ಇಂಗ್ಲಿಷ್ ಕಲಿಯಿರಿ ಆದರೆ ಇಂಗ್ಲಿಷರಂತೆ ವರ್ತಿಸಬೇಡಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

By Suvarna NewsFirst Published Feb 2, 2020, 12:36 PM IST
Highlights

ಅನೇಕ ನದಿಗಳು ಇದ್ದಾಗಲೂ ಕರ್ನಾಟಕ ನೀರಿನ ಕೊರತೆಯಿಂದ ಬಳಲುತ್ತಿದೆ| ನಾವು ಪರಿಸರ ಸ್ನೇಹಿಯಾಗಿ ಬದುಕಬೇಕು| ಯಾವುದೇ ದೇಶದಲ್ಲಿ ಕೆಲಸ ಮಾಡಿ, ಮಾತೃಭೂಮಿಯ ಬಗ್ಗೆ ಚಿಂತನೆಯಿರಲಿ| ಕೃಷಿಯನ್ನು ಲಾಭದಾಯಕ ವೃತ್ತಿಯಾಗಿ ಮಾಡಬೇಕಾದದ್ದು ಆಡಳಿತ ನಡೆಸುವವರ ಜವಾಬ್ದಾರಿ| 

ಹುಬ್ಬಳ್ಳಿ(ಫೆ.02): ಯುವಕರು ದೇಶದ ಭವಿಷ್ಯರಾಗಿದ್ದಾರೆ. ಶಿಕ್ಷಣ ಕೇವಲ ಪದವಿ ಪಡೆಯಲು, ಉದ್ಯೋಗ ಮಾಡಲು ಅಲ್ಲ,  ಶಿಕ್ಷಣ ಎನ್ನುವುದು ಜ್ಞಾನಾಭಿವೃದ್ಧಿಯಾಗಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ವಿಷಯಗಳನ್ನು ಅಳವಡಿಸಬೇಕು. ಬ್ರಿಟಿಷ್ ಪ್ರಭಾವಿತ ಇತಿಹಾಸವನ್ನು ನಾವು ಕಲಿಯುತ್ತಿದ್ದೇವೆ. ಬ್ರಿಟಿಷರು ನಮ್ಮನ್ನು ಆಳಿ, ಮೋಸ ಮಾಡಿದ್ದಾರೆ. ಇಂಗ್ಲಿಷ್ ಕಲಿಯಿರಿ ಇಂಗ್ಲಿಷರಂತೆ ವರ್ತಿಸಬೇಡಿ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. 

ಭಾನುವಾರ ನಗರದ ದೇಶಪಾಂಡೆ ಪ್ರತಿಷ್ಠಾನದ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ವೆಂಕಯ್ಯ ನಾಯ್ಡು ಉದ್ಘಾಟಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಳಿಕ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಅವರು, ದೇಶಪಾಂಡೆ ಪ್ರತಿಷ್ಠಾನದ ಕೌಶಲ್ಯಾಭಿವೃದ್ಧಿ ಕೇಂದ್ರ ಉದ್ಘಾಟಿಸಿದ್ದು ಸಂತೋಷ ತಂದಿದೆ. ಐತಿಹಾಸಿಕ ವ್ಯಕ್ತಿಗಳನ್ನು ಕನ್ನಡದಲ್ಲಿ ಸ್ಮರಿಸಿದ್ದಾರೆ.
ಅನೇಕ ನದಿಗಳು ಇದ್ದಾಗಲೂ ಕರ್ನಾಟಕ ನೀರಿನ ಕೊರತೆಯಿಂದ ಬಳಲುತ್ತಿದೆ. ನಾವು ಪರಿಸರ ಸ್ನೇಹಿಯಾಗಿ ಬದುಕಬೇಕು. ಯಾವುದೇ ದೇಶದಲ್ಲಿ ಕೆಲಸ ಮಾಡಿ, ಮಾತೃಭೂಮಿಯ ಬಗ್ಗೆ ಚಿಂತನೆಯಿರಲಿ. ಕೃಷಿಯನ್ನು ಲಾಭದಾಯಕ ವೃತ್ತಿಯಾಗಿ ಮಾಡಬೇಕಾದದ್ದು ಆಡಳಿತ ನಡೆಸುವವರ ಜವಾಬ್ದಾರಿಯಾಗಿದೆ. ತಾತ್ಕಾಲಿಕ ಕಾರ್ಯಕ್ರಮಗಳಿಂದ ರಾಜಕಾರಣಿಗಳು ಜನರನ್ನು ಆಕರ್ಷಿಸುತ್ತಾರೆ. ಸಾಲಮನ್ನಾ ರೈತರ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಉಚಿತ ಕೊಡುವುದಕ್ಕಿಂತ, ದುಡಿದು ತಿನ್ನುವುದನ್ನು ಕಲಿಸಬೇಕು. ಸರ್ಕಾರವೇ ಎಲ್ಲಾ ಮಾಡಬೇಕೆಂದು ಜನರು ಬಯಸಬಾರದು ಎಂದು ತಿಳಿಸಿದ್ದಾರೆ.

ಯುವಕರು ಕೌಶಲ್ಯ ಬೆಳೆಸಿಕೊಂಡರೆ ಅಂತರಾಷ್ಟ್ರೀಯ ಮಾನ್ಯತೆ ಸಿಗುತ್ತೆ. ಮೊದಲು ಮಾತೃ ಭಾಷೆ ಕಲಿಯಬೇಕು. ಕರ್ನಾಟಕದವರು ಮೊದಲು ಕನ್ನಡದಲ್ಲಿ ಮಾತನಾಡಬೇಕು. ವಿಧಾನಸಭೆ, ಕೋರ್ಟ್, ಆಡಳಿತದ ಎಲ್ಲಾ ವಿಭಾಗಗಳಲ್ಲಿ ಮಾತೃಭಾಷೆ ಬಳಕೆಯಾಗಬೇಕು ಎಂದಿದ್ದಾರೆ.

ಜಗತ್ತಿನಾದ್ಯಂತ ಆರ್ಥಿಕ‌ ಬಿಕ್ಕಟ್ಟು ಎದುರಾಗಿದೆ. ಭಾರತಕ್ಕೆ ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುವ ಎಲ್ಲಾ ಅವಕಾಶಗಳಿವೆ. ವಿರೋಧಿಸುವ ನೆಪದಲ್ಲಿ ಯಾರೂ ಹಿಂಸಾತ್ಮಕ ಕೃತ್ಯಗಳಿಗೆ ಇಳಿಯಬಾರದು. ದೇಶವೆಂದರೆ ಕೇವಲ ನರೇಂದ್ರ ಮೋದಿ, ರಾಜ್ಯವೆಂದರೆ ಕೇವಲ ಯಡಿಯೂರಪ್ಪನವರಲ್ಲ. ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ವಿರೋಧವಿರಲಿ, ಹೋರಾಟಗಳಿರಲಿ ಎಂದು ಕರೆ ನೀಡಿದ್ದಾರೆ. 

click me!