* 2.72 ಕೋಟಿ ರು. ಮೊತ್ತದ ಕಾಮಗಾರಿಗೆ ಶಂಕು
* 6 ತಿಂಗಳಲ್ಲಿ ಕೇಂದ್ರ ಕಾರ್ಯಾರಂಭ: ಅರಣ್ಯ ಇಲಾಖೆ
* 4 ರಣ ಹದ್ದುಗಳಿಂದ ಸಂತಾನೋತ್ಪತ್ತಿ
ಬೆಂಗಳೂರು(ನ.04): ನಗರದ ಹೊರ ವಲಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ(Bannerghatta Biological Park) ಉದ್ದ ಕೊಕ್ಕಿನ ರಣಹದ್ದುಗಳ (Long Build Vultures) ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣವುಳ್ಳ ಕೇಂದ್ರ ನಿರ್ಮಾಣಕ್ಕೆ ಅರಣ್ಯ ಇಲಾಖೆ ಇತ್ತೀಚೆಗೆ ಶಂಕುಸ್ಥಾಪನೆ ಮಾಡಿದ್ದು, ಕಾಮಗಾರಿ ಪ್ರಾರಂಭಿಸಿದೆ.
ರಾಜ್ಯದಲ್ಲಿ(Karnataka) ರಣ ಹದ್ದುಗಳ(Vulture) ಸಂತತಿ(Progeny) ಇಳಿಮುಖವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆ(Forest Department), ಇವುಗಳ ಸಂತತಿ ವೃದ್ಧಿಸಲು ಯೋಜನೆ ರೂಪಿಸಿತ್ತು. ಜೊತೆಗೆ, ರಾಮನಗರ(Ramanagara) ಜಿಲ್ಲೆ ರಾಮದೇವರ ಬೆಟ್ಟದ ಬಳಿ ರಣ ಹದ್ದುಗಳ ಸಂತಾನೋತ್ಪತ್ತಿ ಕೇಂದ್ರ(Breeding center) ನಿರ್ಮಾಣಕ್ಕೆ ನಿರ್ಧರಿಸಿತ್ತು. ಆದರೆ, ರಣಹದ್ದು ಸಂತಾನೋತ್ಪತ್ತಿಗೆ ಬೇಕಾದ ಕಟ್ಟಡ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗದ ಪರಿಣಾಮ ಬೆಂಗಳೂರಿನ(Bengaluru) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿತ್ತು.
ಇನ್ಮುಂದೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಮಾಡಿ..!
ರಣಹದ್ದುಗಳ ಸಂತಾನೋತ್ಪತ್ತಿ ಕೇಂದ್ರ ನಿರ್ಮಾಣಕ್ಕೆ 2019-20ನೇ ಸಾಲಿನ ಬಜೆಟ್‌ನಲ್ಲಿ(Budget) ಘೋಷಣೆ ಮಾಡಲಾಗಿತ್ತು. ಸಂತಾನೋತ್ಪತ್ತಿ ಕೇಂದ್ರ ಸ್ಥಾಪಿಸಲು ಮೂಲಸೌಕರ್ಯ ಅಭಿವೃದ್ಧಿ ಪಡಿಸಲು 2.10 ಕೋಟಿ ರು. ಮತ್ತು ನಿರ್ವಹಣೆಗೆ 62.62 ಲಕ್ಷ ರು. ಸೇರಿದಂತೆ ಒಟ್ಟು 2.72 ಕೋಟಿ ರು.ಗಳ ನಿಗದಿಗೊಳಿಸಿತ್ತು. ಇದೀಗ ಕಳೆದ 20 ದಿನಗಳ ಹಿಂದೆಯಷ್ಟೇ ಸಂತಾನೋತ್ಪತ್ತಿ ಕೇಂದ್ರಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ಆರು ತಿಂಗಳಲ್ಲಿ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಾ.ವಿಭೂ ಪ್ರಕಾಶ್ ಮಾರ್ಗದರ್ಶನ:
ಹರ್ಯಾಣದ(Haryana) ಪಿಂಜಾರೋ ಎಂಬಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಡಾ. ವಿಭೂ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಪ್ರಾರಂಭವಾಗಿದೆ. ಕೇವಲ ಎರಡು ರಣಹದ್ದುಗಳಿಂದ ಸಂತಾನೋತ್ಪತ್ತಿ ಆರಂಭಿಸಿದ್ದು, ಇದೀಗ ಅವುಗಳ ಸಂಖ್ಯೆ 280ಕ್ಕೆ ಹೆಚ್ಚಳವಾಗಿದೆ. ಹಾಗಾಗಿ ಡಾ. ವಿಭೂ ಅವರ ಮಾರ್ಗದರ್ಶನದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಸಂತಾನೋತ್ಪತ್ತಿ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸಫಾರಿ ವಾಹನ ಎಳೆದಾಡಿದ ಹುಲಿ: ವಿಡಿಯೋ ವೈರಲ್
4 ರಣಹದ್ದುಗಳಿಂದ ಸಂತಾನೋತ್ಪತ್ತಿ
ಬನ್ನೇರು ಘಟ್ಟರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಜೋಡಿ (ನಾಲ್ಕು ರಣಹದ್ದುಗಳು) ರಣಹದ್ದುಗಳಿಂದ ಸಂತಾನೋತ್ಪತ್ತಿಗೆ ವ್ಯವಸ್ಥೆ ಮಾಡಲಾಗುವುದು. ಈ ಪಕ್ಷಿಗಳು(Birds) ಕೇಂದ್ರದಿಂದ ಹೊರಕ್ಕೆ ಹೋಗದಂತೆ ಮೂಲ ಸೌಲಭ್ಯಗಳನ್ನು ನಿರ್ಮಾಣ ಮಾಡಲಾಗುವುದು. ಅವುಗಳಿಗೆ ಬೇಕಾದ ಆಹಾರ ಮತ್ತು ಅವುಗಳು ವಾಸಿಸಲು ಪೂರಕವಾದ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ರಮೇಶ್ ಕುಮಾರ್ ವಿವರಿಸಿದ್ದಾರೆ.
ಡಾ.ವಿಭೂ ಪ್ರಕಾಶ್ ಅವರ ಮಾರ್ಗದರ್ಶನದಂತೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರದ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಮುಂದಿನ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಕೇಂದ್ರ ಕಾರ್ಯಾರಂಭವಾಗಲಿದೆ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ರಮೇಶ್‌ಕುಮಾರ್ ತಿಳಿಸಿದ್ದಾರೆ.