ಶೀಘ್ರದಲ್ಲೆ ರಾಜ್ಯದಲ್ಲಿ ಮತ್ತೊಂದು ಜಿಲ್ಲೆರಚನೆಯಾಗಲಿದೆ..? ಈ ಬಗ್ಗೆ ಸಚಿವರು ಮಾಹಿತಿ ನೀಡಿದ್ದಾರೆ
ಹೊಸಪೇಟೆ (ಸೆ.20) : ವಿಜಯನಗರ ಜಿಲ್ಲೆಯ ಕನಸು ಈಗಿನದ್ದಲ್ಲ, ಹಲವು ವಷÜರ್‍ಗಳಿಂದ ಹೋರಾಟಗಳು ನಡೆಯುತ್ತಾ ಬಂದಿದೆ. ಏಪ್ರಿಲ್ ತಿಂಗಳಲ್ಲೆ ವಿಜಯನಗರ ಜಿಲ್ಲೆ ಘೋಷಣೆಯಾಗಬೇಕಿತ್ತು. ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಕೆಲವೇ ತಿಂಗಳಲ್ಲಿ ಜಿಲ್ಲೆಯಾಗುವ ವಿಶ್ವಾಸವಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡೇ ಜಿಲ್ಲೆ ರಚನೆಯಾಗಲಿದ್ದು, ಭೌಗೋಳಿಕ ವ್ಯಾಪ್ತಿ ದೊಡ್ಡದಿರುವ ಕಾರಣ ಆಡಳಿತ ನಿರ್ವಹಣೆ ಕಷ್ಟವಾಗುತ್ತದೆ. ಕ್ಷೇತ್ರಗಳಿಗೆ ಅನುದಾನ ಪೂರೈಕೆ ಸೇರಿದಂತೆ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುವುದು ಆಡಳಿತ ವರ್ಗಕ್ಕೆ ಕಷ್ಟವಾಗಲಿದೆ. ಭೌಗೋಳಿಕ ವ್ಯಾಪ್ತಿ ಸಂಕುಚಿತಗೊಳಿಸಿದಾಗ ಆಡಳಿತ ಸುಧಾರಣೆ ಕ್ಷಿಪ್ರವಾಗಲಿದೆ ಎಂದರು.
undefined
ನನ್ನ ಸ್ಥಾನ ಡಿ.ಕೆ.ಶಿವಕುಮಾರ್ ತಪ್ಪಿಸಲ್ಲ : ಯೋಗೇಶ್ವರ್ ...
ಮಾರ್ಚಲ್ಲಿ ಈ ಕುರಿತು ಚರ್ಚೆ ನಡೆಸಿದ್ದು, ಏಪ್ರಿಲ್ ತಿಂಗಳಲ್ಲಿ ಘೋಷಣೆಯಾಗಬೇಕಿತ್ತು. ಕೊರೋನಾ ಕಾರಣದಿಂದಾಗಿ ಮುಂದೂಡಲಾಗಿದ್ದು ಶ್ರೀಪಂಪಾ ವಿರೂಪಾಕ್ಷೇಶ್ವರನ ಆಶೀರ್ವಾದದಿಂದ ಕೆಲವೇ ತಿಂಗಳಲ್ಲಿ ಜಿಲ್ಲೆ ಘೋಷಣೆಯಾಗುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.