ಪಾಪು ಊರಿಂದಲೇ ಕೇಳಿ ಬಂತು ಪ್ರತ್ಯೇಕ ರಾಜ್ಯದ ಕೂಗು

By Web DeskFirst Published Sep 4, 2018, 4:17 PM IST
Highlights

ಕಳಸಾ ಬಂಡೂರಿ ಹೋರಾಟ, ಎಚ್ ಡಿ ಕುಮಾರಸ್ವಾಮಿ ರಾಮನಗರದಲ್ಲಿ ನೀಡಿದ್ದ ಹೇಳಿಕೆಯೊಂದರ ನಂತರ ಹುಟ್ಟಿಕೊಂಡಿದ್ದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ನಂತರ ತಣ್ಣಗಾಗಿತ್ತು. ಈಗ ಮತ್ತೆ ಕೇಳಿ ಬಂದಿದೆ.

ಹುಬ್ಬಳ್ಳಿ(ಸೆ.3) ಉತ್ತರ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯದ ಅನಿವಾರ್ಯವಾಗಿದ್ದು ಹೋರಾಟ ಹಮ್ಮಿಕೊಳ್ಳುವುದಾಗಿ ಉತ್ತರ ಕರ್ನಾಟಕ ಜನಶಕ್ತಿ ಸೇನಾದ ರಾಜ್ಯಾಧ್ಯಕ್ಷ ಎಸ್. ಶಂಕರಣ್ಣಾ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತ್ಯೇಕ ರಾಜ್ಯದ ಕುರಿತು ಇಂದಿಗೂ ಇಲ್ಲಿನ ಜನರಲ್ಲಿ ಗೊಂದಲ ಮೂಡಿದ್ದು, ಈಗಾಗಲೇ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದಿಂದ ಆಗುವ ಪ್ರಯೋಜನ ಕುರಿತು ಸಂಘಟನೆಯ ಕಾರ್ಯಕರ್ತರು ಮನವರಿಕೆ ಮಾಡಿಕೊಡುತ್ತಿದ್ದಾರೆ ಎಂದರು.

ಪ್ರತ್ಯೇಕ ರಾಜ್ಯ: ಯಾಕೆ ಬೇಕು? ಯಾಕೆ ಬೇಡ?

ಮುಂದಿನ ದಿನಗಳಲ್ಲಿ ಸಾರ್ವಜನಿಕರಿಂದ ಅಗತ್ಯ ಸಲಹೆ, ಸೂಚನೆ ಪಡೆದು ನ. ೧ರೊಳಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದ ಅವರು ನಮ್ಮ ರಾಜ್ಯದ ಕೆಲವು ಪ್ರಭಾವಿ ಸಂಘಟನೆಗಳು ಎಂಇಎಸ್ ನೊಂದಿಗೆ ಕೈಜೋಡಿಸಿವೆ ಎಂದು ಆರೋಪ ಮಾಡಿದರು.

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಹಾಗೂ ಕರ್ನಾಟಕ ರಾಜ್ಯದ ಪ್ರಭಾವಿ ಸಂಘಟನೆಯು ಎಂಇಎಸ್ ನೊಂದಿಗೆ ಕೈಜೋಡಿಸಿ ಜನರಿಗೆ ಮೋಸ ಮಾಡುತ್ತಿರುವ ಕುರಿತು ಅಲ್ಲಿನ ಜನರು ಹಲವು ಬಾರಿ ಕರೆ ಮಾಡಿ ತಿಳಿಸುತ್ತಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳುವುದರೊಂದಿಗೆ ರಾಜ್ಯದ ಮೇಲೆ ಪದೇ ಪದೇ ಕ್ಯಾತೆ ತಗೆಯುತ್ತಿರುವ ಎಂಇಎಸ್ ಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲು ನಮ್ಮ ಸೇನೆ ನಿರ್ಧರಿಸಿದೆ ಎಂದು ಎಚ್ಚರಿಸಿದರು.

ಈಗಾಗಲೇ ಉತ್ತರ ಕರ್ನಾಟಕದ 7-8 ಜಿಲ್ಲೆಗಳಲ್ಲಿ ಸಂಘಟನೆ ಕಾರ್ಯಚಟುವಟಿಕೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಸಂಘಟನೆ ಕಟ್ಟುವುದಾಗಿ ಇದೇ ವೇಳೆ ಹೇಳಿದರು.

 

click me!