ಚದಲ್ಲಿ ಮನೆ ಮನೆಗೆ ನಲ್ಲಿ ನೀರು ಪೂರೈಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಾನುವಾರು ಸಂರಕ್ಷಣೆ: ಪುಣ್ಯಕೋಟಿ ದತ್ತು ಯೋಜನೆಗೆ ಜು. 28 ಚಾಲನೆ

Latest Videos

undefined

ತಾಲೂಕಿನ ಉಳ್ಳೆಸೂಗುರ ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ವತಿಯಿಂದ 2021-22ನೇ ಸಾಲಿನ ಜಲ ಜೀವನ ಮಿಷನ್‌ ಯೋಜನೆಯಡಿ ಮನೆ ಮನೆಗೆ ನಲ್ಲಿ ನೀರು ಸರಬರಾಜು ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸರಕಾರವು ಜನಸಾಮಾನ್ಯರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರ ಭಾಗವಾಗಿ ಉಳ್ಳೆಸೂಗುರು ಗ್ರಾಮದ 926 ಮನೆಗಳಿಗೆ ಜಲ ಜೀವನ ಮಿಷನ್‌ ಯೋಜನೆಯಡಿ ನಲ್ಲಿ ನೀರು ಸರಬರಾಜಿಗೆ ಯಾದಗಿರಿ ಶಾಸಕರ ಮುತುವರ್ಜಿಯಿಂದಾಗಿ 18.5 ಲಕ್ಷ ರು.ಗಳ ಮಂಜೂರಾಗಿದ್ದು, ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ಲೋಪವಾಗದಂತೆ ಕೆಲಸ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಗ್ರಾಮದಲ್ಲಿ ಪಶು ಆಸ್ಪತ್ರೆ ಹಾಗೂ ಪ್ರೌಢ ಶಾಲೆ ಸ್ಥಾಪನೆ ಕುರಿತಂತೆ ತಕ್ಷಣ ಸಂಬಂಧಪಟ್ಟಅಧಿಕಾರಿಗಳು ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದ ಸಚಿವರು, ಸರಕಾರದ ಮಟ್ಟದಲ್ಲಿ ಅವಶ್ಯಕ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಜಿಲ್ಲೆಯ ಅಭಿವೃದ್ಧಿಗೆ ಗಮನ ನೀಡಲಾಗುತ್ತಿದೆ. ಕಡೇಚೂರು ಕೈಗಾರಿಕೆ ಪ್ರದೇಶ ಅಭಿವೃದ್ಧಿ, ವಿವಿಧ ರಸ್ತೆ, ಕುಡಿಯುವ ನೀರು ಸೇರಿದಂತೆ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅತ್ಯುತ್ತಮ ಕಾರ್ಯ ಕೈಗೊಳ್ಳಬೇಕು. ಈ ಗ್ರಾಮದಲ್ಲಿನ ವಿಕಲಚೇತನರಿಗೆ ಹಾಗೂ ವಿವಿಧ ಮಾಸಾಶನಗಳನ್ನು ಸಕಾಲಕ್ಕೆ ಕಲ್ಪಿಸಬೇಕು. ರಾಜ್ಯದ ಆರು ಕೋಟಿ ಜನರ ಮಹಾನಾಯಕರಾಗಿದ್ದ ಪುನೀತ್‌ ರಾಜಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸರಕಾರದ ಮೂಲಕ ಪ್ರದಾನ ಮಾಡುತ್ತಿರುವುದು, ನಮಗೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರು ಹಾಗೂ ಎಂಎಲ್ಸಿ ಬಾಬುರಾವ್‌ ಚಿಂಚನಸೂರ್‌ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಜನರ ಏಳಿಗೆಗೆ ರಾಜ್ಯ ಸರಕಾರ 5 ಸಾವಿರ ಕೋಟಿ ರು.ಗಳ ಮಂಜೂರು ಮಾಡಿದೆ. ಇದಕ್ಕಾಗಿ ಸರಕಾರಕ್ಕೆ ಅಭಿನಂದಿಸುವುದಾಗಿ ತಿಳಿಸಿ, ತಾವು ಜನರ ಸೇವೆಗಾಗಿ ಸದಾ ಶ್ರಮಿಸುತ್ತಿದ್ದು, ಕಡೇಚೂರು ಭಾಗದ ಕೈಗಾರಿಕೆಗಳಲ್ಲಿ 1 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ನಿರಂತರ ಪ್ರಯತ್ನಿಸುವುದಾಗಿ ತಿಳಿಸಿದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ಸರಕಾರವು ಉಳ್ಳೆಸೂಗುರು ಗ್ರಾಪಂ ವ್ಯಾಪ್ತಿಯಲ್ಲಿ 13 ಕೋಟಿ ರು.ಗಳ ವಿವಿಧ ಕಾಮಗಾರಿ ಕೈಗೊಳ್ಳಲು ಅನುದಾನ ಒದಗಿಸಿದೆ. ಮಾನ್ಯ ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದಲು ಕೂಡ ಅನುದಾನ ಒದಗಿಸಲಾಗುತ್ತಿದೆ. ಈಗ ಈ ಗ್ರಾಮದ 926 ಮನೆಗಳು ಸೇರಿದಂತೆ ಬಾಕಿ ಮನೆಗಳಿಗೂ ನಲ್ಲಿ ನೀರು ಕಲ್ಪಿಸಲಾಗುವುದೆಂದು ತಿಳಿಸಿದರು.

ಹೂಡಿಕೆ ಸಮಾವೇಶಕ್ಕೆ ನಾಳೆ ಮೋದಿ ಚಾಲನೆ: ಬೆಂಗಳೂರಲ್ಲಿ 3 ದಿನ ಮೇಳ

ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ್‌, ಮಾಜಿ ಜಿಪಂ ಸದಸ್ಯ ದೇವರಾಜ ನಾಯಕ ಹಾಗೂ ಇತರರು ಮಾತನಾಡಿದರು. ಮುಖಂಡರಾದ ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ದೇವೇಂದ್ರನಾಥ ಕೆ. ನಾದ್‌, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರುದ್ರಗೌಡ ಪಾಟೀಲ್‌, ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌., ಜಿಪಂ ಸಿಇಓ ಅಮರೇಶ ನಾಯ್‌್ಕ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ, ಮುಖಂಡರಾದ ಶರಣಭೂಪಾಲ್‌ರೆಡ್ಡಿ, ಲಲಿತಾ ಅನಪೂರ, ಚಂದ್ರಶೇಖರ್‌ ಮಾಗನೂರ ಸೇರಿದಂತೆ ಇತರರಿದ್ದರು.

click me!