ಹೆಗಡೆ ಕಾಡಿದ ಹಳೆ ಹೇಳಿಕೆ, ಕೋರ್ಟ್‌ಗೆ ಹಾಜರಾದ ಅನಂತ ಕುಮಾರ

By Suvarna NewsFirst Published Jan 3, 2020, 4:13 PM IST
Highlights

ನ್ಯಾಯಾಲಯಕ್ಕೆ ಹಾಜರಾದ ಅನಂತ್ ಕುಮಾರ್ ಹೆಗಡೆ| 2018ರಲ್ಲಿ ನೀಡಿದ್ದ ಕೋಮು ಸೌಹಾರ್ದ ಕದಡುವ ಹೇಳಿಕೆ ಪ್ರಕರಣ| 2018ರ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಹೇಳಿಕೆ

ಬೆಂಗಳೂರು(ಜು. 03)  ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈ ಎಂಬುದನ್ನು ಹಲವಾರು ಸಾರಿ ಸಾಬೀತು ಮಾಡಿದ್ದಾರೆ. ಅದು ಚುನಾವಣಾ  ಪ್ರಚಾರ ಇರಬಹುದು, ಪಕ್ಷದ ಕಾರ್ಯಕ್ರಮವೇ ಇರಬಹುದು. ಈಗ ಸೋಶಿಯಲ್ ಮೀಡಿಯಾದಲ್ಲಿಯೂ ಬೆಂಕಿ ಹೇಳಿಕೆ ನೀಡಿ ಸುದ್ದಿ ಮಾಡುತ್ತಾರೆ.

ಹಿಂದೂ ಫೈರ್ ಬ್ಯ್ರಾಂಡ್ ಎಂದು ಕರೆಸಿಕೊಳ್ಳುವ ಹೆಗಡೆ ಹಿಂದೊಮ್ಮೆ ನೀಡಿದ್ದ ಹೇಳಿಕೆಗೆ ಇದೀಗ ನ್ಯಾಯಾಲಯದ ಮೆಟ್ಟಿಲು ಏರಬೇಕಾಗಿ ಬಂದಿದೆ. ಕೋಮು ಸೌಹಾರ್ದ ಕದಡುವಂತಹ ಭಾಷಣ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು.

ಜನರ ಬಳಿಗೆ ಹೋದ ಹೆಗಡೆಗೆ ಫುಲ್ ಕ್ಲಾಸ್

2018ರ ವಿಧಾನಸಭೆ ಚುನಾವಣೆ ವೇಳೆ ಮಾಡಿದ್ದ ಭಾಷಣಕ್ಕೆ ಸಂಬಂಧಿಸಿದ ಆರೋಪ ಇದು. ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ್ ಪರ ಭಾಷಣ ಮಾಡುವ ವೇಳೆ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಭಟ್ಕಳದ ಸಹಾಯಕ ಆಯುಕ್ತರು  ಈ ಬಗ್ಗೆ ದೂರು ದಾಖಲಿಸಿದ್ದರು. ಇಂದು ಶಾಸಕರು ಹಾಗೂ ಸಂಸದರ ವಿಶೇಷ ನ್ಯಾಯಾಲಯಕ್ಕೆ ಹೆಗಡೆ ಹಾಜರಾದರು.  ವಿಚಾರಣೆಯನ್ನು ನ್ಯಾಯಾಲಯ ಜ.14ಕ್ಕೆ ಮುಂದೂಡಿತು.

ರಾಮನಗರದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದ ಡಿಕೆ ಶಿವಕುಮಾರ್ ವಿರುದ್ಧ,  ಮಹಾರಾಷ್ಟ್ರದಲ್ಲಿ ಮೂರು ದಿನ ಬಿಜೆಪಿ ಸರ್ಕಾರ ರಚನೆ ಮಾಡಿದ್ದ ಸಂದರ್ಭ ಫಡ್ನವೀಸ್ ಕೇಂದ್ರಕ್ಕೆ ಹಣ ವರ್ಗಾವಣೆ ಮಾಡಿದ್ದು ಬೊಕ್ಕಸಕ್ಕೆ ಕೋಟ್ಯಂತರ ರೂ. ಉಳಿಸಿದ್ದರು ಎಂಬ ಹೇಳಿಕೆ ಇತ್ತೀಚೆಗೆ ಸದ್ದು ಮಾಡಿತ್ತು.

click me!