ಬಾದಾಮಿ: ಜಮೀನು ಸ್ವಾಧೀನಕ್ಕೆ ಗ್ರಾಮಸ್ಥರ ವಿರೋಧ

By Kannadaprabha NewsFirst Published Feb 2, 2023, 7:30 PM IST
Highlights

ಹಲಕುರ್ಕಿ ಗ್ರಾಮದ ಜಮೀನು ಭೂಸ್ವಾಧೀನ ವಿರೋಧಿಸಿ; ರಸ್ತೆ ತಡೆದು ಗ್ರಾಮಸ್ಥರ ಪ್ರತಿಭಟನೆ; ಜನರ ಸಂಚಾರಕ್ಕೆ ತೊಂದರೆ, ಎಸಿ, ಎಡಿಸಿ ಭೇಟಿ

ಬಾದಾಮಿ(ಫೆ.02): ಸರ್ಕಾರದ ಭೂಸ್ವಾಧೀನ ಕ್ರಮಕ್ಕೆ ವಿರೋಧಿಸಿ ರಸ್ತೆ ತಡೆ ನಡೆಸಿ ತಾಲೂಕಿನ ಹಲಕುರ್ಕಿ ಗ್ರಾಮಸ್ಥರು ವಾಹನಗಳನ್ನು ತಡೆದು ಬುಧವಾರ ಪ್ರತಿಭಟನೆ ನಡೆಸಿದರು. ಬೆಳಿಗ್ಗೆಯಿಂದಲೇ ರೈತರು ಕೆರೂರ ಬಾದಾಮಿ ಬಾಗಲಕೋಟೆ ಬಾದಾಮಿ ಮಾರ್ಗದ ಸಂಚಾರ ಬಂದ್‌ ಮಾಡಿ ರೈತರು ರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆಗೆ ಮುಂದಾದರು. 

ಬೀಳಗಿ ಮತಕ್ಷೇತ್ರದ ಶಾಸಕ ಸಚಿವ ಮುರುಗೇಶ ನಿರಾಣಿ ನಡೆ ವಿರೋಧಿಸಿ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದರು. ಹಲಕುರ್ಕಿ ಕ್ರಾಸ್‌ ನಲ್ಲಿ ಮಾನವ ಸರಪಳಿ ನಿರ್ಮಿಸಿ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನೆಲೆ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡು, ಪ್ರಯಾಣಿಕರ ಪರದಾಡುವಂತಾಯಿತು. 

ಬಾಗಲಕೋಟೆ: ಅಂಗನವಾಡಿಗಳಿಗೆ ಬೇಕಿದೆ ಸ್ವಂತ ಕಟ್ಟಡ..!

ಸುತ್ತವರೆದು ಜನರ ಸಂಚಾರಕ್ಕೆ ಅಡಚನೆಯುಂಟಾಯಿತು. ಶಾಸಕ ಮುರುಗೇಶ ನಿರಾಣಿ ಸೋಲಿಸಿ, ಹಲಕುರ್ಕಿ ಗ್ರಾಮ ಉಳಿಸಿ ಎಂದು ರೈತರು ಘೋಷಣೆಗಳನ್ನು ಕೂಗಿ ಸರಕಾರ ಮತ್ತು ಜಿಲ್ಲಾಡಳಿತ ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾವು ಹಲಕುರ್ಕಿ ಗ್ರಾಮದ ರೈತರು 135 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು ಜಿಲ್ಲಾಧಿಕಾರಿಗಳು ನಮ್ಮ ಗ್ರಾಮಕ್ಕೆ ಭೇಟಿ ನೀಡಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ನಮ್ಮ ಜಮೀನು ಲಾಕ್‌ ಆಗಿರುವುದನ್ನು ತೆರವುಗೊಳಿಸಿಕೊಡಬೇಕು ಎಂದು ಗ್ರಾಮದ ರೈತರು ಪಟ್ಟು ಹಿಡಿದರು. 

ಈ ಸಂದರ್ಭದಲ್ಲಿ ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ರೀಮತಿ ಶ್ವೇತಾ ಬಿಡಿಕರ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಕೆಐಡಿಬಿ ಅಧಿಕಾರಿ ಮಮತಾ ಹೊಸಗೌಡ್ರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ರೈತರು ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಪ್ರಕಾಶ ನಾಯ್ಕರ, ರುದ್ರಗೌಡ ಪಾಟೀಲ, ಹನಮಂತ ಹಾಳಿಕೇರಿ, ಸೇರಿದಂತೆ ಗ್ರಾಮದ 70 ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು.

click me!