ಬಾಲ್ಯದಿಂದಲೂ ಬಹಳ ಆ್ಯಕ್ಟಿವ್ ಆಗಿದ್ದ ಮುತ್ತಪ್ಪ, ಕಾಲೇಜು ದಿನಗಳಲ್ಲಿ ಬಹಳ ಟ್ಯಾಲೆಂಟೆಡ್ ಆಗಿದ್ದ, ಅನ್ಯಾಯ ಕಂಡ್ರೆ ಆಗ್ತಿರಲಿಲ್ಲ, ಅದನ್ನು ತೀವ್ರವಾಗಿ ವಿರೋಧಿಸುತಿದ್ದ ಎಂದು ಮುತ್ತಪ್ಪ ರೈ ಅವರನ್ನು ಬಹಳ ಹತ್ತಿರದಿಂದ ಬಲ್ಲ ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದ್ದಾರೆ.
ಉಡುಪಿ(ಮೇ 16): ಬಾಲ್ಯದಿಂದಲೂ ಬಹಳ ಆ್ಯಕ್ಟಿವ್ ಆಗಿದ್ದ ಮುತ್ತಪ್ಪ, ಕಾಲೇಜು ದಿನಗಳಲ್ಲಿ ಬಹಳ ಟ್ಯಾಲೆಂಟೆಡ್ ಆಗಿದ್ದ, ಅನ್ಯಾಯ ಕಂಡ್ರೆ ಆಗ್ತಿರಲಿಲ್ಲ, ಅದನ್ನು ತೀವ್ರವಾಗಿ ವಿರೋಧಿಸುತಿದ್ದ ಎಂದು ಮುತ್ತಪ್ಪ ರೈ ಅವರನ್ನು ಬಹಳ ಹತ್ತಿರದಿಂದ ಬಲ್ಲ ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದ್ದಾರೆ.
ನಾವಿಬ್ಬರೂ ಪುತ್ತೂರಿನ ಸೊರಕೆ ಎಂಬ ಗ್ರಾಮದವರು, ನಮ್ಮ ಮನೆ ಮೇಲ್ ಸೊರಕೆಯಲ್ಲಿದ್ದರೆ, ಅವರ ಮನೆ ಕೆಳ ಸೊರಕೆಯಲ್ಲಿತ್ತು. ನನಗಿಂತ ಒಂದೆರೆಡು ವರ್ಷ ದೊಡ್ಡವನಾಗಿದ್ದ ಮುತ್ತಪ್ಪ ಮತ್ತು ನಾವು ಹತ್ತಾರು ಮಂದಿ ಹುಡುಗರು ಒಟ್ಟಿಗೆ ಶಾಲೆಗೆ ಹೋಗುತಿದ್ದೆವು. ಅವರ ಇಡಿ ಕುಟುಂಬವೇ ನಮ್ಮ ಮನೆಗೆ ಬಹಳ ಆತ್ಮೀಯವಾಗಿತ್ತು. ಮುತ್ತಪ್ಪ ರೈ ತಂಗಿಯ ಮದುವೆಯಲ್ಲಿ ನಾವೆಲ್ಲ ಬಹಳ ಓಡಾಡಿದ್ದೆವು ಎಂದವರು ಹೇಳಿದ್ದಾರೆ.
ಆತ್ಮೀಯ ಸ್ನೇಹಿತ ಮುತ್ತಪ್ಪ ರೈ ಅವರನ್ನು ಮುನಿರತ್ನ ಸ್ಮರಿಸಿಕೊಂಡಿದ್ದು ಹೀಗೆ
ಮುತ್ತಪ್ಪ ರೈಗೆ ರಾಜಕೀಯದಲ್ಲಿ ಅಂತಹ ಆಸಕ್ತಿ ಇರಲಿಲ್ಲ, ಆದರೆ ತಾನು ಪ್ರಥಮ ಬಾರಿಗೆ ಚುನಾವಣೆಗೆ ನಿಂತಾಗ ಮುತ್ತಪ್ಪ ರೈ ಮತ್ತವರ ಗೆಳೆಯರು ತನ್ನ ಪರವಾಗಿ ಬಹಳ ಪ್ರಚಾರ ನಡೆಸಿದ್ದರು ಎಂದು ಸೊರಕೆ ನೆನಪಿಸಿಕೊಂಡಿದ್ದಾರೆ.
ಬಹಳ ಧಾರ್ಮಿಕ ವ್ಯಕ್ತಿಯಾಗಿದ್ದರು, ಆದ್ದರಿಂದಲೇ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೊಡುಗೆಗಳನ್ನು ನೀಡಿದ್ದಾರೆ, ಪುತ್ತೂರಿನಲ್ಲಿ ಬಹಳ ವಿಜೃಂಭಣೆಯಿಂದ ಕಂಬಳ ಅವರ ಉಸ್ತುವಾರಿಯಲ್ಲಿಯೇ ನಡೆಯುತ್ತಿತ್ತು. ಸಂಘಟನೆಯಲ್ಲಿ ಬಹಳ ಚತುರನಾಗಿದ್ದ, ಅವರು ಕಟ್ಟಿದ ಜಯಕರ್ನಾಟಕ ಸಂಘಟನೆ ಇಡೀ ರಾಜ್ಯದಲ್ಲಿಯೇ ಬೆಳೆದಿದೆ. ಅದರಲ್ಲಿ ಸಾವಿರಾರು ಕಾರ್ಯಕರ್ತರಿದ್ದಾರೆ ಎಂದರು. ಮೊನ್ನೆ ಅವರ ಆರೋಗ್ಯವನ್ನು ವಿಚಾರಿಸುವುದಕ್ಕೆ ಬೆಂಗಳೂರಿನಲ್ಲಿ ಅವರ ಮನೆಗೆ ಹೋಗಿದ್ದೆ, ಜೀವನದ ಕೊನೆಯ ಹಂತದಲ್ಲಿದ್ದ, ಅವನಿಗೆ ಅದು ಗೊತ್ತಿತ್ತು, ಮರುದಿನವೇ ಅವರ ಮಾತು ನಿಂತಿತಂತೆ.
ಮರೆಯಾದ ಮಾಜಿ ಡಾನ್; ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಜಗದೀಶ್ ಸಂತಾಪ
ಅವರನ್ನು ನಂಬಿಕೊಂಡಿದ್ದ ಸಾವಿರಾರು ಮಂದಿ ಕಾರ್ಯಕರ್ತರು, ಹಿತೈಷಿಗಳಿದ್ದಾರೆ, ಮನೆಯವರು ಸಂಬಂಧಿಕರು ಇದ್ದಾರೆ. ಅವರಿಗೆಲ್ಲಾ ಮುತ್ತಪ್ಪ ರೈ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ದೇವರು ಕೊಡಲಿ ಎಂದು ಸೊರಕೆ ಸಂತಾಪ ವ್ಯಕ್ತಪಡಿಸಿದರು.