
ವಿಜಯನಗರ/ಗದಗ: ಅನಾರೋಗ್ಯದಿಂದ ಬಳಲುತ್ತಿದ್ದ ತನಗೆ (ಸಹೋದರಿ) ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟು ಮರಳಿ ತೆರಳುವಾಗ ಬೈಕ್ ಅಪಘಾತದಲ್ಲಿ ಸಹೋದರ ಮೃತಪಟ್ಟ ಘಟನೆಯ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತವಾಗಿ ಮೃತಪಟ್ಟ ದಾರುಣ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಹೂವಿನಹಡಗಲಿ ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಮ್ಮ (48) ಮೃತ ಮಹಿಳೆ. ಇವರ ತಮ್ಮ ನಿಂಗಪ್ಪ ಇಲ್ಲಿನ ಜೆಸ್ಕಾಂ ಕಚೇರಿಯ ಲೈನ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಗದಗ: 101 ವರ್ಷ ಹಳೆಯ ಅಪರೂಪದ ಔಷಧಿ ಗುಣದ ಮಡ್ಡಿ ಮರ ಪತ್ತೆ; ಮಧುಮೇಹ ನಿಯಂತ್ರಣಕ್ಕೆ ರಾಮಬಾಣ
ಮಲ್ಲಮ್ಮ ಅನಾರೋಗ್ಯದಿಂದಾಗಿ ಕಳೆದೊಂದು ವಾರದಿಂದ ರಜೆ ಪಡೆದಿದ್ದರು. ಅವರನ್ನು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬೂದಿಹಾಳದಲ್ಲಿ ಬಿಟ್ಟು ಬರುವಾಗ ತಾಲೂಕಿನ ಕಾಗನೂರು ಬಳಿ ನಿಂಗಪ್ಪನ ಬೈಕ್‌ಗೆ ನಾಯಿಯೊಂದು ಅಡ್ಡ ಬಂದು ಬೈಕ್ ಅಪಘಾತವಾಗಿ ಅಸುನೀಗಿದರು. ಸಹೋದರ ಮೃತಪಟ್ಟ ಸುದ್ದಿ ತಿಳಿದ ಕೂಡಲೇ ಮಲ್ಲಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಬ್ಬರ ಅಂತ್ಯಕ್ರಿಯೆ ಬೂದಿಹಾಳದಲ್ಲಿ ಭಾನುವಾರ ನಡೆಯಿತು.
ಇದನ್ನೂ ಓದಿ: Gadag: ಅಪಾಯದಂಚಿನ ಮಾರ್ಗ: ಜೀವ ಪಣಕ್ಕಿಟ್ಟು ಸಾಗುವ 1 ಕಿ.ಮೀ ರಸ್ತೆ ಪಯಣ, ಆಟೋಗಷ್ಟೇ ದಾರಿ