ಅತೃಪ್ತರಿಗೆ ಖಾತೆ : ಸುಳಿವು ನೀಡಿದ ನೂತನ ಸಚಿವ ವಿ. ಸೋಮಣ್ಣ

Published : Aug 22, 2019, 12:56 PM ISTUpdated : Aug 22, 2019, 01:03 PM IST
ಅತೃಪ್ತರಿಗೆ ಖಾತೆ : ಸುಳಿವು ನೀಡಿದ ನೂತನ ಸಚಿವ ವಿ. ಸೋಮಣ್ಣ

ಸಾರಾಂಶ

ಕರ್ನಾಟಕ ಸರ್ಕಾರದಲ್ಲಿ ನೂತನ ಸಚಿವರಾದ ವಿ. ಸೋಮಣ್ಣ ಹೊಸ ಸುಳಿವೊಂದನ್ನು ನೀಡಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಮತ್ತೊಮ್ಮೆ ವಿಸ್ತರಣೆ ನಡೆಯಲಿದ್ದು ಈ ಬಗ್ಗೆ ಹೊಸ ಮಾಹಿತಿ ನೀಡಿದ್ದಾರೆ. 

ಮೈಸೂರು [ಆ. 22]: ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ನೂತನ ಸಚಿವರಾದ ವಿ. ಸೋಮಣ್ಣ ರಾಜ್ಯ ರಾಜಕೀಯದ ಬಗ್ಗೆ ಹೊಸ ಸುಳಿವು ನೀಡಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಗಜಪಯಣಕ್ಕೆ ಚಾಲನೆ ನೀಡಿ ಮಾತನಾಡಿದ ಸೋಮಣ್ಣ ರಾಜ್ಯದಲ್ಲಿ ಈಗಾಗಲೆ ಸಚಿವ ಸಂಪುಟ ವಿಸ್ತರಣೆಯಾಗಿದೆ. 17 ಜನರಿಗೆ ಸಚಿವ ಸ್ಥಾನ ನೀಡಲಾಗಿದೆ. ಇನ್ನೂ 16 ಸ್ಥಾನಗಳು ಖಾಲಿ ಉಳಿದಿವೆ ಎಂದರು. 

ಮೊದಲ ಹಂತದಲ್ಲಿ ಸಂಪುಟ ವಿಸ್ತರಣೆ ಮುಗಿದಿದ್ದು, ಎರಡನೇ ಹಂತದ ಸಂಪುಟ ವಿಸ್ತರಣೆ ನಡೆಯಲಿದೆ. ಹೈ ಕಮಾಂಡ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅಳೆದು ತೂಗಿ  ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು. 

ಹೊಸ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಖಾತೆ?

ಅಲ್ಲದೇ ಇದೇ ವೇಳೆ ಹೊಸ ಸುಳಿವೊಂದನ್ನು ನೀಡಿದ್ದು, ಪರೋಕ್ಷವಾಗಿ ಅತೃಪ್ತರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ್ದಾರೆ.  

PREV
click me!

Recommended Stories

ಬಳ್ಳಾರಿ ಗಲಭೆ: ಶ್ರೀರಾಮುಲು, ಜನಾರ್ದನ ರೆಡ್ಡಿ ಸೇರಿ 10ಕ್ಕೂ ಹೆಚ್ಚು ಜನರ ವಿರುದ್ಧ FIR
ಗಾಲಿ ರೆಡ್ಡಿ ವಿರುದ್ಧ FIR ಆಗುವವರೆಗೂ ಸ್ಥಳ ಬಿಟ್ಟು ಹೋಗಲ್ಲ ಎಂದ ಭರತ್ ರೆಡ್ಡಿ: ಒಂದೇ ಸಮಯಕ್ಕೆ ಇಬ್ಬರು ನಾಯಕರ ಸುದ್ದಿಗೋಷ್ಠಿ